ಭಾರದ ಟ್ರಾಲಿ ಬ್ಯಾಗ್ ಎಸ್ಕಲೇಟರ್ ನಿಂದ ಕೆಳಗೆ ಕಳುಹಿಸುವ ಅಕ್ಕಳ ಈ ಮಣ್ಣು ತಿನ್ನೋ ಐಡಿಯಾದ ಪರಿಣಾಮ ನೋಡಿ ಏನಾಯಿತು?
ಕೆಲವೊಮ್ಮೆ ನಮ್ಮ ಕೆಲಸಗಳು ಹಗುರವಾಗಲೆಂದು ವರ್ಕೌಟ್ ಮಾಡಲು ಹೋದ ಐಡಿಯಾಗಳು ಅಕ್ಷರಶಃ ಇನ್ನೊಬ್ಬರಿಗೆ ಮುಳುವಾಗಿ ಪರಿಣಮಿಸುತ್ತವೆ. ಕೆಲವೊಮ್ಮೆ ಇನ್ನೊಬ್ಬರಿಗೆ ಇಂಥ ಐಡಿಯಾಗಳು ತುಂಬಾ ದುಬಾರಿಯಾಗಿ ಪರಿಣಮಿಸುತ್ತವೆ. ಈ ವಿಷಯಕ್ಕೆ ಉದಾಹರಣೆಯನ್ನು ನೀಡುವ ಒಂದು ಸಂಗತಿಯ ವಿಡಿಯೋವನ್ನು ಇಲ್ಲಿ ನೋಡಬಹುದು.
ಪ್ರಸ್ತುತ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಭಾರವಾದ ಟ್ರಾಲಿ ಬ್ಯಾಗ್ ಗಳನ್ನು ತೆಗೆದುಕೊಂಡು ಎಸ್ಕಲೇಟರ್ ಮುಖಾಂತರ ಕೆಳಗೆ ಇಳಿಯಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಒಬ್ಬಳು ಮಹಿಳೆ ತನ್ನ ಕೈಯಲ್ಲಿರುವ ಒಂದು ಟ್ರಾಲಿ ಬ್ಯಾಗನ್ನು ಎಸ್ಕಲೇಟರ್ ಮೇಲೆ ಇಟ್ಟು ತನ್ನಂತಾನೆ ಕೆಳಗೆ ಹೋಗಲು ಬಿಡುತ್ತಾಳೆ. ಆದರೆ ಆ ಟ್ರಾಲಿ ಬ್ಯಾಗ್ ಸ್ಟೇರ್ ಕೇಸ್ ಮೇಲೆ ಸರಿಯಾಗಿ ಕುಳಿತುಕೊಳ್ಳದೆ ಕೆಳಗೆ ಬೀಳುತ್ತದೆ. ಪ್ರಸ್ತುತ ಈ ಎಲ್ಲ ದೃಶ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ಎಸ್ಕಲೇಟರ್ ಮೇಲೆ ನಿಂತು ಕೆಳಗೆ ಹೋಗುತ್ತಿದ್ದ ಮಹಿಳೆ ಮೇಲಿನಿಂದ ಟ್ರಾಲಿ ಬ್ಯಾಗ್ ಜಾರಿಕೊಂಡು ತನ್ನ ಕಡೆಗೆ ಮುನ್ನುಗ್ಗಿ ಬರುತ್ತಿರುವುದನ್ನು ಕಂಡು ಗಾಬರಿಯಾಗಿ ಬೇಗನೆ ಸ್ಟೆಪ್ಸ್ ಗಳನ್ನು ಇಳಿದು ಓಡಿ ಹೋಗಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ಬ್ಯಾಗ್ ಬಂದು ಮಹಿಳೆಯ ಕಾಲಿಗೆ ಬಡಿದು ಆಕೆಯನ್ನು ಕೆಳಗೆ ಬೀಳಿಸುತ್ತದೆ. ನಂತರ ಅಲ್ಲಿ ನಡೆದ ದೃಶ್ಯವನ್ನು ನೀವೇ ನೋಡಿ ಈ ವಿಡಿಯೋದಲ್ಲಿ.
ವಿಡಿಯೋ….
View this post on Instagram
ಮಹಿಳೆಯ ಬೇಜಾಬ್ದಾರಿಯನ್ನು ತೋರಿಸುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ mr_deepak_951 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 83 ಸಾವಿರ ಜನರು ಲೈಕ್ ಮಾಡಿದ್ದು 1.8 ಮಿಲಿಯನ್ ಜನರು ನೋಡಿದ್ದಾರೆ.