ಗಜರಾಜನ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆಯಲು ಹೋಗಿ ಕಾಲಿನ ಮದ್ಯದಲ್ಲೇ ಸಿಕ್ಕಿಬಿದ್ದ ವಿಚಿತ್ರ ಭಕ್ತ! ನೋಡಿ ವೈರಲ್ ವಿಡಿಯೋ…!!

ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಹರಿದಾಡುತ್ತವೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ಮೇಲೆ ಈ ವ್ಯಕ್ತಿ ಎಂತಹ ವಿಚಿತ್ರವಾದ ಕಾರ್ಯ ಮಾಡಿದ್ದಾನೆ ಅಂದು ನೀವೇ ಹೇಳುವಿರಿ.

ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ಶಿವನ ದೇವಾಲಯದಲ್ಲಿ ಒಬ್ಬ ಭಕ್ತ ನಂದಿಯ ಆಶೀರ್ವಾದ ಪಡೆಯಲು ಹೋಗಿ ಆ ಗಜರಾಜನ ಮೂರ್ತಿಯ ಕಾಲುಗಳ ಮದ್ಯೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಹೊರಗಡೆ ತಗೆಯುವ ಸಲುವಾಗಿ ಅಲ್ಲಿದ್ದ ಭಕ್ತರು ಎಷ್ಟೇ ಪ್ರಯತ್ನ ಮಾಡಿದರು ಹೊರಗಡೆ ಬರುವದೇ ಇಲ್ಲ ಅಲ್ಲದೆ ಅಲ್ಲಿಯ ಪೂಜಾರಿಯು ಸಹ ಬಂದು ಆತನನ್ನು ಹೊರಗಡೆ ತಗೆಯುವ ಪ್ರಯತ್ನ ಮಾಡುತ್ತಾನೆ. ಆದ್ರೂ ಸಹ ಈ ವ್ಯಕ್ತಿ ಸಿಕ್ಕಿಬಿದ್ದ ಜಾಗದಿಂದ ಸ್ವಲ್ಪವೂ ಸರಿಯಲೇ ಇಲ್ಲ. ಈ ವ್ಯಕ್ತಿ ಸ್ವಲ್ಪ ದಪ್ಪಾಗಿರುವದರಿಂದ ಮೊದಲಿಗೆ ಹೋಗುವಾಗ ಆತನ ಕೈಗಳು ಮತ್ತು ತಲೆ ಎರಡು ನಂದಿಯ ಕೆಳಗಿನಿಂದ ಸರಾಗವಾಗಿ ಆ ಬದಿಗೆ ಹೋದವು ಆದರೆ ಹೊಟ್ಟೆಯ ಭಾಗ ಮಧ್ಯದಲ್ಲಿ ಬರುತ್ತಿದ್ದ ಹಾಗೆ ಸಿಕ್ಕಿ ಬೀಳುತ್ತಾನೆ ಹೀಗಾಗಿ ಅಲ್ಲಿದ್ದ ಜನರು ಎಷ್ಟೇ ಸಲ ಆತನನ್ನು ಎಳೆಯುವ ಪ್ರಯತ್ನ ಮಾಡಿದ್ರೂ ಸಹ ಬರಲೇ ಇಲ್ಲ ಆದ್ದರಿಂದ ಈ ವ್ಯಕ್ತಿಯನ್ನು ಹೊರಗೆ ಹೇಗೆ ತಗೆಯುವದು? ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಈ ವಿಡಿಯೋ ನೋಡಿದ ಮೇಲೆ ನೀವು ಸಹ ಆಶ್ಚರ್ಯ ಪಡುವಿರಿ.

ವಿಡಿಯೋ ನೋಡಿ.

https://twitter.com/Archana_Ambedkr/status/1597804110837059585?t=ZV2bGDk8ilbcLW2VM6fQRA&s=19

ನಂದಿಯನ್ನು ಶಿವನ ವಾಹನ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಪ್ರತಿ ಶಿವನ ದೇವಾಲಯದಲ್ಲಿ ನಂದಿ ವಿಗ್ರಹವನ್ನು ಕಾಣುತ್ತೇವೆ. ಪ್ರತಿಯೊಂದು ದೇವಾಲಯಗಳಲ್ಲಿ ವಿಶಿಷ್ಟವಾದ ದರ್ಶನವನ್ನು ಪಡೆಯುವ ಪದ್ದತಿ ಇರುತ್ತದೆ. ಕೆಲವೆಡೆ ನಂದಿಯ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಹೇಳಬೇಕಾಗುತ್ತದೆ ಇನ್ನು ಕೆಲವೆಡೆ ನಂದಿಯ ಮುಂದೆ ನಮಸ್ಕರಿಸಬೇಕಾಗುತ್ತದೆ. ದೇವಾಲಯಗಳಲ್ಲಿ ನಂದಿಯಂತೆ ಆನೆಯ ಮೂರ್ತಿ ಸಹ ಇಡುತ್ತಾರೆ. ಈ ವ್ಯಕ್ತಿ ನಂದಿಯಂತೆ ಆನೆಯ ಆಶೀರ್ವಾದ ಪಡೆಯಲು ಹೋಗುತ್ತಾನೆ ಆದರೆ ಈ ವ್ಯಕ್ತಿ ನೇರವಾಗಿ ಆನೆಯ ದೇಹದ ಕೆಳಗೆ ಹೋಗಲು ಯತ್ನಿಸುತ್ತಿದ್ದ. ಹೀಗೆ ಮಾಡುವುದರಿಂದ ಶಿವನ ಆಶೀರ್ವಾದ ಹೆಚ್ಚು ಸಿಗುತ್ತದೆ ಎಂದು ಆತನು ಭಾವಿಸಿದ್ದನು ಅನ್ನಿಸುತ್ತೆ. ಪಾಪ ಈ ರೀತಿಯ ಆಶೀರ್ವಾದ ಪಡೆಯುವದು ಆತನಿಗೆ ತುಂಬಾ ದುಬಾರಿ ಬಿದ್ದಿತು. ಈ ವ್ಯಕ್ತಿಯ ದಪ್ಪ ದೇಹದಿಂದಾಗಿ ಆತ ಪ್ರತಿಮೆಯ ಕೆಳಗೆ ಸಿಲುಕಿಕೊಂಡನು.

ಶಿವಭಕ್ತನನ್ನು ಹೊರಗೆ ಹೇಗೆ ತಗೆಯಲಾಯಿತು?

ಮಂದಿರದಲ್ಲಿಯ ಪೂಜಾರಿ ಮತ್ತು ಅಲ್ಲಿದ್ದ ಭಕ್ತಜನರು ಈ ವ್ಯಕ್ತಿಯನ್ನು ಹೊರಗಡೆ ತಗೆಯಲು ತುಂಬಾ ಪ್ರಯತ್ನ ಮಾಡುತ್ತಿದ್ದರು. ಆದರೂ ಸಹ ಆತ ಹೊರಗಡೆ ಬರಲೇ ಇಲ್ಲ ಏಕೆಂದರೆ ಆತನ ಅರ್ಧ ಶರೀರ ಮೂರ್ತಿಯ ಕೆಳಗಡೆ ಸಿಲುಕಿಕೊಂಡಿದೆ. ಆತನನ್ನು ಈಗ ಹೊರಗೆ ತಗೆಯುವದು ಹೇಗೆ? ವೀಡಿಯೋ ನೋಡಿದ ಮೇಲೆ ನೀವೇ ಹೇಳಿ ಈ ವ್ಯಕ್ತಿಯನ್ನು ಅವರು ಹೇಗೆ ಹೊರಗೆ ತಗೆದಿರಬಹುದು ಎಂಬುದು?