ತಾಯಿ-ಮಗಳ ವಾತ್ಸಲ್ಯದ, ಕೋಟಿ ಕೋಟಿ ರೂಪಾಯಿಗೂ ಮೀರಿದ ಮನ ಗೆಲ್ಲುವ ನ್ಯಾಚುರಲ್ ವಿಡಿಯೋ ನೋಡಿ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅನೇಕ ವಿಡಿಯೋಗಳು ಇಂಟರ್ನೆಟ್ ಯೂಸರ್ಗಳ ಮನಸ್ಸುಗಳನ್ನು ಗೆಲ್ಲಲು ಯಶಸ್ವಿಯಾಗುತ್ತವೆ. ಅವುಗಳಲ್ಲಿ ಎಲ್ಲ ವಿಡಿಯೋಗಳು ಎಲ್ಲರಿಗೂ ಇಷ್ಟವಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಮಿತ್ರರೇ ಇಲ್ಲಿ ನೋಡುವ ಈ ವಿಡಿಯೋ ಮಾತ್ರ ಪ್ರತಿಯೊಬ್ಬರ ಮನಸ್ಸು ನೂರಕ್ಕೆ ನೂರು ಪ್ರತಿಶತ ಗೆದ್ದೇ ಗೆಲ್ಲುತ್ತದೆ ಎಂದು ಎದೆತಟ್ಟಿ ಹೇಳಬಲ್ಲೆ. ಕಾರಣ ಕೆಲವೇ ಸೆಕೆಂಡುಗಳ ಈ ನ್ಯಾಚುರಲ್ ವಿಡಿಯೋ ನೋಡುಗರ ಕೈಬೆರಳುಗಳಿಂದ ತನ್ನಂತನಾಗಿಯೇ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗುತ್ತದೆ.

ತಾಯಿ ಮಕ್ಕಳ ಸಂಬಂಧ ಜಗತ್ತಿನಲ್ಲಿ ತುಂಬಾ ಪವಿತ್ರವಾದ ಹಾಗೂ ಶ್ರೇಷ್ಠವಾದ ಸಂಬಂಧವಾಗಿದೆ. ಈ ಇಬ್ಬರ ಪ್ರೀತಿ ವಾತ್ಸಲ್ಯವನ್ನು ಶಬ್ದಗಳಲ್ಲಿ ವರ್ಣನೆ ಮಾಡುವುದು ಸಾಧ್ಯವೇ ಇಲ್ಲ ಎಂದು ಹೇಳಬಹುದು. ದೊಡ್ಡ ದೊಡ್ಡ ಸಾಹಿತಿಗಳು ಸಹ ಇದರ ವರ್ಣನೆಗೆ ಶಬ್ದಗಳು ಕಡಿಮೆ ಬೀಳುತ್ತವೆ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. ಪ್ರಸ್ತುತ ವಿಡಿಯೋ ಮಳೆಗಾಲದ ಸುಂದರ ಸೌಂದರ್ಯವನ್ನು ಹೊತ್ತು ತಂದಿದೆ. ಅದಕ್ಕಿಂತಲೂ ಇನ್ನೊಂದು ಸೌಂದರ್ಯ ಈ ವಿಡಿಯೋದಲ್ಲಿ ಅಡಗಿದೆ. ಅದೇನೆಂದರೆ, ತಾಯಿ ಮತ್ತು ಮಗಳ ಪ್ರೀತಿ, ವಾತ್ಸಲ್ಯ ಕಣ್ಣಿಗೆ ಗೋಚರಿಸುತ್ತಿರುವುದು. ಶಾಲೆಯಿಂದ ಮರಳಿ ಬರುವ ಮಗಳನ್ನು ತಾಯಿಯು ತುಂಬಾ ಪ್ರೀತಿಯಿಂದ ತನ್ನ ಹೆಗಲ ಮೇಲೆ ಹೊತ್ತುಕೊಂಡು ನಡೆಯುತ್ತಾ ಬರುವದನ್ನು ನೋಡಿ. ಇಲ್ಲಿ ಮಗಳು ಆಕಾಶದಲ್ಲಿ ಏಂಜಲ್ ಳಂತೆ ಮುಕ್ತವಾಗಿ ಸಂಚಾರ ಮಾಡುತ್ತಿರುವ ಆನಂದ, ಖುಷಿ ಸಮಾಧಾನದ ಅನುಭವ ಮಗಳ ಮುಖದಲ್ಲಿ ಕಂಡು ಬರುತ್ತಿದೆ. ತಾಯಿ ಮಳೆಯಿಂದ ತನ್ನ ಮಗಳನ್ನು ರಕ್ಷಿಸುವ ಸಲುವಾಗಿ ಕೈಯಲ್ಲಿ ಕೊಡೆ ಬೇರೆ ಹಿಡಿದಿದ್ದಾಳೆ. ಈ ವಾತ್ಸಲ್ಯದ ಅದ್ಬುತ ಸಮಾಗಮ ತುಂಬಿದ ದೃಶ್ಯವು ಯಾರನ್ನೇ ಆಗಲಿ ಮಂತ್ರಮುಗ್ಧಗೊಳಿಸುತ್ತದೆ. ನೋಡುಗರ ಮನಸ್ಸನ್ನು ತನ್ನ ಕಡೆಗೆ ಸರ್ರನೆ ಸೆಳೆದುಕೊಳ್ಳುತ್ತದೆ.

ವೀಡಿಯೋ ನೋಡಿ

ತಾಯಿ ಮಗಳ ಈ ವಾತ್ಸಲ್ಯದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ “ಅಫಿಶಿಯಲ್ ರಾಮನ್ ಜಿ ಅಂಡ್ ಪಿಟಿ ವಿಶಾಲ್” ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಕೋಟಿ ಕೋಟಿ ರೂಪಾಯಿಗೂ ಮೀರಿಸುವ ಈ ಮನಮೋಹಕವಾದ ವಾಸ್ತವಿಕ ವಾತ್ಸಲ್ಯದ ಚಿಲುಮೆಯನ್ನೇ ಹರಿಸುವ ವಿಡಿಯೋ ಇಲ್ಲಿಯವರೆಗೆ 3.4 ಮಿಲಿಯನ್ ವೀಕ್ಷಣೆ ಪಡೆದಿದ್ದಲ್ಲದೇ 8 ಲಕ್ಷಕ್ಕೂ ಮೀರಿ ಲೈಕ್ಸ್ಗಳನ್ನು ಪಡೆದುಕೊಂಡಿದೆ.