Video; ಈ ಅಪರೂಪದ ಯುನಿಕ್ ಡಾನ್ಸ್ ಮುಂದೆ ದೊಡ್ಡ ದೊಡ್ಡ ಸ್ಟಾರ್ ಗಳೂ ಫೇಲ್; ಅಷ್ಟಕ್ಕೂ ಇದಕ್ಕೆ ಯಾವ ಡಾನ್ಸ್ ಎನ್ನಬೇಕು?

ಡಾನ್ಸ್ ಮಾಡುವುದೊಂದು ಚಿಕ್ಕ ಪುಟ್ಟ ಕೆಲಸವಲ್ಲ. ಇದಕ್ಕಾಗಿ ಇಡೀ ದೇಹವೇ ಫ್ಲೆಕ್ಸಿಬಲ್ ಇರಬೇಕಾಗಿರುವುದು ತುಂಬಾ ಅವಶ್ಯಕವಾಗಿದೆ. ವಿಡಿಯೋದಲ್ಲಿ ಕಾಣುವ ಈ ವ್ಯಕ್ತಿಯ ಅಪರೂಪದ ಡ್ಯಾನ್ಸ್ ನಿಜಕ್ಕೂ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಒಂದು ಸಮಯದಲ್ಲಿ ಜನರು ಈ ಡ್ಯಾನ್ಸ್ ನಂತಹ ವಿಷಯಗಳಿಗೆ ಅಷ್ಟೊಂದು ಬೆಲೆ ನೀಡುತ್ತಿರಲಿಲ್ಲ. ಆದರೆ ಸದ್ಯದ ಸಮಯದಲ್ಲಿ ಡಾನ್ಸ್, ಗಾಯನ ಮತ್ತು ಇನ್ನಿತರ ಕಲೆಗಳಿಗೆ ಸೋಶಿಯಲ್ ಮೀಡಿಯಾದಿಂದಾಗಿ ತುಂಬಾ ಕ್ರೇಜ್ ನಿರ್ಮಾಣವಾಗಿದೆ. ಇತ್ತೀಚೆಗೆ ಹದಿಹರೆಯದ ಯುವಕರಂತೂ ಬಿಡಿ ಚಿಕ್ಕ ಮಕ್ಕಳು, ಇಳಿವಯಸ್ಸಿನವರೂ ಸಹಿತ ತುಂಬಾ ಭರ್ಜರಿಯಾಗಿ ಡಾನ್ಸ್ ಮಾಡುತ್ತಿದ್ದಾರೆ. ಇಂಥ ಕಾರಣಗಳಿಂದಾಗಿಯೇ ಟಿವಿಯಲ್ಲಿಯೂ ಡಾನ್ಸಿಂಗ್ ಶೋಗಳು ತುಂಬಾ ಜನಪ್ರಿಯವಾಗುತ್ತಿವೆ. ಹೀಗಾಗಿ ದಿನನಿತ್ಯ ಕಲೆಗಾರರ ಟ್ಯಾಲೆಂಟ್ ಪ್ರದರ್ಶಿಸುವ ಅನೇಕ ಪ್ರಕಾರದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈಗ ವ್ಯಕ್ತಿಯೊಬ್ಬ ನೆಲದ ಮೇಲೆ ಮಲಗಿ ಲೀಲಾಜಾಲವಾಗಿ ಮಾಡುತ್ತಿರುವ ಡಾನ್ಸಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವ್ಯಕ್ತಿಯ ಡಾನ್ಸ್ ನೋಡಿದಾಗ ಅಚ್ಚರಿಯಾಗುವುದು ನಿಜ.

ಇಲ್ಲಿ ವ್ಯಕ್ತಿಯೊಬ್ಬ ಸುಮ್ಮನೆ ನಿಂತಂತೆ ಮಾಡಿ ಒಮ್ಮೆಲೆ ಕೆಳಗೆ ಬಿದ್ದ ಹಾಗೆ ನಟಿಸುತ್ತಾನೆ, ಕೆಳಗೆ ಬೀಳುತ್ತಲೇ ಶುರು ಮಾಡುತ್ತಾನೆ ಅದ್ಭುತ ಮೈ ನವಿರೇಳಿಸುವ ಸುಂದರ ಜಂಪಿಂಗ್ ಡಾನ್ಸ್. ಈ ನೃತ್ಯದಲ್ಲಿ ಆತ ಕೇವಲ ಬೆನ್ನು ಮತ್ತು ಅಂಗಾಲಿನ ಮೇಲೆಯೇ ಅದ್ಭುತವಾದ ನೃತ್ಯವನ್ನು ಮಾಡಲು ಶುರು ಮಾಡುತ್ತಾನೆ. ಆತ ಪ್ರಸ್ತುತ ಮಾಡುತ್ತಿರುವ ಈ ರೀತಿಯ ಡಾನ್ಸ್ ಇದಕ್ಕೂ ಮೊದಲು ಯಾರು ನೊಡಲಿಕ್ಕಿಲ್ಲ ಎಂದು ನನ್ನ ಅನಿಸಿಕೆ. ಆತ ಮಾಡಿದ ನೃತ್ಯದ ವರ್ಣನೆ ಶಬ್ದಗಳಲ್ಲಿ ಮಾಡುವುದಕ್ಕಿಂತ ಕಣ್ಣುಗಳಿಂದ ನೋಡುವುದೇ ಒಳ್ಳೆಯದು.

ಈ ಒಳ್ಳೆಯ ಕುಣಿತದ ವಿಡಿಯೋವನ್ನು ನೋಡಿ ಇನ್ಸ್ಟಾಗ್ರಾಮ್ ನಲ್ಲಿ

 

View this post on Instagram

 

A post shared by DANCE LOVE ® (@dancellove)

ನೋಡಿ ಈ ವಿಶೇಷ ಡಾನ್ಸ್ ನ್ನು dancellove ಹೆಸರಿನ ಐಡಿಯಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 20.6 ಮಿಲಿಯನ್ ವೀಕ್ಷಣೆ ಮತ್ತು 2.7 ಮಿಲಿಯನ್ ಲೈಕ್ಸ್ ಗಳನ್ನು ಪಡೆದಿದೆ.