ಮುಂಬಯಿ AC ಲೋಕಲ್ ತಗಾದೆ; ಒಬ್ಬಳೇ ಮಹಿಳೆಯಿಂದಾಗಿ ಸೆನ್ಸರ್ ಡೋರ್ ಆಗುತ್ತಿಲ್ಲ ಕ್ಲೋಸ್! ಮೋಟರ್ ಮನ್ ಮಾಡಿದ ಈ ಐಡಿಯಾ.
ಜಗತ್ತಿನಲ್ಲಿಯೇ ಮುಂಬಯಿ ಜೀವನ ತುಂಬಾ ವೇಗವಾದದ್ದು. ಇಲ್ಲಿಯ ಲೋಕಲ್ ಟ್ರೈನ್ ಮುಂಬಯಿಯ ಲೈಫ್ ಲೈನ್ ಎಂದೇ ಹೇಳುತ್ತಾರೆ. ಪ್ರತಿದಿನ ಮುಂಬಯಿಯ ಲೋಕಲ್ ಟ್ರೈನ್ ನಲ್ಲಿ ಪ್ರವಾಸ ಮಾಡುವವರ ಪ್ರವಾಸಿಗರ ಸಂಖ್ಯೆ ಸುಮಾರು 8 ಮಿಲಿಯನ್ ಎಂದು ಅಂದಾಜಿಸಲಾಗಿದೆ.
ಸದ್ಯ ಮುಂಬಯಿ ಜನರಿಗೆ AC ಲೋಕಲ್ನ ಸೌಲಭ್ಯವನ್ನು ಭಾರತೀಯ ರೈಲು ನೀಡುತ್ತಿದೆ. ಮೊದಲು ಈ ಎಸಿ ಲೋಕಲ್ ಗಳಲ್ಲಿ ಅಷ್ಟೊಂದು ಜನದಟ್ಟಣೆ ಇರುತ್ತಿರಲಿಲ್ಲ. ಕ್ರಮೇಣ ಈ ಎಸಿ ಲೋಕಲ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮುಂಜಾವು ಮತ್ತು ಸಾಯಂಕಾಲದ ಹೊತ್ತಿಗೆ ಎಸಿ ಲೋಕಲ್ ಗಳು ಸಹ ಸಾಮಾನ್ಯ ಲೋಕಲ್ ಗಳಂತೆ ಫುಲ್ ರಶ್ ಆಗುತ್ತಿವೆ. ಜನದಟ್ಟಣೆಯಿಂದಾಗಿ ಡೋರ್ ನಲ್ಲಿ ಪ್ರವಾಸಿಗರು ನಿಂತರೆ ಸೆನ್ಸರ್ನಿಂದ ಕೂಡಿದ ಈ ಡೋರ್ ಗಳು ಮುಚ್ಚಿಕೊಳ್ಳುವದಿಲ್ಲ. ಎಲ್ಲಿಯವರೆಗೆ ಡೋರ್ ಕ್ಲೋಸ್ ಆಗುವುದಿಲ್ಲವೋ ಅಲ್ಲಿಯವರೆಗೆ ಈ ಲೋಕಲ್ ಟ್ರೈನ್ ಮುಂದೆ ಚಲಿಸಲು ಸಾಧ್ಯವೇ ಇಲ್ಲ.
ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ತನ್ನಿಂದ ಡೋರ್ ಕ್ಲೋಸ್ ಆಗದಿದ್ದರೂ ಟ್ರೈನಿಂದ ಇಳಿಯಲು ತಯಾರಿಲ್ಲ. ಒಳಗೆ ಹೋಗಲು ಜಾಗವಿಲ್ಲದಿದ್ದರೂ ಬಾಗಿಲಲ್ಲಿಯೇ ನಿಂತು ಪೊಲೀಸರ ಜೊತೆಗೆ ವಾದ ಮಾಡುತ್ತಿದ್ದಾಳೆ, ವಿನಹ ತನ್ನಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ ಎಂಬ ಕಲ್ಪನೆ ಇಲ್ಲ.
ಪೊಲೀಸರ ಜೊತೆಗೆ ವಾದ ವಿವಾದಕ್ಕೆ ಇಳಿದ ಮಹಿಳೆಯನ್ನು ನೋಡಿ ಬೇಸತ್ತ ಮೋಟರ್ ಮನ್ ಕೊನೆಗೆ ತನ್ನ ಕ್ಯಾಬಿನ್ ನಲ್ಲಿಯೇ ಕೂಡಿಸಿ ಕೊಳ್ಳಲು ಆಕೆಯನ್ನು ಕರೆದುಕೊಂಡು ಹೋಗುತ್ತಾನೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋವನ್ನು instagram ನಲ್ಲಿ ಶೇರ್ ಮಾಡಲಾಗಿದ್ದು 20 ಮಿಲಿಯನ್ ಗಳವರೆಗೆ ಈ ವಿಡಿಯೋ ವೀಕ್ಷಣೆ ಪಡೆದಿದೆ. ಅಷ್ಟೇ ಅಲ್ಲ ಈ ವಿಡಿಯೋಗೆ 2 ಲಕ್ಷ 78 ಸಾವಿರ ಜನರು ಲೈಕ್ ಮಾಡಿದ್ದಾರೆ.