ಜೋರಾಗಿ ಹೂಸು ಬಿಟ್ಟನೆಂದು 42 ಸಾವಿರ ರೂಪಾಯಿ ದಂಡ ಹಾಕಿದ ಪೊಲೀಸರು!

ಈ ಜಗತ್ತಿನಲ್ಲಿ ತುಂಬಾ ಚಿತ್ರ ವಿಚಿತ್ರ ಜನರಿದ್ದಾರೆ. ಅವರು ಯಾವಾಗ ಏನು ಮಾಡುತ್ತಾರೆ ಎಂಬುದು ಹೇಳಲಿಕ್ಕೆ ಸಾಧ್ಯವಿಲ್ಲ. ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ದಲ್ಲಿ ಇಂತಹುದೇ ಒಂದು ವಿಚಿತ್ರ ಮನುಷ್ಯ ಪೊಲೀಸರ ಕೈಗೆ ಸಿಕ್ಕಿ ಹಾಕಿ ಕೊಂಡಿದ್ದಾನೆ.

ಈ ಮನುಷ್ಯನಿಗೆ ಪೊಲೀಸರು ದಂಡ ಹಾಕಿದ ಚರ್ಚೆ ಜಗತ್ತಿನಾದ್ಯಂತ ನಡೆಯುತ್ತಿದೆ.

ಜೂನ್ 5 ರಂದು ವಿಯೆನ್ನಾದ ಗಾರ್ಡನ್ ದಲ್ಲಿ ಪೊಲೀಸ್ ಮತ್ತು ಪ್ರಸ್ತುತ ವ್ಯಕ್ತಿಯ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆಗ ಆ ವ್ಯಕ್ತಿ ರೋಷದಿಂದ ಎದ್ದು ನಿಂತು ಪೊಲೀಸನ ಕಡೆಗೆ ಬೆನ್ನು ಮಾಡಿ ಜೋರಾದ ಶಬ್ದದಲ್ಲಿ ಗ್ಯಾಸ್ ಬಿಟ್ಟನು. ಪೊಲೀಸರಿಗೆ ಇದು ಸ್ವಲ್ಪವೂ ಹಿಡಿಸಲಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಸರಕಾರಿ ಹುದ್ದೆಯಲ್ಲಿರುವ ವ್ಯಕ್ತಿಯ ಜೊತೆಗೆ ಹೇಸಿಗೆ ಬರುವಂತಹ ಅಶ್ಲೀಲ ಕೃತ್ಯ ಮಾಡಿದ್ದಕ್ಕಾಗಿ ಪೊಲೀಸರು ಆತನಿಗೆ ಹಣದ ಸ್ವರೂಪದಲ್ಲಿ ದಂಡ ಕಟ್ಟಲು ಹೇಳಿದ್ದಾರೆ. ಪೊಲೀಸರು ಆತನಿಗೆ 500 ಯುರೋ ಅಂದರೆ ಒಟ್ಟು 42 ಸಾವಿರ ದಂಡ ಹಾಕಿದ್ದಾರೆ.

ಆ ವ್ಯಕ್ತಿ ಇನ್ನೂವರೆಗೆ ದಂಡದ ಹಣವನ್ನು ಪಾವತಿಸಿಲ್ಲ. ಒಂದು ವೇಳೆ ಹಣ ದಂಡದ ಪಾವತಿಸದಿದ್ದರೆ 5 ದಿನಗಳವರೆಗೆ ಜೈಲಿನಲ್ಲಿ ಇರಬೇಕಾಗುತ್ತದೆ. ಪ್ರಸ್ತುತ ಘಟನೆಯ ಬಗ್ಗೆ ದೇಶದಲ್ಲೆಡೆ ಚರ್ಚೆಯಾಗುತ್ತಿದ್ದು ಅಲ್ಲಿಯ ಪೊಲೀಸರು ಒಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ನಲ್ಲಿ ‘ಯಾರಿಗೂ ತಪ್ಪಾಗಿ (ಬೈ ಮಿಸ್ಟೇಕ್) ಅಥವಾ ಪ್ರಮಾದದಿಂದಾಗಿ ದಂಡವನ್ನು ಕಟ್ಟಲಾಗಿಲ್ಲ’ ಎಂದು ಹೇಳಿದ್ದಾರೆ.