ಸಿಹಿಯಾದ ಕಬ್ಬಿನ ಕಹಿ ಸತ್ಯ ತೋರಿಸುವ ರೈತನ ಕುಟುಂಬದ ಸೂಪರ್ ವಿಡಿಯೋ ನೋಡಿ; ಕಣ್ಣಂಚು ಒದ್ದೆಯಾಗುವದು.
ವ್ಯಕ್ತಿ ದುಡಿದಾಗಲೇ ಕೈಗೆ ಹಣ ಸಿಗುವದು. ಆದರೆ ರೈತ ದುಡಿದ ನಂತರ ಕಟ್ಟ ಕಡೆಗೆ ಕೊನೆಯಲ್ಲಿ ಹಣ ಕೈಗೆ ಬಂದು ಸೇರುತ್ತದೆ ಎಂದು ನಿರ್ದಿಷ್ಟವಾಗಿ, ನಿಶ್ಚಿತವಾಗಿ ಹೇಳಲು ಸಾಧ್ಯವೇ ಇಲ್ಲ. ಕಾರಣ ರೈತನು ಬೆಳೆದ ಪ್ರತಿಯೊಂದು ಬೆಳೆ ಹವಾಮಾನದ ಮೇಲೆ ಹಾಗೂ ಇನ್ನಿತರ ವಿಷಯಗಳ ಅವಲಂಬಿಸಿರುತ್ತದೆ. ರೈತನಿಗೆ ಕೆಲವೊಮ್ಮೆ ಅದೃಷ್ಟ ಕೈಗೂಡಿಸಿದರೆ ಇನ್ನೂ ಕೆಲವು ಸಲ ಅದೃಷ್ಟ ಕೈ ಕೊಡುತ್ತದೆ.
ಸದ್ಯ ಇಲ್ಲಿ ನೋಡುವ ವಿಡಿಯೋ ಒಂದು ನೋಡುವ ನೆಟ್ಟಿಗರ ಮನವನ್ನು ಕಲಕುತ್ತದೆ. ಪ್ರಸ್ತುತ ವಿಡಿಯೋದಲ್ಲಿ ರೈತ ತನ್ನ ತೋಟದಲ್ಲಿ ಬೆಳೆದ ಕಬ್ಬನ್ನು ಎತ್ತಿನಗಾಡಿಯ ಮುಖಾಂತರ ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬರುತ್ತದೆ. ಕಬ್ಬಿನ ಹೆಚ್ಚಾದ ಭಾರಕ್ಕೆ ಎತ್ತುಗಳ ಕಾಲುಗಳು ಹೊತ್ತಯ್ಯದೆ ಥರಥರನೆ ನಡುಗುತ್ತಿವೆ ಮತ್ತು ಮಂಡಿಯೂರಿ ಕೆಳಗೆ ಕುಳಿತು ಕೊಳ್ಳುತ್ತಿವೆ. ಜೊತೆಗೆ ಡಾಂಬರಿನ ರಸ್ತೆಯ ಮೇಲೆ ಎತ್ತುಗಳ ಕಾಲುಗಳು ಸರಿಯಾಗಿ ಹಿಡಿತಗೊಳ್ಳದೆ ಜಾರುತ್ತಿವೆ. ಇಂಥ ಸಂದರ್ಭದಲ್ಲಿ ರೈತ ಮತ್ತು ರೈತನ ಮನೆಯವರು ಎಲ್ಲಿ ಗಾಡಿ ವಾಲಿ ಬೀಳುತ್ತದೆ ಎಂಬ ಭೀತಿಯಿಂದ ಹಾಗೂ ಎತ್ತುಗಳ ಕಾಲುಗಳು ಜಾರದೇ ಇರಲಿ ಎಂದು ಅವುಗಳ ಕಾಲು ಕೆಳಗೆ ಪಟಪಟನೆ ಮಣ್ಣನ್ನು ಚೆಲ್ಲುತ್ತಿದ್ದಾರೆ. ರೈತ ತಾನು ಬೆಳೆದ ಬೆಳೆಯನ್ನು ಮಾರಾಟಕ್ಕಾಗಿ ಕೊನೆಯವರೆಗೂ ಮುಟ್ಟಿಸುವ ತನಕ ಸಂಘರ್ಷ ಮಾಡುವುದು ತಪ್ಪುವುದಿಲ್ಲ.
ನೋಡಿ ಈ ವಿಡಿಯೋ…
View this post on Instagram
ಈ ಮನ ಕಲಕುವ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ gen.dpramod ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 4.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ ನೆಟ್ಟಿಗರು ಈ ವಿಡಿಯೋವನ್ನು ತುಂಬಾ ಇಷ್ಟ ಪಟ್ಟಿದ್ದು ಸುಮಾರು 3 ಲಕ್ಷ 12 ಸಾವಿರ ಜನರು ಲೈಕ್ ಮಾಡಿದ್ದಾರೆ.