ಚಿರತೆಯ ಮರಿಯನ್ನು ಬೇ#ಟೆಯಾಡಿದ ಗರುಡ ಪಕ್ಷಿ, ಕೇವಲ ಎರಡೇ ನಿಮಿಷದಲ್ಲಿ ಗರುಡನ್ನು ಹುಡುಕಿ ಸೇಡು ತೀರಿಸಿಕೊಂಡ ಚಿರತೆ, ವೀಡಿಯೋ ನೋಡಿ!!

ಮಾಂಸಾಹಾರಿ ಪ್ರಾಣಿಗಳು ಮತ್ತು ಪಕ್ಷಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇನ್ನೊಂದು ಪ್ರಾಣಿಗಳ ಬೇಟೆಯಾಡದೆ ಬೇರೆ ಮಾರ್ಗವೇ ಇಲ್ಲ. ಈ ಕಾಡು ಪ್ರಾಣಿಗಳು ಅಸಹಾಯಕ ಪ್ರಾಣಿಗಳ ಬೇಟೆ ಆಡುವ ವಿಡಿಯೋಗಳನ್ನು ನೋಡುವಾಗ ಎಷ್ಟೋ ಸಲ ಮನ ಕಲಕುತ್ತದೆ. ಆದರೆ ಈ ಪ್ರಾಣಿಗಳ ಆಹಾರವೇ ಮಾಂಸವಾಗಿರುವದರಿಂದ ಇನ್ನೊಂದು ಜೀವಿಯ ಬೇಟೆಯಾಡಿಯೇ ಬದುಕಬೇಕಾಗುತ್ತದೆ. ಇಲ್ಲವಾದರೆ ಈ ಜೀವಿಗಳು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ.

ಈ ಕಾಡುಪ್ರಾಣಿ ಮತ್ತು ಪಕ್ಷಿಗಳು ಆಹಾರಕ್ಕಾಗಿ ಕೆಲವೊಮ್ಮೆ ಮಾಡುವ ಬೇಟೆಗಾರಿಕೆ ತುಂಬಾ ಭ#ಯಂಕರವಾಗಿ ಇರುತ್ತದೆ. ಕಾಡಿನಲ್ಲಿ ಬದುಕುಳಿಯಲು ಸದಾಕಾಲ ಸಂಘರ್ಷ ನಡೆದೇ ಇರುತ್ತದೆ. ಪಕ್ಷಿಗಳ ರಾಜನೆಂದು ಕರೆಸಿಕೊಳ್ಳುವ ಗರುಡ ಪಕ್ಷಿಯ ಬೇಟೆಯಾಡುವದು ಮತ್ತು ತದನಂತರ ಮತ್ತೊಂದು ಪ್ರಾಣಿಗೆ ತಾನೇ ಆಹುತಿ ಆಗಿರುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ನೋಡಲು ಸಿಗುತ್ತಿದೆ.

ಪ್ರಸ್ತುತ ವೀಡಿಯೋದಲ್ಲಿ ಒಂದು ಚಿರತೆ ತನ್ನ ಮರಿಯನ್ನು ತಗೆದುಕೊಂಡು ಒಂದು ಸ್ಥಳದಲ್ಲಿ ವಿಶ್ರಾಂತಿ ಮಾಡುತ್ತಿರುತ್ತದೆ. ಆಗ ಮರಿ ತನ್ನ ತಾಯಿಯನ್ನು ಬಿಟ್ಟು ಆಡುತ್ತಾ ಒಂದು ಮರದ ಮೇಲೆ ಹತ್ತುತ್ತದೆ. ಇದನ್ನು ಅಲ್ಲಿ ಕುಳಿತ ತಾಯಿ ಚಿರತೆ ಗಮನವೇ ಕೊಡಲಿಲ್ಲ. ಆದರೆ ಈ ಪುಟ್ಟ ಮರಿಯನ್ನು ಮರದ ಮೇಲೆ ಕುಳಿತ ಬೃಹದಾಕಾರದ ಗರುಡ ನೋಡುತ್ತದೆ. ಈ ಮರಿಯನ್ನು ನೋಡಿದ ಕೂಡಲೇ ಬೇ#ಟೆಯಾಡಬೇಕು ಎಂದು ಮನದಲ್ಲಿಯೇ ವಿಚಾರ ಮಾಡಿ ಸರಿಯಾದ ಸಮಯಕ್ಕೆ ಕಾಯುತ್ತ ಕುಳಿತಿರುತ್ತದೆ. ಚಿರತೆ ಮರಿ ಮರದ ಮೇಲೆ ಹತ್ತಿದ ಕೂಡಲೇ ಗರುಡ ಪಕ್ಷಿ ಮರಿಯ ಮೇಲೆ ದಾಳಿ ಮಾಡಿ ಅದನ್ನು ಎತ್ತಿಕೊಂಡು ತನ್ನ ಗೂಡಿನ ಕಡೆಗೆ ಹೋಗುತ್ತದೆ.

ಗರುಡ ಪಕ್ಷಿ ಚಿರತೆಮರಿ ಎತ್ತಿಕೊಂಡು ಹೋಗುವಾಗ ಮರಿ ಜೋರಾಗಿ ಚಿರುತ್ತದೆ ಇದನ್ನು ಆಲಿಸಿದ ತಾಯಿ ಚಿರತೆ ತುಂಬಾ ಭ#ಯಗೊಂಡು ಆ ಗರುಡನ್ನು ಹಿಂಬಾಲಿಸುತ್ತದೆ. ಆದರೆ ಹಾರುವ ಗರುಡನ ಹಿಂದೆ ಹೋಗುವದು ಅಷ್ಟೊಂದು ಸುಲಭವಾದ ಕೆಲಸವಲ್ಲ. ಆದರೆ ಮರಿಗಾಗಿ ಏನಾದರೂ ಮಾಡಲು ಸಿದ್ದ ಎಂದುಕೊಂಡು ಚಿರತೆ ಗರುಡನ ಹಿಂದೆ ಹೋಗುತ್ತದೆ. ಗರುಡ ತನ್ನ ಗೂಡಿನಲ್ಲಿ ಮರಿಯನ್ನು ಎತ್ತಿಕೊಂಡು ಹೋಗಿ ಅದನ್ನು ತಿನ್ನುತ್ತಿರುತ್ತದೆ ಅಷ್ಟರಲ್ಲಿ ಮರಿಯ ವಾಸನೆಯನ್ನು ಕಂಡು ಹಿಡಿದು ಚಿರತೆ ಮರವನ್ನು ಹತ್ತುತ್ತ ಆ ಮರದಿಂದ ಈ ಮರಕ್ಕೆ, ಈ ಮರದಿಂದ ಆ ಮರಕ್ಕೆ ಹಾರುತ್ತ ಕೊನೆಗೆ ಗರುಡ ಮತ್ತು ಮರಿ ಇದ್ದ ಜಾಗಕ್ಕೆ ಹೋಗುತ್ತದೆ. ಹಿಂದಿನಿಂದ ಹೋಗಿ ಗರುಡ ಪಕ್ಷಿಯ ಕುತ್ತಿಗೆ ಹಿಡಿದು ಸ್ಥಳದಲ್ಲೇ ಅದರ ಕೆಲಸವನ್ನು ಮುಗಿಸಿ ಬಿಡುತ್ತದೆ. ಆದರೆ ಪಾಪ ತಾಯಿ ಚಿರತೆ ತನ್ನ ಮರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಅದ್ಭುತವಾದ ವೀಡಿಯೋ ನೋಡಿದರೆ ಆಶ್ಚರ್ಯ ವಾಗುತ್ತದೆ.

ನೋಡಿ ಈ ವಿಡಿಯೋ…

https://youtu.be/FthG-kBN7zI

 

ಪ್ರಸ್ತುತ ವಿಡಿಯೋ ಯೂಟ್ಯೂಬ್ ನಲ್ಲಿ like video ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಒಂದು ಮಿಲಿಯನ್ ಗೂ ಹೆಚ್ಚು ಜನರು ಈ ವೀಡಿಯೋವನ್ನು ನೋಡಿ ತಮ್ಮ ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.