Cricket: ಒಂದೇ ಓವರ್ ನಲ್ಲಿ 7 ಸಿಕ್ಸ್ ಹೊಡೆದ ಋತುರಾಜ್ ಗಾಯಕವಾಡ, ನೋಡಿ ಅದ್ಭುತ ವಿಡಿಯೋ!!

ಮೊನ್ನೆ ಅಂದರೆ 28 ನವೆಂಬರ್ ರಂದು ವಿಜಯ್ ಹಜಾರೆ ಟ್ರೋಫಿ, 2022ರ ಎರಡನೆಯ ಸೆಮಿ ಫೈನಲ್ ಫೇರಿಯ ಪಂದ್ಯದಲ್ಲಿ ಮಹಾರಾಷ್ಟ್ರದ ಋತುರಾಜ್ ಗಾಯಕವಾಡ್ ಅವರು ಉತ್ತರ ಪ್ರದೇಶ ತಂಡದ ವಿರುದ್ಧ ಇತಿಹಾಸವನ್ನು ರಚಿಸಿದ್ದಾರೆ. ಋತುರಾಜ್ ಅವರು 159 ಬಾಲ್ಗಳಲ್ಲಿ 250 ರನ್ಗಳನ್ನು ಗಳಿಸಿ ಕೊನೆಯವರೆಗೆ ಔಟ್ ಆಗದೆ ನಾಬಾದ್ ಉಳಿದಿದ್ದಾರೆ. ಈ ಪಂದ್ಯದಲ್ಲಿ ಅವರು 10 ಫೋರ್ ಮತ್ತು 16 ಸಿಕ್ಸ್ ಗಳನ್ನು ಹೊಡೆದಿದ್ದಾರೆ. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಇವರು ಒಂದು ಇತಿಹಾಸ ಸೃಷ್ಟಿ ಮಾಡಿದ್ದಾರೆ ಅದೇನೆಂದರೆ ಇವರು ಒಂದೇ ಓವರ್ ನಲ್ಲಿ 43 ರನ್ ಗಳನ್ನು ತಗೆದಿದ್ದಾರೆ. ಇದನ್ನು ಕೇಳಿ ನಿಮಗೆ ಆಶ್ಚರ್ಯ ವೆನಿಸಿರಬಹುದು ಆದರೆ ಇವರು ಒಂದೇ ಓವರ್ ನಲ್ಲಿ 43 ರನ್ ಗಳನ್ನು ತಗೆದಿದ್ದಾರೆ.

ಋತುರಾಜ್ ಅವರು ಕೊನೆಯ ಓವರ್ ಅಂದರೆ 49 ನೇಯ ಓವರ್ ನಲ್ಲಿ ಸತತವಾಗಿ 7 ಸಿಕ್ಸ್ ಗಳನ್ನು ಹೊಡೆದಿದ್ದಾರೆ. ಅದು ಹೇಗೆ ಅಂದರೆ ಈ ಓವರ್ ನಲ್ಲಿ ಬೌಲರ್ ಶಿವಾ ಸಿಂಗ್ ಅವರು ಒಂದು ನೋ ಬಾಲ್ ಹಾಕಿದ್ದಾರೆ ಆ ಬಾಲಿಗೂ ಸಹ ಇವರು ಮೈದಾನದ ಹೊರಗೆ ಅಂದರೆ ಸಿಕ್ಸ್ ಹೊಡೆದಿದ್ದಾರೆ. ಹೀಗಾಗಿ ಇವರು ಒಂದೇ ಓವರ್ ನಲ್ಲಿ 7 ಸಿಕ್ಸ್ ಹೊಡೆದು ಹೊಸ ಇತಿಹಾಸವನ್ನೇ ರಚಿಸಿದ್ದಾರೆ. ಅಲ್ಲದೆ ಒಂದೇ ಓವರ್ ನಲ್ಲಿ 43 ರನ್ನ ಗಳನ್ನು ಗಳಿಸಿ ತಂಡಕ್ಕೆ ಜಯಭೇರಿಯ ಆಟ ಆಡಿದ್ದಾರೆ. ಈ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 330 ರನ್ ಗಳಿಸಿದೆ. ಋತುರಾಜ್ ಅವರು ಐಪಿಎಲ್ ನಲ್ಲಿ ಚೆನ್ನೈ ತಂಡದ ಪರವಾಗಿ ಆಡುತ್ತಾರೆ. ಅಲ್ಲದೆ ಈ ಬಾರಿ ಇವರಿಗೆ ಬಹಳಷ್ಟು ಬೇಡಿಕೆ ಬರಬಹುದು ಎಂಬುದು ಅವರ ಈಗಿನ ಆಟದ ಮೂಲಕ ಊಹಿಸಬಹುದು.

ವಿಡಿಯೋ ನೋಡಿ.

ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ Education hub ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು 1.8 ಮಿಲಿಯನ್ ನಷ್ಟು ಜನರು ವೀಕ್ಷಣೆ ಮಾಡಿದ್ದಾರೆ.