Video; ಮೈಕಲ್ ಜಾಕ್ಸನ್ ನೀನೋ? ನಾನೋ? ಎ#ಣ್ಣೆರಾಯ ಒಳಗಿದ್ದ ಮೇಲೆ ಚಾಲೆಂಜಾ? ಛೇ! ಏನಿದ್ದರೂ ಒಮ್ಮೆ ಆಗಿಯೇ ಹೋಗಲಿ…

ಸೋಶಿಯಲ್ ಮೀಡಿಯಾ ನಿಜಕ್ಕೂ ಅದ್ಭುತವಾಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ಅವರವರ ಇಷ್ಟದ ಕಂಟೆಂಟ್ ಗಳು ಸಿಕ್ಕೇ ಸಿಗುತ್ತವೆ. ಇದನ್ನು ಇಲ್ಲಿ ನೋಡಲು ಸಾಧ್ಯವೇ ಇಲ್ಲ ಎಂಬ ಮಾತೇ ಇಲ್ಲ. ಸದ್ಯ ಒಂದು ಎಣ್ಣೆ ಪ್ರಿಯರ ತಮಾಷೆಯ ವಿಡಿಯೋ ಇಲ್ಲಿ ನೋಡಲು ಸಿಗುತ್ತಿದೆ.

ಈ ವಿಡಿಯೋದಲ್ಲಿ ಇಬ್ಬರೂ ಆಪ್ತರು ಕಂಡು ಬರುತ್ತಿದ್ದಾರೆ. ಇಬ್ಬರೂ ಎಣ್ಣೆ ಸ್ನಾನ ಮಾಡಿದ್ದಾರೆಂದು ಮೊದಲ ನೋಟದಲ್ಲಿಯೇ ತಿಳಿದು ಬರುತ್ತದೆ. ಈ ಎಣ್ಣೆ ಏನೆಲ್ಲಾ ಮಾಡಿಸುತ್ತದೆ ಎಂಬುದು ಎಣ್ಣೆ ಹೊಡೆಯುವವರಿಗಿಂತ ಎಣ್ಣೆ ಹೊಡೆಯದವರಿಗೆ ಚೆನ್ನಾಗಿ ಗೊತ್ತು. ಯಾಕೆಂದರೆ ಅವರು ಈ ಸೀನ್ ಗಳನ್ನು ತುಂಬಾ ಗಮನ ಹರಿಸಿ ನೋಡುತ್ತಾರೆ.

ಸದ್ಯ ಇಲ್ಲಿಯ ಇಬ್ಬರೂ ಮಹಾರಥಿಗಳ ಕುಣಿತದ ದೃಶ್ಯ ನೋಡಿದಾಗ ನಕ್ಕು ನಕ್ಕು ಸಾಕಾಗುತ್ತದೆ. ಎಣ್ಣೆ ದೇಹದಲ್ಲಿ ಸೇರಿದ ನಂತರ ಮನುಷ್ಯನಿಗೆ ಏನೇನೋ ಮಾಡಲು ಹೇಳುತ್ತದೆ. ಕುಡುಕರ ಈ ದೃಶ್ಯವನ್ನು ಯಾರೋ ಒಬ್ಬರು ಶೂಟ್ ಮಾಡಿ ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ವಿಶೇಷವೆಂದರೆ ತಮ್ಮ ಈ ನೃತ್ಯಕ್ಕೆ ತಾವೇ ಇಬ್ಬರೂ ಚಪ್ಪಾಳೆ ತಟ್ಟಿ ಗೌರವಿಸಿಕೊಳ್ಳುತ್ತಿದ್ದಾರೆ.

ನೋಡಿ ಈ ತಮಾಷೆಯ ವಿಡಿಯೋ…

 

View this post on Instagram

 

A post shared by Harish Nani (@harish7029)

ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ 3 ಮಿಲಿಯನ್ ಜನರಿಗೆ ರಂಜಿಸಿದೆ. ಹಾಗೂ 2 ಲಕ್ಷ 66 ಸಾವಿರ ಜನರು ಈ ವೀಡಿಯೋವನ್ನು ಇಷ್ಟ ಪಟ್ಟಿದ್ದಾರೆ.