ಒಂದು ಸಮಯದಲ್ಲಿ ಸಚಿನ್ ಎದುರು 5 ಶತಕ ಬಾರಿಸಿದ ಅದ್ಭುತ ಬ್ಯಾಟ್ಸ್ಮನ್; ಇಂದು ಬದುಕಲು ಮಾಡುತ್ತಿದ್ದಾರೆ ಈ ಖತರ್ನಾಕ್ ಕೆಲಸ!
ನ್ಯೂಜಿಲ್ಯಾಂಡ್ ನ ಮಾಜಿ ಕ್ರಿಕೆಟ್ ಆಟಗಾರ ನಾಥನ್ ಆಸ್ಟಲ್ ಈತ ಸ್ಪೋಟಕ ಬ್ಯಾಟ್ಸ್ ಮನ್ ಎಂದು ಗಣನೆಯಾಗುತ್ತಿತ್ತು. ಒಬ್ಬ ಫಾಯಾಟರ್ ಕ್ರಿಕೆಟಿಗನೆಂದು ಗುರುತಿಸಿಕೊಂಡ ನಾಥನ್ ಆಸ್ಟಲ್ ಅವರು ತಮ್ಮ ಸ್ಫೋಟಕ ಆಟದ ಬಲದಿಂದ ನ್ಯೂಜಿಲ್ಯಾಂಡ್ ಗೆ ಅನೇಕ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಜಗತ್ತಿನೆಲ್ಲ ಬೌಲರ್ ಗಳ ಮೇಲೆ ವಾಯು ಹಲ್ಲೆ ನಡೆಸಿದ ಈ ಆಟಗಾರ ನಿವೃತ್ತಿಯ ನಂತರ ಈಗ ಕಾರ್ ರೇಸರ್ ಆಗಿದ್ದಾರೆ.
ಕಾರ್ ರೇಸಿಂಗ್ ಇದು ತುಂಬಾ ಅಪಾಯಕಾರಿ ಎಂದು ತಿಳಿಯಲಾಗುತ್ತದೆ. ಏಕೆಂದರೆ ಇದರಲ್ಲಿ ಯಾವಾಗ ಎಲ್ಲಿ ಯಾರ ಜೀವ ಹೋಗುತ್ತದೆ ಎಂಬುದೇ ತಿಳಿಯುವದಿಲ್ಲ. ಕುಟುಂಬದ ಉದರ ನಿರ್ವಾಹಕ್ಕಾಗಿ ತನ್ನ ಜೀವದ ಮೇಲೆ ಉದಾರವಾಗಿ ಈ ಆಟ ಆಡುತ್ತಿದ್ದಾನೆ. 2007 ರಲ್ಲಿ ಕ್ರಿಕೆಟ್ ನಿಂದ ಸನ್ಯಾಸವನ್ನು ಸ್ವೀಕರಿಸಿದ ನಂತರ ಈ ಆಟವನ್ನು ಆಡುತ್ತಿದ್ದಾನೆ.
ಇವರು ತಮ್ಮ ಕ್ರಿಕೆಟ್ ಜೀವನದಲ್ಲಿ ಭಾರತೀಯ ಬೌಲರ್ ಗಳಿಗೆ ತುಂಬಾ ಸತಾಯಿಸಿದ್ದಾರೆ. ಭಾರತದ ವಿರೋಧದಲ್ಲಿ ಯಾವತ್ತೂ ಜಿದ್ದಿನಿಂದ ಆಡುತ್ತಿದ್ದರು.

ಭಾರತೀಯ ಬೌಲರ್ ಗಳಿಗೆ ತನ್ನ ವಿಕೆಟ್ ನ್ನು ಯಾವಾಗಲೂ ಸಹಜವಾಗಿ ಕೊಟ್ಟಿಲ್ಲ. ಭಾರತದ ವಿರುದ್ಧ 29 ಒಂದು ದಿನದ ಪಂದ್ಯಗಳನ್ನಾಡಿದ ನಾಥನ್ 5 ಶತಕಗಳನ್ನು ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ನಾಲ್ಲಿ ಒಂದು ಶತಕ ಭಾರತದ ವಿರುದ್ಧ ದಾಖಲಾಗಿದೆ.
18 ವರ್ಷಗಳ ಪೂರ್ವದಲ್ಲಿ ನಾಥನ್ ಆಸ್ಟಲ್ ಅವರು ಇಂಗ್ಲೆಂಡ್ ವಿರುದ್ಧ ಎಲ್ಲಕ್ಕೂ ವೇಗದ ಡಬಲ್ ಸೆಂಚುರಿಯನ್ನು ಬಾರಿಸಿದ್ದರು. ಬರೀ 153 ಎಸೆತಗಳಲ್ಲಿ ತಮ್ಮ ಈ ಅಮೋಘ ಆಟವನ್ನು ಪ್ರದರ್ಶಿಸಿದ್ದರು. ಎಲ್ಲಕ್ಕೂ ಕಡಿಮೆ ಎಸೆತಗಳಲ್ಲಿ ದ್ವಿಶತಕವನ್ನು ಬಾರಿಸಿದ ರೆಕಾರ್ಡ್ ಮಾಡಿದ್ದರು. ಆ ಪಂದ್ಯದಲ್ಲಿ 168 ಬಾಲ್ ಗಳಲ್ಲಿ 222 ರನ್ ಗಳ ತೂಫಾನ್ ದಂತಹ ಆಟ ಎಂದಿಗೂ ಮರೆಯಲಾಗದ ಆಟ ಎಂದೇ ಹೇಳಬೇಕು. ಯಾಕೆಂದರೆ ಇದಕ್ಕೆ ಕಾರಣವು ಹಾಗೆಯೇ ಇದೆ, ಈ ಸ್ಫೋಟಕ ಆಟವನ್ನು ಅವರು ನಾಲ್ಕನೇಯ ಇನ್ನಿಂಗ್ಸ್ ನಲ್ಲಿ ಕಟ್ಟಿದ್ದರೂ ಸಹಿತ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಕ್ರಿಕೆಟ್ ನಲ್ಲಿಯ ಅಭಿರುಚಿ ಮುಗಿದ ನಂತರ ಇವರು 2007 ರ ವಿಶ್ವಕಪ್ ಟೂರ್ನಿಗಿಂತಲೂ ಮೊದಲೇ ನಿವೃತ್ತಿಯಾಗಿ ಈಗ ಕಾರ್ ರೇಸಿಂಗ್ ಕಡೆಗೆ ಗಮನ ಹರಿಸಿ ಅಲ್ಲಿಯೂ ತನ್ನ ಛಾಪು ಮೂಡಿಸಿದ್ದಾರೆ.
ನ್ಯೂಜಿಲ್ಯಾಂಡ್ ಪರವಾಗಿ ಆಡಿದ ಈ ಓಪನರ್ ಆಟಗಾರ 81 ಟೆಸ್ಟ್ ಗಳಲ್ಲಿ 36.73 ಸರಾಸರಿಯಿಂದ 4702 ರನ್ ಗಳನ್ನು ಕಲೆ ಹಾಕಿದ್ದಾರೆ. ಅದರಲ್ಲಿ 11 ಶತಕಗಳ ಸಮಾವೇಶ ಇವೆ. 223 ಒನ್ ಡೇ ಪಂದ್ಯಗಳಲ್ಲಿ 34.93 ಸರಾಸರಿಯಲ್ಲಿ 7090 ರನ್ ಗಳನ್ನು ಕೂಡಿ ಹಾಕಿದ್ದಾರೆ. ಅದರಲ್ಲಿ ಒಟ್ಟು 16 ಶತಕಗಳು ಮತ್ತು 41 ಹಾಫ್ ಸೆಂಚುರಿ ಬಾರಿಸಿದ್ದಾರೆ.