ಮದುವೆಯ ಮಧ್ಯ ಗೆಳೆಯ ಬಂದು ವರನ ಕಿವಿಯಲ್ಲೇನು ಉಸುರಿದನು ಗೊತ್ತಿಲ್ಲ, ಸೆಟೆದ ಹೆಣದಂತೆ ವಧುವಿನ ಮಂದೆಯೇ ಬಿದ್ದ ವರ..

ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಅನೇಕ ವಿಚಿತ್ರ ವಿಡಿಯೋಗಳು ವೈರಲಾಗುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ತುಂಬಾ ರೋಚಕವಾಗಿರುತ್ತದೆ. ಮದುವೆಯ ವಿಡಿಯೋಗಳನ್ನಂತೂ ನೆಟ್ಟಿಗರು ತುಂಬಾ ಹವ್ಯಾಸದಿಂದ ನೋಡುತ್ತಾರೆ. ಈ ವಿಡಿಯೋಗಳು ಕೆಲವೇ ಕ್ಷಣಗಳಲ್ಲಿ ವೈರಲ್ ಆಗುವುದುಂಟು. ಸದ್ಯ ಇದೇ ರೀತಿಯ ಒಂದು ವಿಡಿಯೋ ನೀವು ನೋಡಲಿದ್ದೀರಿ.

ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯ ತುಂಬಾ ವಿಚಿತ್ರವಾಗಿದೆ. ಸ್ಟೇಜ್ ಮೇಲೆ ವಧು ಮತ್ತು ವರ ಇಬ್ಬರ ಮದುವೆ ಕಾರ್ಯಕ್ರಮಗಳು ತುಂಬಾ ವಿಜೃಂಭಣೆಯಿಂದ ನಡೆದಿರುವಾಗಲೇ ಒಂದು ವಿಚಿತ್ರ ಸನ್ನಿವೇಶ ನಡೆದು ಹೋಗುತ್ತದೆ. ವಧು ಕೈಯಲ್ಲಿ ಹೂಮಾಲೆಯನ್ನು ಹಿಡಿದು ತನ್ನ ಭಾವಿಪತಿಯ ಕೊರಳಲ್ಲಿ ಹಾಕಬೇಕು ಎನ್ನುವಷ್ಟರಲ್ಲಿ ವರನ ಮಿತ್ರನೊಬ್ಬ ಸ್ಟೇಜ್ ಮೇಲೆ ಎಂಟ್ರಿ ಮಾಡುತ್ತಾನೆ. ವರನ ಹತ್ತಿರ ಮಿತ್ರ ಬರುತ್ತಲೇ ಆತನ ಕಿವಿಯಲ್ಲಿ ಏನೋ ಒಂದು ಮಾತನ್ನು ಹೇಳುತ್ತಾನೆ. ಆ ಮಾತನ್ನು ಕೇಳಿದ ತಕ್ಷಣ ವರ ಸೆಟೆದ ಹಣದಂತೆ ಅಲ್ಲಿಯೇ ಸ್ಟೇಜ್ ಮೇಲೆ ಬೀಳುತ್ತಾನೆ. ಪ್ರಸ್ತುತ ದೃಶ್ಯವನ್ನು ಅಲ್ಲಿಯೇ ಶೂಟ್ ಮಾಡುತ್ತಿದ್ದ ಕ್ಯಾಮೆರಾ ಮ್ಯಾನ್ ವರನ ಅವಸ್ಥೆಯನ್ನು ನೋಡಿ ಬೆಚ್ಚಿ ಬೀಳುತ್ತಾನೆ. ಹಾಗೂ ತಕ್ಷಣ ವರನನ್ನು ಕೆಳಗೆ ಬೀಳದಂತೆ ಹಿಡಿಯಲು ಪ್ರಯತ್ನಿಸುತ್ತಾನೆ. ಆದರೆ ಆ ವರ ಮಾತ್ರ ತಕ್ಷಣ ಅಲ್ಲಿಯೇ ಬೀಳುತ್ತಾನೆ. ಈ ಸಂದರ್ಭದಲ್ಲಿ ಕಂಡುಬರುವ ಮುಖ್ಯ ಪ್ರಶ್ನೆ ಏನೆಂದರೆ, ವರನ ಮಿತ್ರ ಅದ್ಯಾವ ಮಾತು ವರನ ಕಿವಿಯಲ್ಲಿ ಹೇಳಿದನು ಎಂಬುದು ಮಾತ್ರ ತಿಳಿದಿಲ್ಲ. ಮಿತ್ರನ ಮಾತು ಕೇಳಿದ ನಂತರ ವರ ಕ್ಷಣದಲ್ಲಿ ಸ್ಟೇಜ್ ಮೇಲೆ ಎಲ್ಲರ ಮುಂದೆ ಸೆಟೆದು ಬಿದ್ದನು. ಮಿತ್ರರೇ ಇಲ್ಲಿ ನಮಗೆ ಗೊತ್ತಿರದ ವಿಷಯ ನಿಮಗೇನಾದರೂ ಗೊತ್ತಾದರೆ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿ.

ವೀಡಿಯೋ ನೋಡಿ

 

View this post on Instagram

 

A post shared by love mom dad (@bhakt_of_mahadv_147)

ಪ್ರಸ್ತುತ ಈ ವಿಚಿತ್ರ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಭಕ್ತ ಆಫ್ ಮಹಾದೇವ 147 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು, ಈ ವಿಡಿಯೋ ಇಲ್ಲಿಯವರೆಗೆ 6 ಲಕ್ಷ 84 ಸಾವಿರ ಜನರು ವೀಕ್ಷಿಸಿದ್ದು ಸುಮಾರು ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ. ವಿಡಿಯೋದ ಕ್ಯಾಪ್ಷನ್ ನಲ್ಲಿ ವರನ ಗರ್ಲ್ ಫ್ರೆಂಡ್ ಇನ್ನಿಲ್ಲ ಎಂದು ನಮೂದಿಸಲಾಗಿದೆ. ಬಹುಶಃ ಇದೇ ಕಾರಣದಿಂದ ವರ ಶಾಕ್ ಆಗಿ ಸೆಟೆದ ಹೆಣದಂತೆ ಸ್ಟೇಜ್ ಮೇಲೆ ಬೀಳುತ್ತಾನೆ.