ಕ್ರಿಕೆಟರ್ ಕೋಟ್ಯಾಧೀಶ M S ಧೋನಿ ಸಹೋದರನಿದ್ದಾನೆ ತುಂಬಾ ಬಡವ; ಇದು ನಿಮಗೆ ಗೊತ್ತಾ?

ಮಹೇಂದ್ರ ಸಿಂಗ್ ಧೋನಿ ಅವರು ತಮ್ಮಲ್ಲಿರುವ ಅದ್ಭುತ ಕ್ರಿಕೆಟ್ ಕೌಶಲ್ಯದಿಂದಾಗಿ ಇಡೀ ಜಗತ್ತಿಗೆ ಚಿರಪರಿಚಿತರಾದವರು. ಆಗರ್ಭ ಶ್ರೀಮಂತರಾದರೂ ಎಂ ಎಸ್ ಧೋನಿಯವರು ತುಂಬಾ ಸರಳವಾದ ಜೀವನವನ್ನು ಜೀವಿಸುತ್ತಾರೆ. ಇವರ ಮೊದಲಿನ ಜೀವನ ಅಷ್ಟೊಂದು ಶ್ರೀಮಂತಿಕೆಯಿಂದ ಕೂಡಿರಲಿಲ್ಲ. ಧೋನಿಯವರಿಗೆ ಇಬ್ಬರು ಸಹೋದರರು ಒಬ್ಬಳು ಸಹೋದರಿ ಇದ್ದಾಳೆ. ಬಹಳ ಜನರಿಗೆ ಈ ವಿಷಯ ಗೊತ್ತಿಲ್ಲ ಅದೇನೆಂದರೆ ಧೋನಿಯವರಿಗೆ ಇಬ್ಬರೂ ಸಹೋದರರಲ್ಲಿ ಒಬ್ಬ ಅಣ್ಣನೂ ಇದ್ದಾನೆಂದು. ಅವರ ಹೆಸರು ನರೇಂದ್ರ ಸಿಂಗ ಧೋನಿ. ಇವರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ.

ಇವರು ಚಿಕ್ಕವರಿದ್ದಾಗಲೇ ಮನೆಯನ್ನು ತೊರೆದು ಹೋಗಿದ್ದಾರೆ. ಯಾವ ಕಾರಣದಿಂದ ಮನೆಯನ್ನು ತೊರೆದು ಹೋಗಿದ್ದಾರೆ ಎಂಬುದು ಇಲ್ಲಿಯವರೆಗೆ ಮೀಡಿಯಾದವರಿಗೂ ಗೊತ್ತಾಗಿಲ್ಲ. ಧೋನಿಯವರ ಈ ಸಹೋದರ ನರೇಂದ್ರ ಸಿಂಗ್ ಧೋನಿ ಅವರು ರಾಜಕೀಯ ಪಕ್ಷವಾದ ಸಮಾಜವಾದಿ ಪಾರ್ಟಿಯ ಜೊತೆಗೆ ಕೂಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಈ ಪಾರ್ಟಿಯ ಕಾರ್ಯಕರ್ತರಾಗಿ ಕೆಲಸ ನಿಭಾಯಿಸುತ್ತಿದ್ದಾರೆ. ಧೋನಿಯವರ ಸಹೋದರಿಯೊಬ್ಬರು ಶಾಲೆಯಲ್ಲಿ ಇಂಗ್ಲಿಷ್ ಪಾಠವನ್ನು ಹೇಳಿಕೊಡುತ್ತಾರೆ.