Viral Video: ಗಾಢನಿದ್ರೆಯಲ್ಲಿದ್ದ ನಾಯಿಯನ್ನು ತಮಾಷೆಗಾಗಿ ಎಬ್ಬಿಸಿದ ಘೇಂಡಾಮೃಗ, ಜೀವದ ಹಂಗನ್ನು ತೊರೆದು ಏಳುತ್ತ ಬೀಳುತ್ತಾ ಓಡಿ ಹೋದ ನಾಯಿ!!
ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇವುಗಳಲ್ಲಿ ಬಹಳಷ್ಟು ವಿಡಿಯೋಗಳು ಪ್ರಾಣಿಗಳ ವರ್ತನೆಗಳ ಬಗೆಗಿನ ಇದ್ದಿರುತ್ತವೆ. ಈ ಮುದ್ದಾದ ಹಾವಭಾವಗಳನ್ನ ನೋಡಿದ ಕೂಡಲೇ ನಗು ಬರುತ್ತದೆ ಅಲ್ಲದೆ ಕೆಲವು ವೀಡಿಯೋಗಳಲ್ಲಿ ಪ್ರಾಣಿಗಳು ಆಶ್ಚರ್ಯ ಪಡುವಂತ ಕೃತ್ಯ ಮಾಡುತ್ತವೆ. ಹೀಗಾಗಿ ಪ್ರಾಣಿಗಳ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತವೆ.
ಅಂತಹದ್ದೇ ಒಂದು ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಒಂದು ನಾಯಿ ಮತ್ತು ಘೇಂಡಾಮೃಗಗಳ ನುಡುವೆ ನಡೆದ ಘಟನೆಯದ್ದಾಗಿದೆ.
ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಒಂದು ನಾಯಿ ತನ್ನಷ್ಟಕ್ಕೆ ತಾನು ರಸ್ತೆಯೇ ಮೇಲೆ ಮಲಗಿಕೊಂಡು ವಿಶ್ರಾಂತಿ ಪಡೆಯುತ್ತಿರುತ್ತದೆ. ಅದೇ ವೇಳೆಗೆ ಆಕಸ್ಮಿಕವಾಗಿ ಒಂದು ಘೇಂಡಾಮೃಗ ಅದೇ ರಸ್ತೆಯ ಮೇಲಿಂದ ಹಾಯ್ದು ಹೋಗುತ್ತಿರುತ್ತದೆ, ನಾಯಿ ಮಲಗಿದ್ದನ್ನು ಕಂಡು ಅದಕ್ಕೆ ಎಬ್ಬಿಸಲು ಪ್ರಯತ್ನ ಮಾಡುತ್ತದೆ. ಕೆಲವು ಸಮಯದ ನಂತರ ನಾಯಿ ಎಚ್ಚೆತ್ತುಗೊಳ್ಳುತ್ತದೆ, ಎದ್ದು ನೋಡುವಷ್ಟರಲ್ಲಿ ತನ್ನ ಎದುರಿಗೆ ಮಹಾಕಾಯ ಘೇಂಡಾಮೃಗವನ್ನು ಕಂಡು ಗಾಬರಿಯಿಂದ ದಿಕ್ಕು ತಪ್ಪಿ ಅಲ್ಲಿಂದ ಓಡಿ ಹೋಗುತ್ತದೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು, ‘ಈ ಘಟನೆ ನಾಯಿಯ ಜೀವನದಲ್ಲಿಯೇ ಅತ್ಯಂತ ಭಯಂ#ಕರ ಘಟನೆ ಯಾಗಿರಬಹುದು’ ಎಂದು ಕಾಮೆಂಟ್ ಮಾಡಿದ್ದಾರೆ.
ವೀಡಿಯೋ ನೋಡಿ…
If you wanted any proof that the Rhinos are really gentle 😊😊 pic.twitter.com/6WhK5VMyqr
— Susanta Nanda IFS (@susantananda3) November 15, 2022
ಈ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಐಎಫ್ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ಶೇರ್ ಮಾಡಿದ್ದಾರೆ. ಶೇರ್ ಮಾಡುವಾಗ’ ಘೇಂಡಾಮೃಗ ದ ಸ್ವಭಾವ ಶಾಂತವಾಗಿರುತ್ತದೆ ಎನ್ನುದಕ್ಕೆ ಇದೆ ಉದಾಹರಣೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.