Video; ಬಾಯಿ ತೆರೆದು ಮಲಗಿದ ಮಹಿಳೆಯ ಬಾಯಿಯಲ್ಲಿಯೇ ಸೇರಿತು ಹಾವು! ಡಾಕ್ಟರ್ ಹೊರಗೆ ತೆಗೆದರು ಈ ರೀತಿ….
ಕೆಲವು ಬಾರಿ ಎಂಥ ಘಟನೆಗಳು ನಮಗೆ ಕೇಳಲು ಸಿಗುತ್ತವೆ ಎಂದರೆ ಅವುಗಳನ್ನು ನಂಬುವುದೇ ಕಠಿಣವಾಗಿ ಬಿಡುತ್ತದೆ. ಈ ಅಪರೂಪದ ಘಟನೆಗಳನ್ನು ಕೇಳಿದಾಗ ಅಥವಾ ನೋಡಿದಾಗ ಕುಳಿತಲ್ಲಿಯೇ ಮೈಯೆಲ್ಲ ಸಣ್ಣಗೆ ಕಂಪಿಸುವದು. ಎಷ್ಟೋ ಬಾರಿ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಕ್ತಿಗಳ ಮೂಗಿನಲ್ಲಿ, ಕಿವಿಯಲ್ಲಿ ಸೇರಿದ ಹಾವನ್ನು ಡಾಕ್ಟರ್ಸ್ಗಳು ಹೊರಗೆ ತೆಗೆಯುವ ವಿಡಿಯೋವನ್ನು ನೋಡಿದ್ದೇವೆ. ಈಗ ಇಲ್ಲಿ ನೋಡಲಿರುವ ವಿಡಿಯೋದಲ್ಲಿ ಡಾಕ್ಟರ್ ಳು ಮಹಿಳೆಯ ಬಾಯಿಯಿಂದ ಸುಮಾರು ನಾಲ್ಕು ಅಡಿ ಉದ್ದದ ಹಾವನ್ನು ಹೊರ ತೆಗೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಾಳಿಯಂತೆ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದ್ದು ಕ್ಯಾಪ್ಷನ್ ನಲ್ಲಿ, ಮಹಿಳೆ ಗಾಢ ನಿದ್ರೆಯಲ್ಲಿದ್ದಾಗ ಸುಮಾರು ನಾಲ್ಕು ಅಡಿ ಉದ್ದದ ಹಾವು ಆಕೆಯ ಬಾಯಿಯಲ್ಲಿ ಸೇರಿತು. ಬಾಯಿಯ ಮುಖಾಂತರ ಒಳಗೆ ಸೇರಿದ ಹಾವನ್ನು ಡಾಕ್ಟರ್ ಹೇಗೆ ತೆಗೆದಿದ್ದಾರೆ ನೋಡಿ ಎಂದು ಬರೆದಿದ್ದಾರೆ. ಪ್ರಸ್ತುತ ಈ ಅಪರೂಪದ ವಿಡಿಯೋವನ್ನು ಇಲ್ಲಿಯವರೆಗೆ 1.8 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಮಹಿಳೆ ಗಾಢ ನಿದ್ರೆಯಲ್ಲಿದ್ದಾಗ ಹಾವು ಆಕೆಯ ಬಾಯಿಯಿಂದ ಹೊಟ್ಟೆಗೆ ಪ್ರವೇಶಿಸಿದೆ. ನಂತರ ಡಾಕ್ಟರ್ಸಗಳು ತುಂಬಾ ಪರಿಶ್ರಮ ಪಟ್ಟು ಮಹಿಳೆಯ ಬಾಯಿಯಿಂದ ಹಾವಿಗೆ ಮರಳಿ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವಿಗೆ ಹೊರತೆಗೆದ ನಂತರ ಡಾಕ್ಟರ್ ಸಹಿತ ಒಮ್ಮೆಲೇ ಹೆದರಿದ್ದಾಳೆ. ವಿಡಿಯೋದಲ್ಲಿ ಕಂಡುಬರುವ ಪ್ರಕಾರ ಮಹಿಳೆ ಸಂಪೂರ್ಣವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಕೆಯ ಬಾಯಿಯಲ್ಲಿ ಲೈಟ್ ಸ್ಟಿಕ್ ಹಾಕಿ ಅದರ ಸಹಾಯದಿಂದ ಹಾವಿಗೆ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಡಾಕ್ಟರ್ ಯಾವಾಗ ನಿಧಾನವಾಗಿ ಹಾವಿಗೆ ಹೊರಗೆಳೆದರು ಆಗ ಅದನ್ನು ನೋಡಿ ಸ್ವತಃ ಡಾಕ್ಟರ್ ಸಹಿತ ಹೆದರಿದ್ದಾರೆ.
ನೋಡಿ ಈ ಆಪರೇಷನ್ ನಲ್ಲಿ ಡಾಕ್ಟರ್ ಹೇಗೆ ಸಕ್ಸಸ್ ಆಗಿದ್ದಾರೆ….
Medics pull 4ft snake from woman’s mouth after it slithered down there while she slept. pic.twitter.com/oHaJShZT3R
— All Things Fascinating (@FascinateFlix) November 12, 2022
ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ @FascinateFlix ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. 11 ಸೆಕೆಂಡುಗಳ ಈ ವಿಡಿಯೋ ನ್ಯೂಸ್ ಬರೆಯುವವರೆಗೆ 1.8 ಮಿಲಿಯನ್ ವೀಕ್ಷಣೆಯನ್ನು ಪಡೆದಿತ್ತು.