ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲವೇ? ಚಿಂತಿಸಬೇಡಿ, ಜೀರೋ ಬ್ಯಾಲೆನ್ಸ್ ಇದ್ದರೂ ಸಹ 10 ಸಾವಿರ ರೂಪಾಯಿ ಪಡೆಯಬಹುದು! ತಿಳಿದುಕೊಳ್ಳಿ…..

ನಾವು ಸಂಪಾದಿಸಿದ ಹಣವನ್ನು ಸುರಕ್ಷಿತವಾಗಿಡುವ ಸಲುವಾಗಿ ಬ್ಯಾಂಕ್ ಖಾತೆ ಓಪನ್ ಮಾಡಬೇಕಾಗುತ್ತೆ. ಬ್ಯಾಂಕ್ ನ ವ್ಯವಹಾರ ತುಂಬಾ ಸುರಕ್ಷಿತವಾದ ವ್ಯವಹಾರ ವಾಗಿದೆ. ಹೀಗಾಗಿ ಒಂದು ಬಾರಿ ನಾವು ಸೇವಿಂಗ್ ಖಾತೆ ತಗೆದರೆ ಸಾಕು ನಮಗೆ ಬೇಕಾದಾಗ ಹಣ ಜಮಾ ಮಾಡಬಹುದು ಮತ್ತು ಆವಶ್ಯಕತೆಯ ಅನುಸಾರ ಖಾತೆಯಿಂದ ಹಣ ತಗೆದುಕೊಂಡು ಅದರ ಉಪಯೋಗ ಮಾಡಿಕೊಳ್ಳಬಹುದು.

ಆದರೆ ಇದೆಲ್ಲ ವ್ಯವಹಾರ ಕೇವಲ ನಮ್ಮ ಖಾತೆಯಲ್ಲಿ ಹಣ ವಿದ್ದರೆ ಮಾತ್ರ ಸಾಧ್ಯ. ಆದರೆ ನಿಮಗೆ ಗೊತ್ತಿದೆಯೇ ಖಾತೆಯಲ್ಲಿ ಶಿಲ್ಲಕ ಹಣವಿರದಿದ್ದರು ಸಹ ನೀವು ಖಾತೆಯಿಂದ ಹತ್ತು ಸಾವಿರ ರೂಪಾಯಿ ತಗೆದುಕೊಳ್ಳಬಹುದು. ಇದನ್ನು ಕೇಳಿ ನೀವು ಆಶ್ಚರ್ಯ ಪಡುತ್ತಿರಬಹುದು ಆದರೆ ಇದು ನಿಜ. ಇದೊಂದು ಸರಕಾರದ ದೊಡ್ಡ ಯೋಜನೆ ಇದೆ ಅದರ ಹೆಸರು ಪ್ರಧಾನ ಮಂತ್ರಿ ಜನ ಧನ ಯೋಜನೆ. ಈ ಯೋಜನೆಯ ಅಡಿಯಲ್ಲಿ ನಿಮಗೆ ಅನೇಕ ಸೌಲಭ್ಯಗಳು ದೊರೆಯುತ್ತವೆ.

ಒಂದು ವೇಳೆ ನೀವು ಜನ ಧನ ಖಾತೆ ಇನ್ನುವರೆಗೆ ತಗೆಯದೆ ಇದ್ದರೆ ಈಗಲೇ ಹೋಗಿ ಓಪನ್ ಮಾಡಿ. ಪ್ರಧಾನ ಮಂತ್ರಿ ಜನ ಧನ ಯೋಜನೆಯ ಅಡಿಯಲ್ಲಿ ಶೂನ್ಯ ಶಿಲ್ಲಕ ಇರುವಂತ ಬ್ಯಾಂಕ್ ಖಾತೆಗಳ ಸಂಖ್ಯೆ ಇದುವರೆಗೆ ಸುಮಾರು 42 ಕೋಟಿಯ ಮುಂದೆ ಹೋಗಿದೆ. ಈ ಯೋಜನೆಯ ಅಡಿಯಲ್ಲಿ ಖಾತೆ ಓಪನ್ ಮಾಡಿದ ಜನರಿಗೆ ಸರಕಾರದ ಕಡೆಯಿಂದ ಅನೇಕ ಸೌಲಭ್ಯ ಸಿಗುತ್ತವೆ. ಈ ಖಾತೆಯಲ್ಲಿ ನಿಮ್ಮ ಹತ್ತಿರ ಜೀರೋ ಬ್ಯಾಲೆನ್ಸ್ ಇದ್ದರು ಸಹ 10000 ರೂಪಾಯಿಗಳನ್ನು ಪಡೆಯಬಹುದು. ಅದಲ್ಲದೆ ಈ ಖಾತೆಯ ಅಡಿಯಲ್ಲಿ ರುಪೇ ಡೆಬಿಟ್ ಕಾರ್ಡ್ ಸೌಕರ್ಯ ಕೂಡ ಕೊಡಲಾಗಿದೆ ರ್ ಮೂಲಕ ನೀವು ನಿಮ್ಮ ಖಾತೆಯಲ್ಲಿಯ ಹಣವನ್ನು ತಗೆಯುವದರ ಜೊತೆಗೆ ಯಾವುದೇ ವಸ್ತುವನ್ನು ಸಹ ಖರೀದಿ ಮಾಡಲು ಸಾಧ್ಯ. ಈ ಯೋಜನೆ 2014 ರಲ್ಲಿ ಪ್ರಾರಂಭವಾಗಿದ್ದು 2018 ರಲ್ಲಿ ಮತ್ತೆ ಈ ಯೋಜನೆಯ ರೂಪು ರೇಷೆಗಳಲ್ಲಿ ಬದಲಾವಣೆ ಮಾಡಿ ಎರಡನೆಯ ಆವೃತ್ತಿಯನ್ನು ಜಾರಿಯಲ್ಲಿ ತರಲಾಯಿತು. ಈ ಎರಡನೆಯ ಆವೃತ್ತಿಯಲ್ಲಿ ನಿಮಗೆ ಉತ್ತಮ ಸೌಕರ್ಯಗಳು ದೊರೆಯಲಿವೆ.

 

ಏನೆಲ್ಲಾ ಸೌಕರ್ಯಗಳು ದೊರೆಯುತ್ತವೆ?

• ಜನ ಧನ ಯೋಜನೆಯ ಅಡಿಯಲ್ಲಿ 10 ವರ್ಷಕ್ಕಿಂತ ಕಡಿಕೆ ವಯಸ್ಸಿನ ಮಕ್ಕಳ ಖಾತೆಯನ್ನು ಸಹಜವಾಗಿ ಓಪನ್ ಮಾಡಬಹುದು.
• ಈ ಯೋಜನೆಯ ಅಡಿಯಲ್ಲಿ ಖಾತೆ ಓಪನ್ ಮಾಡಿದ ಮೇಲೆ ನಿಮಗೆ ರುಪೇ ಎಟಿಎಂ ಕಾರ್ಡ್(ATM Card) , 2 ಲಕ್ಷ ರೂಪಾಯಿಗಳ ಅಪಘಾತ ವಿಮೆ ಸಂರಕ್ಷಣೆ, 30 ಸಾವಿರ ರೂಪಾಯಿಗಳ ಜೀವನ ಸಂರಕ್ಷಣೆ ಮತ್ತು ಜಮಾ ಮಾಡಿದ ಹಣದ ಮೇಲೆ ಉತ್ತಮ ಬಡ್ಡಿ ಸಹ ಬ್ಯಾಂಕು ನೀಡುತ್ತದೆ.
• ಈ ಖಾತೆಯ ಮೇಲೆ ನಿಮಗೆ 10 ಸಾವಿರ ರೂಪಾಯಿಗಳ ಓವರ್ ಡ್ರಾಫ್ಟ್ (Overdraft) ಸೌಲಭ್ಯ ಸಹ ದೊರೆಯುತ್ತದೆ.
• ಈ ಖಾತೆ ಯಾವುದೇ ಬ್ಯಾಂಕನಲ್ಲಿ ತಗೆಯಬಹುದು.
• ಅಲ್ಲದೆ ಈ ಖಾತೆಯಲ್ಲಿ ಬ್ಯಾಲೆನ್ಸ್ ಇಡುವದು ಅವಶ್ಯಕವಾಗಿಲ್ಲ.

ಜನಧನ ಖಾತೆ ಓಪನ್ ಮಾಡಲು ಬೇಕಾಗುವ ದಾಖಲೆಗಳು!

ನೀವು ಈ ಖಾತೆ ಓಪನ್ ಮಾಡಲು ಬಯಸಿದರೆ ನಿಮ್ಮ ಹತ್ತಿರ ಈ ದಾಖಲೆಗಳ ಇರಬೇಕಾಗುತ್ತದೆ. ಆಧಾರ್ ಕಾರ್ಡ್, ಪರಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್ KYC ಯ ಅವಶ್ಯಕತೆ ಪೂರ್ಣ ಮಾಡುವ ಯಾವುದೇ ದಾಖಲೆ ನೀವು ಸಬಮಿಟ್ ಮಾಡಬಹುದು. ಒಂದು ವೇಳೆ ನಿಮ್ಮ ಬಳಿ ಯಾವುದೇ ದಾಖಲೆಗಳು ಇರದಿದ್ದರೂ ಸಹ ಖಾತೆಯನ್ನು ಓಪನ್.ಮಾಡಬಹುದು. ಅದಕ್ಕಾಗಿ ನೀವು ಸ್ವತಃ ಬ್ಯಾಂಕ್ ಅಧಿಕಾರಿಯ ಎದುರುಗಡೆ ಸಹಿ ಮಾಡಿದ ಫೋಟೋ ಮತ್ತು ನಿಮ್ಮ ಸಹಿ ಮಾಡಿ ಫಾರ್ಮ್ ತುಂಬ ಬೇಕು. ಈ ಖಾತೆಯ ಓಪನ್ ಮಾಡುವ ಸಲುವಾಗಿ ಯಾವುದೇ ರೀತಿಯ ಶುಲ್ಕ ವಿರುವದಿಲ್ಲ ಇದನ್ನು ಗಮನದಲ್ಲಿಡಿ.