Video: ಹವೆಯಲ್ಲಿ ಹಾರಡುತ್ತಿರುವ ಆನೆ, ಏನಿದು ರಹಸ್ಯ ವೀಡಿಯೋ ನೋಡಿ ಗೊತ್ತಾಗುತ್ತೆ!!

ರೆಕ್ಕೆಗಳನ್ನು ಹೊಂದಿರುವ ಅಥವಾ ಗಾಳಿಯಲ್ಲಿ ಹಾರುವ ಹೆಚ್ಚಿನ ಜೀವಿಗಳನ್ನು ಪಕ್ಷಿಗಳು ಎಂದು ಕರೆಯಲಾಗುತ್ತದೆ. ಪಕ್ಷಿಗಳು ಎತ್ತರದ ಪರ್ವತಗಳನ್ನು ಸಹ ಸುಲಭವಾಗಿ ದಾಟಬಹುದು. ಆದರೆ, ಕೆಲವು ಪಕ್ಷಿಗಳು ರೆಕ್ಕೆಗಳನ್ನು ಹೊಂದಿದ್ದರೂ ಸಹ ಎತ್ತರಕ್ಕೆ ಹಾರಲು ಸಾಧ್ಯವಿಲ್ಲ ಅಥವಾ ಸ್ವಲ್ಪ ಸಮಯದವರೆಗೆ ಮಾತ್ರ ಹಾರಬಲ್ಲವು. ಈ ಪಕ್ಷಿಗಳು ತಮ್ಮ ರೆಕ್ಕೆಗಳ ಸಹಾಯದಿಂದ ಹೆಚ್ಚು ದೂರ ಹಾರಲು ಸಾಧ್ಯವಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ಎಲ್ಲರನ್ನೂ ಬೆರಗುಗೊಳಿಸಿದೆ. ಈ ವಿಡಿಯೋ ಆನೆಯದ್ದಾಗಿದೆ. ಈ ವಿಡಿಯೋದಲ್ಲಿ ಆನೇಯು ಹವೆಯಲ್ಲಿ ಹಾರುತ್ತಿರುವುದನ್ನು ಕಾಣಬಹುದು.

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋ ನೋಡಿದ ಮೇಲೆ ನಿಮಗೆ ಆಶ್ಚರ್ಯವಾಗಬಹುದು, ಏಕೆಂದರೆ ಈ ವಿಡಿಯೋದಲ್ಲಿ ಒಂದು ಆನೆ ಹವೆಯಲ್ಲಿ ಹಾರಡುತ್ತಿದೆ. ಇದನ್ನು ಕೇಳಿದ ಮೇಲೆ ಇದರ ಮೇಲೆ ನಿಮಗೆ ನಂಬಿಕೆ ಬರದೆ ಇರಬಹುದು. ಆದರೆ ವೀಡಿಯೋ ನೋಡಿದ ಮೇಲೆ ನೀವು ಅನ್ನಬಹುದು ಆಕಾಶದಲ್ಲಿ ಆನೆ ಹಾರಡುತ್ತಿದೆ ಅಂತ. ವೀಡಿಯೋ ಕೊನೆಯವರೆಗೆ ನೋಡಿದ ಮೇಲೆ ಗೊತ್ತಾಗುವದು ಅದರ ರಹಸ್ಯ ಏನಂತ.

ವೀಡಿಯೋ ನೋಡಿ

 

View this post on Instagram

 

A post shared by MEMER Boy (@memerboy012)

ಈ ವೀಡಿಯೋದಲ್ಲಿ ಒಂದು ಆನೆಯ ಪ್ರತೀಮೆಯನ್ನು ಬಟ್ಟೆಯ ಸಹಾಯದಿಂದ ತಯಾರು ಮಾಡಿ ಅದನ್ನು ನೆಲದ ಮೇಲೆ ಇಟ್ಟಿರುತ್ತಾರೆ. ಆಕಸ್ಮಿಕವಾಗಿ ಜೋರಾಗಿ ಸುಂಟರಗಾಳಿ ಬಂದು ಆ ಪ್ರತಿಮೆಯನ್ನು ಹವೆಯಲ್ಲಿ ಹಾರಿ ಹೋಗುತ್ತದೆ. ಹವೆಯಲ್ಲಿ ಹಾರುತ್ತಿರುವಾಗ ಪ್ರತಿಮೆಯಲ್ಲಿ ಹವೆ ತುಂಬಿ ಅದು ನಿಜವಾಗಿಯೂ ಆನೆ ಇದ್ದ ಹಾಗೆ ಕಾಣುತ್ತದೆ. ಹೀಗಾಗಿ ನೋಡಿದ ಎಲ್ಲರೂ ಸಹ ಆನೆ ನಿಜವಾಗಿಯೂ ಆಕಾಶದಲ್ಲಿ ಹಾರಡುತ್ತಿದೆ ಅಂತ ತಿಳಿದುಕೊಳ್ಳುತ್ತಾರೆ.

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ memerboy012 ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ ಮಾಡಿದ್ದಾರೆ.