Video: ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿರುವ ಈ ಪುಟ್ಟ ಬಾಲಕನ ವೈರಲ್ ಆಗುತ್ತಿರುವ ವೀಡಿಯೋ ನೋಡಿ!!

ನಮ್ಮ ಜೀವನದಲ್ಲಿ ಶಿಕ್ಷಣ ಎಂಬುದು ತುಂಬಾ ಮಹತ್ವದ ಸಂಗತಿಯಾಗಿದೆ. ಮನೆಯೇ ಮೊದಲ ಪಾಠಶಾಲೆ ಅನ್ನೋ ಮೊಟ್ಟ ಮೊದಲು ನಾವು ಭಾಷೆ ಕಲಿಯುವದು ಮನೆಯಲ್ಲಿಯೇ. ತದನಂತರ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆದು ಶಿಕ್ಷಣದ ಅಡಿಪಾಯ ಹಾಕುತ್ತೇವೆ. ಪ್ರಾಥಮಿಕ ಶಾಲೆ ಅಂದರೆ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮರೆಯಲಾಗದ ಒಂದು ಹಂತವಾಗಿರುತ್ತದೆ. ಹಾಗಾಗಿ ಪ್ರಾಥಮಿಕ ಶಿಕ್ಷಣ ನಾವು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇವೆ. ನಾವು ದೊಡ್ಡವರಾದ ಮೇಲೆ ನಮ್ಮ ಜೀವನ ತುಂಬಾನೇ ಬದಲಾಗುತ್ತದೆ. ಆದರೆ ಚಿಕ್ಕವರಿದ್ದಾಗಿನ ಎಷ್ಟೋ ನೆನಪುಗಳು ನಮ್ಮನ್ನು ಸದಾ ಕಾಡುತ್ತಿರುತ್ತವೆ. ನಾವು ಜೀವನದಲ್ಲಿ ಮೊಟ್ಟ ಮೊದಲು ಶಿಕ್ಷಣ ಕಲಿಯುವಾಗ ನಮ್ಮ ತಾಯಿ ತಂದೆಯರು ತುಂಬಾನೇ ಕಷ್ಟ ಪಟ್ಟು ಓದಿಸುತ್ತಾರೆ ಆದರೆ ನಮಗೆ ಆ ಸಮಯದಲ್ಲಿ ಶಿಕ್ಷಣದ ಕುರಿತು ಅಷ್ಟೊಂದು ಜ್ಞಾನ ಇರುವುದಿಲ್ಲ. ಪ್ರಾಥಮಿಕ ಶಾಲೆ ಕಲಿಯುವ ಸಮಯದಲ್ಲಿ ಬುದ್ದಿ ಅಷ್ಟೊಂದು ವೃದ್ಧಿಯಾಗಿರುವುದಿಲ್ಲ. ಚಿಕ್ಕ ಮಕ್ಕಳು ದೇವರ ಸಮಾನ ಅನ್ನುವಂತೆ ನಾವು ಏನೇ ಮಾಡಿದರು ನಮ್ಮ ತಾಯಿ ತಂದೆಯರು ನಮ್ಮನ್ನು ಕ್ಷಮಿಸುತ್ತಾರೆ. ಆದರೆ ನಮ್ಮ ತಪ್ಪನ್ನು ಸರಿಪಡಿಸುವ ವ್ಯಕ್ತಿ ಅಥವಾ ಗುರುವೆಂದರೆ ಶಿಕ್ಷಕರು. ಗುರುಗಳು ನಮಗೆ ಉತ್ತಮ ದಾರಿ ಹಾಗೂ ಒಳ್ಳೆಯ ವರ್ತನೆಗಳ ಬಗ್ಗೆ ತಿಳಿಸಿ ಹೇಳುತ್ತಾರೆ.

ಪ್ರಸ್ತುತವಾಗಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಪುಟ್ಟ ಬಾಲಕನ ಪ್ರಾರ್ಥನಾ ಮಾಡುವ ಸಮಯದಲ್ಲಿನ ದೃಶ್ಯ ಈ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋ ನೋಡಿದರೆ ನಿಮಗೂ ಸಹ ನಿಮ್ಮ ಬಾಲ್ಯದ ನೆನಪು ಆಗದೆ ಇರಲಾರದು. ಸಾಮಾನ್ಯವಾಗಿ ನಾವು ಪ್ರತಿಯೊಬ್ಬರೂ ಮೊಟ್ಟಮೊದಲು ಶಾಲೆಗೆ ಹೋದಾಗ ಶಾಲೆಯಲ್ಲಿ ನಡೆಯುವ ಪ್ರಾರ್ಥನೆ, ರಾಷ್ಟ್ರಗೀತೆ, ಪ್ರತಿಜ್ಞೆ ಈ ಯಾವುದೇ ಸಂಗತಿಗಳು ನಮಗೆ ಬರುವುದಿಲ್ಲ. ಆಗ ಪ್ರಾರ್ಥನೆ ನಡೆಯುವಾಗ ನಾವು ಕೇವಲ ನಮ್ಮ ತುಟಿಗಳನ್ನ ಮಾತ್ರ ಅಲುಗಾಡ ಸುತ್ತಲಿರುತ್ತೇವೆ. ಆದರೆ ಬರ ಬರುತ್ತಾ ಅವುಗಳ ಅಭ್ಯಾಸವಾಗುತ್ತದೆ. ಪ್ರಸ್ತುತದಲ್ಲಿ ವಿಡಿಯೋದಲ್ಲಿ ಮಗು ಅದೇ ತರಹ ಮಾಡಿದೆ.

ಈ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಶಾಲೆಯಲ್ಲಿ ಪ್ರಾರ್ಥನೆ ನಡೆಯುತ್ತಿರುತ್ತದೆ ಪ್ರಾರ್ಥನೆಯಲ್ಲಿ ಓಂ ಅನ್ನು ಉಚ್ಚಾರ ಮಾಡುವುದಿರುತ್ತದೆ. ಆದರೆ ಈ ಪುಟ್ಟ ಬಾಲಕ ಓಂ ಅನ್ನು ಉಚ್ಚಾರವನ್ನು ಎಷ್ಟು ವಿಭಿನ್ನವಾಗಿ ಮಾಡುತ್ತಿರುತ್ತಾನೆ ಎಂದರೆ ಅದನ್ನು ನೀವು ನೋಡಿದರೆ ನಗಲಾರದೆ ಇರಲಾರಿರಿ. ಓಂ ಅನ್ನು ಪದವನ್ನು ಈತ ಓಂ ಅನ್ನುವುದರ ಬದಲಾಗಿ ಬೈಕ್ಗಳು ಹೇಗೆ ಧ್ವನಿ ಮಾಡುತ್ತವೆಯೋ ಅದೇ ರೀತಿಯಾಗಿ ಈತ ಉಚ್ಛಾರ ಮಾಡುತ್ತಾನೆ. ಇದನ್ನು ಕಂಡು ಆತನು ಹಿಂದುಗಡೆ ಕುಳಿತ ಮಗು ಸಹ ನಗುತ್ತದೆ. ಬಾಲಕನ ಶಾಲೆಯಲ್ಲಿಯ ಪ್ರಾರ್ಥನೆ ಮಾಡುವದನ್ನು ವಿಡಿಯೋ ಮಾಡಿ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಪ್ರಸ್ತುತವಾಗಿ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ಈ ವಿಡಿಯೋ ತುಂಬಾನೇ ಮೆಚ್ಚುಗೆ ಪಡುತ್ತಿದೆ. ಅಲ್ಲದೆ ಈ ವಿಡಿಯೋಗೆ ಬಹಳಷ್ಟು ಕಮೆಂಟ್ಗಳು ಸಹ ಬರುತ್ತಿವೆ. ಕಾಮೆಂಟ್ಗಳಲ್ಲಿ ಬಾಲಕನ ಪ್ರಾರ್ಥನೆ ಮಾಡುವ ವಿಧಾನದ ಬಗ್ಗೆ ತುಂಬಾ ಹೊಗಳುತ್ತಿದ್ದಾರೆ ಅಲ್ಲದೆ ‘ಇದನ್ನು ಕಂಡು ನಮಗೆ ಬಾಲ್ಯದ ನೆನಪಾಗಿದೆ’ ಎಂದು ಸಹ ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ವೀಡಿಯೋ ನೋಡಿ

 

View this post on Instagram

 

A post shared by Simple boy_ (@mojeshkilaka)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ @mojeshkilak ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ನಾಲ್ಕು ಲಕ್ಷಕ್ಕಿಂತ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ.