Vairal Video; ಅಯ್ಯೋ ಪಾಪ! ತುಂಟ ಆನೆ ಮರಿಯೊಂದು ಖುಷಿಯಲ್ಲಿ ಸುತ್ತಾಡುವಾಗಲೇ ಪಾಪ ಏನಾಯಿತು ನೋಡಿ?

ಪ್ರಾಣಿಗಳಲ್ಲಿಯೇ ಆನೆಯ ಪುಟ್ಟ ಮರಿಗಳು ತುಂಬಾ ಚೂಟಿಯಾಗಿರುತ್ತದೆ. ಈ ಪುಟ್ಟ ಮರಿಗಳು ಮಾಡುವ ಪ್ರತಿಯೊಂದು ಆಕ್ಟಿವಿಟೀಸ್ ನೋಡುಗರಿಗೆ ತುಂಬಾ ಮನರಂಜನೆಯನ್ನು ನೀಡುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುವ ಆನೆಯ ಮರಿಗಳ ವಿಡಿಯೋಗಳು ನೋಡ ನೋಡುತ್ತಲೇ ವೈರಲ್ ಆಗುತ್ತವೆ. ಸದ್ಯ ಇದೇ ರೀತಿಯ ತುಂಬಾ ವಿಶೇಷ ವಿಡಿಯೋ ನಿಮಗಾಗಿ ತಂದಿದ್ದೇವೆ ನೋಡಿ.

ಈ ವಿಡಿಯೋದಲ್ಲಿ ಆನೆಯ ಪುಟ್ಟ ಮರಿಯೊಂದು ತುಂಬಾ ವೇಗದಲ್ಲಿ ನಡೆದಾಡುತ್ತಾ ಸುತ್ತಲೂ ನಿಂತವರಿಗೆ ಮನರಂಜನೆಯನ್ನು ನೀಡುತ್ತಿದೆ. ಈ ಆನೆಯ ಮರಿಯು ಯಾವುದೋ ಒಂದು ಆಫೀಸಿಗೆ ಹೋಗುವ ಹಾಗೆ ನಟನೆ ಮಾಡುತ್ತಿದೆ. ಆಗ ತುಂಬಾ ವೇಗವಾಗಿ ತನ್ನದೇ ಗುಂಗಿನಲ್ಲಿ ಹೋಗುತ್ತಿರುವಾಗಲೇ ಅದರ ಜೊತೆಗೆ ಎಡವಟ್ಟೊಂದು ನಡೆದು ಹೋಗುತ್ತದೆ. ಅಲ್ಲಿ ನಡೆದ ದೃಶ್ಯ ನೋಡುಗರಿಗೆ ಮೊದಲು ತುಂಬಾ ತಮಾಷೆ ಎನಿಸಿದರೂ ನಂತರ ಮಾತ್ರ ಮನ ಹಳಹಳಿಸುತ್ತದೆ..

ಗಡಿಬಿಡಿಯಲ್ಲಿ ಊಟ ಮಾಡುವಾಗ ಯಾವ ರೀತಿ ನಮ್ಮ ಹಲ್ಲುಗಳ ಮಧ್ಯದಲ್ಲಿ ನಾಲಿಗೆ ಸಿಕ್ಕು ನಾವು ಕಚ್ಚಿಕೊಳ್ಳುತ್ತೇವೆಯೋ ಅದೇ ರೀತಿಯ ಕೆಟ್ಟ ಮತ್ತು ನೋವಿನ ಅನುಭವ ಇಲ್ಲಿಯ ಆನೆಯ ಈ ಪುಟ್ಟಮರಿಗೆ ಆಗಿದೆ ಎನ್ನಬಹುದು. ಇಲ್ಲಿ ಆನೆಯ ಮರಿಯು ಬಿರಬಿರನೇ ಸುತ್ತಾಡುವಾಗ ಸೊಂಡಿಲು ಅದರ ಕಾಲ ಕೆಳಗೆ ಸಿಕ್ಕಿ ಬೀಳುತ್ತದೆ. ಆಗ ಸೊಂಡಿಲು ಸಿಕ್ಕು ನೋವಿನಿಂದ ಅನೆಯ ಮರಿಯು ಮರ ಮರನೆ ಮರುಗಿದೆ. ಸೊಂಡಿಲು ತನ್ನ ಕಾಲಿನ ಕೆಳಗೆ ಸಿಕ್ಕ ಕಾರಣದಿಂದಾಗಿ ಆನೆಯು ತುಂಬಾ ಕೆಟ್ಟದಾಗಿ ನೋವಿನಿಂದ ಕಿರುಚಿದೆ.

ನೋಡಿ ಈ ವಿಡಿಯೋ..

https://twitter.com/santoshsaagr/status/1592067480192974850?t=hjno_1zrXgNaBiiPzY8Vcw&s=19

ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾದ ಸೈಟ್ ಆದ ಟ್ವೀಟರ್ ನಲ್ಲಿ ಸಂತೋಷ್ ಸಾಗರ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದಾಗ ಗೊತ್ತಾಗುತ್ತದೆ ಆನೆಯ ಮರಿಗೆ ಎಷ್ಟೊಂದು ನೋವಾಗಿದೆ ಎಂದು.