Video; ಮಂಗ ಸಲೀಸಾಗಿ ತೆಗೆದುಕೊಂಡಿತು ಅಂಕಲ್ ನ ಕನ್ನಡಕ! ಪಾಪ ಅಂಕಲ್ ಪೆಚ್ಚು ಮೋರೆ ಹಾಕಿ ನೋಡಿದ್ದು ಹಿಂದೆ ಮುಂದೆ!

ಮಂಗಣ್ಣನ ಚೇಷ್ಟೆಗಳ ವಿಡಿಯೋಗಳು ನೆಟ್ಟಿಗರಿಗೆ ನೋಡಲು ತುಂಬಾ ಇಷ್ಟ. ಇದು ಒಂದು ರೀತಿಯಲ್ಲಿ ಗರಮಾ ಗರಮ್ ಟೇಸ್ಟಿ ಚೌ ಚೌ ಬಾತ್ ಇದ್ದ ಹಾಗೆ. ಕ್ಷಣದಲ್ಲಿ ಮಾರಾಟವಾಗಿ ಬಿಡುತ್ತೆ ಎನ್ನೋತರ. ಮಂಗನ ಅನೇಕ ಚೇಷ್ಟೆಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿಯ ಯೂಸರ್ಸ್ ಗಳಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತವೆ.

ಸದ್ಯ ಈ ವಿಡಿಯೋದಲ್ಲಿಯೂ ಮಂಗ ತನ್ನ ಗುಣಕ್ಕೆ ತಕ್ಕಂತೆ ಕುಚೇಷ್ಟೆ ಒಂದನ್ನು ಮಾಡಿದೆ. ಅದು ಮಾಡಿದ ಚೇಷ್ಟೆ ಮಹಾನುಭಾವನೊಬ್ಬ ಸರಿಯಾಗಿ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ.

ಮೊದಲು ಆ ಮಂಗ ಮಾಡಿದ ಕಿತಾಪತಿಯ ವಿಡಿಯೋ ನೋಡಿ…

ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ಅಂಕಲ್ ನೊಬ್ಬ ಧರಿಸಿದ ಕನ್ನಡಕವನ್ನು ಮಂಗ ಮೇಲಿಂದಲೇ ಸಹಜವಾಗಿ ಕಿತ್ತುಕೊಂಡು ಹೋಗಿದೆ. ಪಾಪ ವ್ಯಕ್ತಿ ತನ್ನ ಕನ್ನಡಕ ಯಾರು ತೆಗೆದುಕೊಂಡರೆಂದು ಗಾಬರಿಯಾಗಿ ಹಿಂದೆ ಮುಂದೆ ನೋಡುತ್ತಿರುವಾಗಲೇ ಮಂಗ ಬಿರಬಿರನೆ ಎಂಗಲ್ ಹಿಡಿದು ಮೆಲೇರುತ್ತ ಹೋಗುತ್ತದೆ.

ವೀಡಿಯೋ ನೋಡಿ

ಮಂಗನ ಆವಾಂತರದ ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೆ ಜನರು ನೋಡಿ ಆನಂದಿಸಿದ್ದಾರೆ. ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ 3 ಲಕ್ಷ 33 ಸಾವಿರ ಜನರು ಲೈಕ್ ಮಾಡಿದ್ದಾರೆ.