2+2= ಎಷ್ಟು? ಎಂದು ಕೇಳಿದ ಪ್ರಶ್ನೆಗೆ ಉತ್ತರವೇನು ಕೊಟ್ಟಿದ್ದಾನೆ ನೋಡಿ ಈ ಭೂಪ!

ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ತಮಾಷೆಯ ವಿಡಿಯೋಗಳು ಜನರನ್ನು ನಕ್ಕು ನಗಿಸುತ್ತವೆ. ಇಲ್ಲಿ ಎಲ್ಲ ರೀತಿಯ ಕಾಮಿಡಿ ಸೀನ್ಗಳು ನೋಡಲು ಸಿಗುತ್ತವೆ. ಒಂದೊಂದು ವಿಡಿಯೋ ಒಂದೊಂದು ರೀತಿಯ ಆನಂದವನ್ನು ನೀಡುತ್ತವೆ.

ಸದ್ಯ ಇಲ್ಲಿ ನೋಡುವ ವಿಡಿಯೋ ಒಂದು ತುಂಬಾ ವಿಶೇಷವಾದ ತಮಾಷೆಯಿಂದ ಕೂಡಿದೆ. ಪ್ರಸ್ತುತ ವಿಡಿಯೋದಲ್ಲಿ ಟೀಚರ್ ವಿದ್ಯಾರ್ಥಿಗೆ 2+2 = ಎಷ್ಟು? ಎಂದು ಸವಾಲ್ ಹಾಕಿದ್ದಾಳೆ. ಇದಕ್ಕೆ ಉತ್ತರ ನೀಡಲು ನಿಂತ ವಿದ್ಯಾರ್ಥಿ ತುಂಬಾ ಕನ್ಫ್ಯೂಜನ್ ನಲ್ಲಿರುವದು ಕಂಡುಬರುತ್ತದೆ. 2+2= ? ಇದರ ಉತ್ತರ ಏನಿರಬಹುದೆಂದು ತುಂಬಾ ತಲೆಕೆಡಿಸಿಕೊಳ್ಳುತ್ತಿರುವಾಗ ಆತನಿಗೆ ಸಹಾಯ ಮಾಡಲು ಗೆಳತಿಯೊಬ್ಬಳು ಮುಂದಾಗುತ್ತಾಳೆ. ಆಕೆ ಕುಳಿತಲ್ಲಿಂದಲೇ ಬೆರಳುಗಳ ಸೈನ್ ಮಾಡಿ ತೋರಿಸುತ್ತಾಳೆ. ಅದನ್ನು ಕಂಡ ಜಾಣ ವಿದ್ಯಾರ್ಥಿ ಸಂಕಲನದ ಉತ್ತರ ಎಷ್ಟು ಬರುತ್ತದೆ ಎಂದು ಬರೆಯುತ್ತಾನೆ ನೀವೇ ನೋಡಿ…

ನೋಡಿ ಈ ತಮಾಷೆಯ ವಿಡಿಯೋ.

 

View this post on Instagram

 

A post shared by Sougata Mondal (@sougata.mondal.1232)

ಪ್ರಸ್ತುತ ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ sougata.mondal.1232 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 10 ಮಿಲಿಯನ್ ವರೆಗೆ ವೀಕ್ಷಣೆ ಪಡೆದಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 3 ಲಕ್ಷ 92 ಸಾವಿರ ಜನರು ಲೈಕ್ ಮಾಡಿದ್ದಾರೆ.