‘ಈ’ ಒಂದು ಘಟನೆಯ ನಂತರ ಯುವರಾಜ್ ಸಿಂಗ್ 15 ದಿವಸಗಳವರೆಗೆ ಸರಿಯಾಗಿ ಮಲಗಿರಲಿಲ್ಲ.

ಭಾರತೀಯ ಕ್ರಿಕೆಟ್ ರಸಿಕಗರಿಗಾಗಿ ಜೂನ್ 10 ನಿರಾಶಾದಾಯಕ ದಿವಸವೆವೆಂದೇ ಹೇಳಬಹುದು. ಕಾರಣ ಇದೇ ದಿನ 2019 ರಂದು ಭಾರತದ ‘ಸಿಕ್ಸರ್ ಕಿಂಗ್’ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದರು. ಅಂತರರಾಷ್ಟ್ರೀಯ ಕ್ರಿಕೇಟ್ ನಿಂದ ನಿವೃತ್ತಿಯಾಗಿದ್ದರೂ ಸಹಿತ ಟಿ-ಟ್ವೆಂಟಿ ಲೀಗ್ ಸ್ಪರ್ಧೆಗಳಲ್ಲಿ ಆಡುತ್ತಲೇ ಇರುವರು ಎಂದು ಹೇಳಿದ್ದರು. ನಿವೃತ್ತಿಯಾಗುವ ಸಂದರ್ಭದಲ್ಲಿ ಭಾವುಕರಾದ ಯುವರಾಜ್ ಕ್ರಿಕೆಟ್ ಮೈದಾನದಲ್ಲಿ ಮಾತ್ರ ಬೌಲರ್ ಗಳಿಗೆ ದುಃಸ್ವಪ್ನರಾಗಿದ್ದರು. ಅವರ ಬ್ಯಾಟಿಂಗ್ ಮತ್ತು ಅವರು ಆಡುತ್ತಿದ್ದ ಶಾಟ್ಸ್ ಗಳಿಂದ ಯುವರಾಜ್ ಅವರು ಎಷ್ಟೋ ಆಟಗಾರರ ನಿದ್ದೆ ಕೆಡಿಸಿದ್ದು ನಿಜ. ಆದರೆ ಒಂದು ಸಂದರ್ಶನದಲ್ಲಿ ಯುವರಾಜ್ ಅವರು ತಮ್ಮ ನಿದ್ದೆಯನ್ನೇ ಕೆಡಿಸಿದ ಘಟನೆಯ ಬಗ್ಗೆ ಹೇಳಿದ್ದಾರೆ.

ನಾವು ಲಂಡನ್ ನ ಓವಲ್ ಮೈದಾನದಲ್ಲಿ ಆಡುತ್ತಿದ್ದೆವು.ರಾಹುಲ್ ದ್ರಾವಿಡ್ ಅವರು ನಾಯಕರಾಗಿದ್ದರು. ಅವರು ನನಗೆ ಕೊನೆಯ ಓವರ್ ಎಸೆಯಲು ಯಾಕೆ ಕೊಟ್ಟರು ಇನ್ನೂವರೆಗೆ ತಿಳಿದಿಲ್ಲ. ಬ್ಯಾಟ್ಸ್ಮನ್ ದಿಮಿತ್ರಿ ಮಾಸ್ಕ್ ರೇನಸ್ ಇದ್ದರು. ಆತ ನನ್ನ ಐದು ಎಸೆತಗಳಲ್ಲಿ ಐದು ಸಿಕ್ಸ್ ಗಳನ್ನು ಬಾರಿಸಿದ್ದರು. ನನ್ನ ಅದೃಷ್ಟ ಒಳ್ಳೆಯದಿತ್ತು, ದಿಮಿತ್ರಿ ಆರು ಬಾಲ್ ಗಳಿಗೆ ಆರು ಸಿಕ್ಸ್ ಗಳನ್ನು ಬಾರಿಸಲಿಲ್ಲ. ಆದರೆ ಆತ ಬಾರಿಸಿದ ಆ ಐದು ಸಿಕ್ಸ್ ಗಳು ಸುಮಾರು 15 ದಿನಗಳವರೆಗೆ ನನ್ನ ನಿದ್ದೆಗೆಡಿಸಿದ್ದವು, ಎಂದು ಯುವರಾಜ್ ತಮ್ಮ ಅನುಭವವನ್ನು ಸೋನಿ ಟೆನ್ ಫಿಟ್ ಸ್ಟಾಪ್ ಶೋ ದ ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದಾರೆ.

ಈ ಘಟನೆಯ ನಂತರ ನನಗೆ ನನ್ನ ಆಪ್ತೇಷ್ಟರಿಂದ ಸುಮಾರು ಫೋನ್ ಕಾಲ್ ಗಳು ಮೆಸೇಜಸ್ ಗಳು ಬರುತ್ತಿದ್ದವು. ಆ ವಿಷಯ ನನ್ನ ಮನಸ್ಸಿಗೆ ತುಂಬಾ ನಾಟಿತ್ತು. ಕಾರಣವೂ ಹಾಗೆಯೇ ಇತ್ತು, ನಾನು ನೂರು ರನ್ ಗಳನ್ನು ಗಳಿಸಿದಾಗ ನನಗೆ ಇಷ್ಟೊಂದು ಫೋನ್ ಗಳು ಮೆಸೇಜ್ ಗಳು ಬಂದಿರಲಿಲ್ಲ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ನಾನು ನನ್ನ ಸೇಡನ್ನು ತೆಗೆದುಕೊಂಡು ಬಿಟ್ಟೆ. ಆರು ಚೆಂಡುಗಳಲ್ಲಿ ಆರು ಸಿಕ್ಸ್ ಗಳನ್ನು ಬ್ರಾಡ್ ಅವರ ಬೌಲಿಂಗ್ ನಲ್ಲಿ ಬಾರಿಸಿ ನಾನು ದಿಮಿತ್ರಿಯವರ ಕಡೆಗೆ ನೋಡಿದೆ. ಆತ ನನ್ನ ಐದು ಎಸೆತಗಳಲ್ಲಿ ಐದು ಸಿಕ್ಸ್ ಗಳನ್ನು ಬಾರಿಸಿದ್ದದ್ದು ನೆನಪಿಸಿಕೊಂಡೆ. ಅದಾದ ನಂತರ ಫ್ಲಿಂಟಾಪ್ ಕಡೆಗೆ ದೃಷ್ಟಿ ಬೀರಿದೆ. ಆತ ನನ್ನ ಜೊತೆಗೆ ಈ ಸಿಕ್ಸ್ ಗಳನ್ನು ಬಾರಿಸುವದಕ್ಕೂ ಮುನ್ನವೇ ಜಗಳ ಕಾದಿದ್ದನು. ಆದ್ದರಿಂದಲೇ ಆತನೆಡೆಗೆ ಬ್ಯಾಟ್ ಮಾಡಿದೆನು. ತದನಂತರ ಮಾತ್ರ ನಾನು ಸ್ವಲ್ಪ ಶಾಂತನಾದೆ, ಆ ಯೋಚನೆ ನನ್ನಿಂದ ದೂರವಾಯಿತು.