ಸ್ಟೇಜ್ ಮೇಲೆ ಡಾನ್ಸ್ ಮಾಡುತ್ತಲೇ ಹಠಾತ್ ಕಣ್ಮರೆಯಾದ ಯುವತಿ; ಒಮ್ಮೆ ನೋಡಿ ಈ ಯುವತಿಯ ಸಖತ್ ಪರ್ಫಾರ್ಮೆನ್ಸ್…

ಕಲೆ ಇದು ಹಣ ಕೊಟ್ಟು ಖರೀದಿಸುವ ವಸ್ತು ಅಲ್ಲ. ಅದು ರಕ್ತದಲ್ಲಿಯೇ ಹುಟ್ಟಿ ಬಂದಿರುತ್ತದೆ. ಅದರ ಮೇಲೆ ಯಾರದ್ದೂ ಬಲವಂತವಾದ ಅಧಿಕಾರ ನಡೆಯುವುದಿಲ್ಲ. ತಾನಾಗಿಯೇ ದೇಹದಲ್ಲಿ ಬೆರೆತುಕೊಂಡಿರುತ್ತವೆ. ಆದರೆ ಕೆಲವೊಮ್ಮೆ ಕೆಲವರು ಇದರ ಮೇಲೆ ತನ್ನದೇ ಅಧಿಕಾರ ಸ್ಥಾಪಿಸಲು ಹೋದಾಗ ಅಲ್ಲಿ ತೀರಾ ವಿಚಿತ್ರವಾದ ಸನ್ನಿವೇಶ ಕ್ರಿಯೇಟ್ ಆಗಿ ಬಿಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಡಾನ್ಸ್ ಗಳ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲವು ತಮಾಷೆಯ ದೃಶ್ಯಗಳು ಸಹ ಕೂಡಿರುತ್ತವೆ. ಜನರು ಇಂಥ ವಿಡಿಯೋಗಳನ್ನು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಇದೇ ರೀತಿಯ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಹರಿದಾಡುತ್ತಿರುವ ಡಾನ್ಸಿನ್ ವಿಡಿಯೋ ಒಂದು ನಿಮಗೆ ಫುಲ್ ಫ್ರೆಶ್ ಮಾಡಬಹುದು.

ಪ್ರಸ್ತುತ ವಿಡಿಯೋದಲ್ಲಿ ಕುಣಿಯುತ್ತಿರುವ ಯುವತಿಯ ಈ ರೋಚಕ ಡಾನ್ಸಿಗೆ ನೀವೇ ಒಂದು ಹೆಸರು ಕೊಡಿ. ಕಾರಣ ಇದಕ್ಕೆ ಯಾವ ಹೆಸರು ಕೊಡಬೇಕೆಂದು ನಮಗೆ ಹೊಳೆಯುತ್ತಿಲ್ಲ. ಈ ಯುವತಿ ಮಾಡುತ್ತಿರುವ ಡಾನ್ಸ್ ದೃಶ್ಯ ನೋಡಿದರೆ ಆಕೆಯ ಜೊತೆಗೆ ನಮಗೂ ತಲೆ ಸುತ್ತಿ ಬರುತ್ತದೆ. ಸ್ಟೇಜ್ ಮೇಲೆ ಮಾಡುತ್ತಿರುವ ಯುವತಿ ತನ್ನ ಡಾನ್ಸ್ ನಲ್ಲಿ ತಲೆಯನ್ನು ಒಂದೇ ಸವನೆ ಗರಗರನೇ ತಿರುಗಿಸುತ್ತಿದ್ದಾಳೆ. ತಲೆ ತಿರುಗಿಸಿ ಮುಂದಿನ ಸ್ಟೆಪ್ ಬದಲಾಯಿಸಲು ಅನುವಾಗುತ್ತಿದ್ದಂತೆಯೇ ಆಕೆಯ ಬ್ಯಾಲೆನ್ಸ್ ಪೂರಾ ಬಿಗಡಾಯಿಸಿ ಬಿಡುತ್ತದೆ ಮತ್ತು ಕ್ಷಣದಲ್ಲಿ ಯುವತಿ ಸ್ಪೀಕರ್ ಜೊತೆಗೆ ಸ್ಟೇಜ್ ಕೆಳಗೆ ಧಡಂ ಅಂತ ಬಿದ್ದು ಬಿಡುತ್ತಾಳೆ.

ವೀಡಿಯೋ ನೋಡಿ

 

View this post on Instagram

 

A post shared by love mom dad (@bhakt_of_mahadv_147)

ಪ್ರಸ್ತುತ ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಭಕ್ತ ಆಫ್ ಮಹಾದೇವ್ ಹೆಸರಿನ ಇಡಿಯಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಮಿಲಿಯನ್ ಗಟ್ಟಲೆ ಜನರು ನೋಡಿ ಆನಂದಿಸಿದ್ದಾರೆ. ನೀವು ಒಮ್ಮೆ ನೋಡಿ ಆನಂದಿಸಿ. ಜೊತೆಗೆ ಈ ವೀಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ಮೆಚ್ಚಿದ್ದಾರೆ.