Vairal Video; ಪುಟ್ಟ ಮಕ್ಕಳಿಗೆ ಪ್ರಾಕ್ಟಿಕಲ್ ಮುಖಾಂತರ ಸಖತ್ ಪಾಠವನ್ನು ನೀಡಿದ ಈ ಅದ್ಭುತ ಶಾಲೆ!

ಶಾಲೆಯ ಮಕ್ಕಳಿಗೆ ಪಾಠ ಹೇಳಿಕೊಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರಲ್ಲೂ ಮೂರು ಅಥವಾ ನಾಲ್ಕೈದು ವರ್ಷಗಳ ಪುಟ್ಟ ಮಕ್ಕಳಿಗೆ ಪಾಠ ಕಲಿಸುವದೆಂದರೆ ಒಂದು ಚಾಲೆಂಜ್ ಆಗಿರುತ್ತದೆ ಶಿಕ್ಷಕರಿಗೆ. ಇಲ್ಲಿ ನೋಡುವ ಸುಂದರವಾದ ವಿಡಿಯೋದಲ್ಲಿ ಮಕ್ಕಳಿಗೆ ಯಾವ ರೀತಿ ಶಿಕ್ಷಕರು ಮಹತ್ವದ ಪಾಠವನ್ನು ಪ್ರಾಕ್ಟಿಕಲ್ ಮುಖಾಂತರ ತುಂಬಾ ಪ್ರಭಾವಪೂರ್ಣವಾಗಿ ಕಲಿಸಿದ್ದಾರೆ ನೋಡಿ.

ಇಂದಿನ ಯುಗದಲ್ಲಿ ಮಕ್ಕಳನ್ನು ಅಪಹರಿಸಿಕೊಂಡು ಹೋಗುವ ಘಟನೆಗಳನ್ನು ತುಂಬಾ ಕೇಳುತ್ತೇವೆ. ಅದಕ್ಕಾಗಿ ಮಕ್ಕಳಿಗೆ ಇದರ ಬಗ್ಗೆ ಶಾಲೆಯವರು ತುಂಬಾ ಪರಿಣಾಮಕಾರಿಯಾಗಿ ಹೇಗೆ ಜಾಗೃತೆಯನ್ನು ಮೂಡಿಸಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ನೋಡಿದ ನಂತರ ಮಕ್ಕಳು ಅಪರಿಚಿತರ ಜೊತೆಗೆ ಯಾವ ರೀತಿ ವರ್ತಿಸಿದ್ದಾರೆ ಎಂಬುದನ್ನು ತಕ್ಷಣ ಇಲ್ಲಿಯೇ ನೋಡಬಹುದು.

ಪ್ರಸ್ತುತ ವಿಡಿಯೋದಲ್ಲಿ ಸುಮಾರು ಎರಡು ಮೂರು ವರ್ಷದ ಮಕ್ಕಳಿವೆ. ಇಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಕ್ಕಳಿಗೆ ಆಕರ್ಷಕವಾದ ಆಟಿಕೆ ಸಾಮಾನುಗಳನ್ನು ತೋರಿಸಿ ಒಂದು ಮಗುವಿನ ಕೈಯಲ್ಲಿ ಕೊಟ್ಟು ನಂತರ ಆ ಮಗುವನ್ನು ಅಲ್ಲಿಂದ ಎತ್ತಿಕೊಂಡು ಹೋಗುತ್ತಾನೆ. ಇದನ್ನು ಉಳಿದ ಮಕ್ಕಳು ನೋಡಿದ ನಂತರ ಯಾವ ರೀತಿ ಜಾಣರಂತೆ ವರ್ತಿಸಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಎರಡನೇ ಬಾರಿ ಆ ಅಪರಿಚಿತ ವ್ಯಕ್ತಿ ಬಂದಾಗ ಮಕ್ಕಳು ಆತನಿಂದ ಆಟಿಕೆ ಸಾಮಾನನ್ನು ತೆಗೆದುಕೊಳ್ಳಲು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ಈ ವಿಡಿಯೋದ ಮುಖಾಂತರ ಪ್ರಾಕ್ಟಿಕಲ್ ಆಗಿ ಕಲಿಸಿದ ಪಾಠ ಮಕ್ಕಳಿಗೆ ತುಂಬಾ ಫಲಪ್ರದವಾಗಿದೆ ಎಂದೇ ಹೇಳಬಹುದು.

ನೋಡಿ ಈ ವಿಡಿಯೋ…

 

View this post on Instagram

 

A post shared by outofdecor (@outofdecor)

ಮಕ್ಕಳಿಗೆ ಈ ಪರಿಣಾಮಕಾರಿಯಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ “ಔಟ್ ಆಫ್ ಡೆಕೋರ” ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದ್ದು 1 ಲಕ್ಷ 75 ಸಾವಿರ ಜನರು ಲೈಕ್ ಮಾಡಿದ್ದಾರೆ.