ಟ್ರೈನ್ ನಲ್ಲಿ ಟಾಯ್ಲೆಟ್ ಐಡಿಯಾ ಹೇಗೆ ಬಂತು? ಬ್ರಿಟಿಷರ ಕಣ್ಣು ತೆರೆಸಿದ ಭಾರತೀಯ; ಇಂಟರೆಸ್ಟಿಂಗ್ ಸ್ಟೋರಿ.

ಇಂಡಿಯನ್ ರೈಲ್ವೆ ಪ್ರಾರಂಭ 1853 ರಲ್ಲಿ ಶುರುವಾಯಿತು. 6 ಏಪ್ರಿಲ್ 1853 ರಂದು ಪ್ರವಾಸಿಗರಿಗಾಗಿ ಮೊದಲ ಟ್ರೈನ್ ಮುಂಬಯಿ -ಠಾಣೆ ಮಧ್ಯೆ ಚಲಿಸಿತು. ಇಲ್ಲಿಂದ ಸುಮಾರು 56 ವರ್ಷಗಳ ವರೆಗೆ ಟ್ರೈನ್ ನಲ್ಲಿ ಟಾಯ್ಲೆಟ್ ಸೌಲಭ್ಯವೇ ಇರಲಿಲ್ಲ. ಇಂದು ರೈಲ್ವೆಯಲ್ಲಿ ಪ್ರವಾಸ ಮಾಡುವವರು ತುಂಬಾ ಆರಾಮವಾಗಿ ಅದರಲ್ಲಿಯ ಟಾಯ್ಲೆಟ್ ನ ಉಪಯೋಗವನ್ನು ಮಾಡಿಕೊಳ್ಳುತ್ತಾರೆ. ಒಂದು ವೇಳೆ ನಾವು ಪ್ರವಾಸ ಮಾಡುವ ಟ್ರೈನಿನಲ್ಲಿ ಟಾಯ್ಲೆಟ್ ನ ಸೌಲಭ್ಯ ಇಲ್ಲದಿದ್ದರೆ ಹೇಗಾಗುತ್ತಿತ್ತು? ಸ್ವಲ್ಪ ಯೋಚಿಸಿದರೂ ಗೊತ್ತಾಗುತ್ತೆ ಎಷ್ಟೊಂದು ಸಮಸ್ಯೆಗಳು ಎದುರಾಗುತ್ತಿದ್ದವು. ಸ್ವಲ್ಪ ಯೋಚಿಸಿ ಆ ಸಮಯದಲ್ಲಿ ಪ್ರವಾಸಿಗರಿಗೆ ಎಂಥ ಸಮಸ್ಯೆಗಳು ಉದ್ಭವಿಸಿರಬಹುದು. ಇನ್ನೊಂದು ಗಮನದಲ್ಲಿಟ್ಟುಕೊಳ್ಳುವ ವಿಷಯವೇನೆಂದರೆ, ಆ ಸಮಯದಲ್ಲಿ ಟ್ರೈನಿನ ವೇಗ ಕೂಡ ತುಂಬಾ ಕಡಿಮೆಯಾಗಿರುತ್ತಿತ್ತು. ಆಗ ಒಬ್ಬ ಭಾರತೀಯ ಟಾಯ್ಲೆಟ್ ಸಂದರ್ಭದಲ್ಲಿ ಬ್ರಿಟಿಷರ ಕಣ್ಣು ತೆರೆಸಿದನು, ಹೇಗೆ ನೋಡಿ…

ಬ್ರಿಟಿಷರಿಗೆ 1919 ರಲ್ಲಿ ಭಾರತೀಯನೊಬ್ಬ ಬರೆದ ಒಂದು ಲೇಟರ್ ದೊರಕಿತು. ಆ ಲೆಟರ್ ನಂತರ ಬ್ರಿಟಿಷರು ಟ್ರೈನ್ ನಲ್ಲಿ ಟಾಯ್ಲೆಟ್ ಸೌಲಭ್ಯ ನೀಡುವ ಬಗ್ಗೆ ವಿಚಾರ ಮಾಡಿದರು.

ಲೆಟರ್ ಬರೆದವರು ಯಾರು?

ಓಖಿಲ್ ಚಂದ್ರ ಸೇನ್ ಹೆಸರಿನ ವ್ಯಕ್ತಿಯೊಬ್ಬರು ಬ್ರಿಟಿಷರಿಗೆ ನೀಡಿದ ಆ ಪತ್ರದಲ್ಲಿ ತಮ್ಮ ನೋವಿನ ಬಗ್ಗೆ ತೋಡಿಕೊಂಡಿದ್ದರು. ಅವರು ಈ ಪತ್ರವನ್ನು 2 ಜುಲೈ 1909ರಲ್ಲಿ ರೈಲ್ವೆಗಾಗಿ ಬರೆದಿದ್ದರು. ಅದರಲ್ಲಿ ಅವರು ಭಾರತೀಯ ರೈಲಿನಲ್ಲಿ ಟಾಯ್ಲೆಟ್ ವ್ಯವಸ್ಥೆ ಮಾಡುವ ಸಲುವಾಗಿ ಕಳಕಳಿಯಿಂದ ವಿನಂತಿಸಿದ್ದರು.

ಆ ಪತ್ರದಲ್ಲಿ ಏನಿತ್ತು ನೋಡಿ…

ಓಖಿಲ್ ಚಂದ್ರ ಸೇನ್ ಅವರು ಸಾಹಿಬ್ ಗಂಜ್ ನ ಉಪ ಅಧೀಕ್ಷಕರಿಗೆ ಬರೆದ ಪತ್ರದಲ್ಲಿ ಹೀಗೆ ನಮೂದಿಸಿದ್ದರು, ನಾನು ಟ್ರೈನಿನಲ್ಲಿ ಅಹಮದ್ಪುರ್ ಸ್ಟೇಷನ್ ವರೆಗೆ ಬಂದೆನು. ಆ ಮಧ್ಯೆ ನನ್ನ ಹೊಟ್ಟೆಯಲ್ಲಿ ನೋವು ಪ್ರಾರಂಭವಾಯಿತು. ಆ ಕಾರಣದಿಂದಾಗಿ ನನ್ನ ಹೊಟ್ಟೆ ಉಬ್ಬಿಕೊಂಡಿತು. ಕೊನೆಗೆ ಸೋತು ಟಾಯ್ಲೆಟ್ ಗಾಗಿ ಕೆಳಗಿಳಿದೆ. ಅಷ್ಟರಲ್ಲಿ ಗಾರ್ಡ್ ಸೀಟಿ ಊದಿ ಟ್ರೈನ್ ಮುಂದೆ ಸಾಗಿಸಿಯೇ ಬಿಟ್ಟನು. ಆ ಸಂದರ್ಭದಲ್ಲಿಯ ನನ್ನ ಪರಿಸ್ಥಿತಿ ಹೇಳುತೀರದಂತಾಗಿತ್ತು. ನಾನು ನನ್ನ ಧೋತರವನ್ನು ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ತಂಬಿಗೆ ಹಿಡಿದು ಪ್ಲಾಟ್ಫಾರ್ಮ್ ನಲ್ಲಿ ಓಡುತ್ತಾ ಬಂದು ಟ್ರೈನ್ ಹಿಡಿಯುವ ಸಂದರ್ಭದಲ್ಲಿ ಅಲ್ಲಿಯೇ ಕುಸಿದು ಬಿದ್ದೆನು. ಆಗ ನಾನು ತೊಟ್ಟ ಪಂಚೆಯೂ ಕಳಚಿ ಬಿತ್ತು. ಆ ಸಂದರ್ಭದಲ್ಲಿ ಪ್ಲಾಟ್ಫಾರ್ಮ್ ಮೇಲೆ ಇರುವ ಸ್ತ್ರೀ ಪುರುಷರ ಮುಂದೆ ನಾನು ಮುಜುಗರಕ್ಕೆ ಈಡಾದೆ. ಕೊನೆಗೆ ನನ್ನ ಟ್ರೈನು ಮಿಸ್ ಆಯ್ತು. ಅಂದು ಅಹಮದ್ಪುರ್ ಸ್ಟೇಷನ್ನಲ್ಲಿ ಕುಳಿತುಕೊಳ್ಳಬೇಕಾಯಿತು. ಟ್ರೈನಿನಲ್ಲಿ ಡ್ಯೂಟಿ ಮಾಡುವ ಗಾರ್ಡ್ ಟಾಯ್ಲೆಟ್ಗೆ ಹೋದ ವ್ಯಕ್ತಿ ಮರಳಿ ಬರುವವರೆಗೆ ಕೆಲವೇ ಕೆಲವು ನಿಮಿಷಗಳವರೆಗೂ ನಿಲ್ಲಲಿಲ್ಲ. ಪ್ರಸ್ತುತ ಟ್ರೈನಿನಲ್ಲಿ ಸೇವೆ ಸಲ್ಲಿಸುವ ಗಾರ್ಡ ಗೆ ನೀವು ಏನಾದರೂ ಶಿಕ್ಷೆ ನೀಡಿ ಎಂದು ನಿಮಗೆ ವಿನಂತಿಸುತ್ತೇನೆ, ಇಲ್ಲವಾದರೆ ಈ ಸುದ್ದಿಯನ್ನು ನಾನು ವೃತ್ತ ಪತ್ರಗಳಲ್ಲಿ ಹಾಕಿಸುತ್ತೇನೆ. ಮತ್ತು ಟ್ರೈನ್ ನಲ್ಲಿ ಪ್ರವಾಸಿಗರಿಗೆ ಟಾಯ್ಲೆಟ್ ನಂತಹ ಸಮಸ್ಯೆಯ ಪರಿಹಾರಕ್ಕಾಗಿ ಯೋಚಿಸಿ.

ನಿಮ್ಮ ವಿಶ್ವಾಸಿಗ
ಓಖಿಲ್ ಚಂದ್ರ ಸೇನ್