Video: ಆಹಾರಕ್ಕಾಗಿ ಮಾಲೀಕನ ಬಳಿ ಹೋದ ಹಸು, ಬೇಡಿದ್ದ ಸ್ಥಳದಲ್ಲೇ ಆಹಾರ ನೀಡಲು ನಿರಾಕರಿಸಿದ ಮಾಲೀಕನನ್ನು ಹಸು ಮಾಡಿದ್ದೇನು ನೋಡಿ!!!
ಹಸುವನ್ನು ಗೋಮಾತೆ ಅಂತ ಕರೆಯುತ್ತೇವೆ. ಹಸುವನ್ನು ಕಾಮಧೇನು ಅಂತಲೂ ಸಹ ಕರೆಯುತ್ತೇವೆ. ಹಸುವಿನಲ್ಲಿ 28 ಕೋಟಿ ದೇವರ ಅವಿತು ಕುಳಿತುಕೊಂಡಿದ್ದಾರೆ ಎಂಬುದು ನಮ್ಮ ಸಂಸ್ಕೃತಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಹಸುವನ್ನು ನಮಸ್ಕರಿಸುವದು ತುಂಬಾನೇ ಫಲದಾಯಕವಾಗಿದೆ. ಹಸು ನಮ್ಮ ಜೀವನಕ್ಕೆ ತುಂಬಾನೇ ಉಪಯುಕ್ತವಾದ ಪ್ರಾಣಿಯಾಗಿದೆ. ಹಸುವಿನ ಹಾಲಿನಿಂದ ಚಿಕ್ಕಮಕ್ಕಳ ಆರೋಗ್ಯ ಕಾಪಾಡುವದರ ಜೊತೆಗೆ ಅವರ ಬೆಳವಣಿಗೆ ಉತ್ತಮವಾಗುತ್ತದೆ. ನಾವು ಸಹ ಹಸುವಿನ ಹಾಲು ಸೇವನೆ ಮಾಡಿದರೆ ನಮ್ಮ ಪಚನಕ್ರಿಯೆ ಉತ್ತಮವಾಗಿ ಕೆಲಸ ಮಾಡುತ್ತೆ.
ಹಸುವಿನ ಹಾಲಿನ ಜೊತೆಗೆ ಅದರ ಮೂತ್ರ ಸಹ ನಮಗೆ ತುಂಬಾ ಉಪಯೋಗ ಕಾರಿಯಾಗಿದೆ. ಹಸುವಿನ ಮೂತ್ರದಲ್ಲಿ ರೋಗ ದೂರು ಮಾಡುವ ಶಕ್ತಿ ಇರುತ್ತದೆ ಹೀಗಾಗಿ ನಾವು ಮುಂಜಾನೆಯ ಸಮಯದಲ್ಲಿ ಐದು ಸ್ಪೂನ್ ನಷ್ಟು ಗೋಮೂತ್ರ ಸೇವನೆ ಮಾಡಿದರೆ ನಮ್ಮ ಶರೀರದಲ್ಲಿದ್ದ ರೋಗ ದೂರವಾಗುವದರ ಜೊತೆಗೆ ನಮ್ಮ ಶರೀರದಲ್ಲಿಯ ಕೆಟ್ಟ ಶಕ್ತಿ ಸಹ ದೂರವಾಗುತ್ತೆ ಅಂತ ಶಾಸ್ತ್ರ ಹೇಳುತ್ತೆ. ಅದಕ್ಕಾಗಿಯೇ ಪ್ರತಿಯೊಂದು ದೇವಾಲಯದಲ್ಲಿ ತೀರ್ಥದಲ್ಲಿ ಗೋಮೂತ್ರ ಹಾಗೂ ಗೋವಿನ ಹಾಲಿನ ಮಿಶ್ರಣವಿರುತ್ತೆ. ಗೋವಿನ ಕುರಿತು ಎಷ್ಟೇ ಹೇಳಿದರು ಸಾಲದು.
ಗೋಮಾತೆಯ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಒಂದು ಆಕಳು ತಾನು ಸಾಕಿದ ಮಾಲೀಕನ ಬಳಿ ಆಹಾರ ಕೇಳಲು ಹೋಗುತ್ತೆ. ನಮಗೆಲ್ಲ ಗೊತ್ತೇ ಇದೆ ನಮಗೆ ಹಸಿವಾದಾಗ ನಾವು ಹೋಟೆಲ್ ಅಥವಾ ಮನೆಯಲ್ಲಿ ಹೋಗಿ ಊಟ ಮಾಡುತ್ತೇವೆ. ಅದೇ ರೀತಿಯಾಗಿ ಈ ಆಕಳು ಸಹ ತುಂಬಾ ಹಸಿವಾಗಿ ಮಾಲೀಕನ ಬಳಿ ಆಹಾರ ಕೇಳಲು ಹೋಗುತ್ತದೆ. ಆದರೆ ಮಾಲೀಕನು ಈ ಆಕಳಿಗೆ ಆಹಾರ ನೀಡಲು ನಿರಾಕರಿಸುತ್ತಾನೆ. ಹಸಿವಿದ್ದಾಗಲೇ ಅನ್ನದ ರುಚಿ ಹೆಚ್ಚಾಗುತ್ತೆ ಅಂತ ಹೇಳುತ್ತಾರೆ ಒಂದು ಹಸಿದ ಸಮಯದಲ್ಲಿ ಆಹಾರ ಮುಂದಿದ್ದರು ಸಹ ಅದು ನಮಗೆ ಕೊಡದೆ ಇದ್ದಾಗ ನಾವು ಎಷ್ಟು ಕೋಪಗೊಳ್ಳುತ್ತೇವೆ ಎಂಬುದು ಹೇಳುವ ಅವಶ್ಯಕತೆನೆ ಇಲ್ಲ. ಈ ಗೋಮಾತೆ ಸಹ ಆಹಾರ ಇದ್ದರು ಸಹ ಮಾಲೀಕನು ಇದಕ್ಕೆ ಕೊಡಲು ನಿರಾಕರಿಸಿದ್ದಾಗ ಆಕಳು ಮಾಡಿರುವ ಕೃತ್ಯ ನೋಡಿದರೆ ಆಶ್ಚರ್ಯ ಪಡುವಿರಿ.
ಮಾಲೀಕನು ಆಹಾರ ಕೊಡಲು ನಿರಾಕರಿಸಿದ ನಂತರ ಆಕಳು ತನ್ನಷ್ಟಕ್ಕೆ ತಾನು ಮುಂದೆ ನಡೆದಿರುತ್ತದೆ. ಆಗ ಮಾಲೀಕ ಆಹಾರವನ್ನು ಒಂದು ಬುಟ್ಟಿಯಲ್ಲಿ ಹಿಡಿದುಕೊಂಡು ಅದರ ಹಿಂದೆ ಬರುತ್ತೀರುತ್ತಾನೆ ಇದನ್ನು ಗಮನಿಸಿದ ಹಸು ಈತನಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಹಿಂದಿನ ಕಾಲಿನಿಂದ ಜೋರಾಗಿ ಆ ಬುಟ್ಟಿಗೆ ಒದೆಯುತ್ತದೆ. ಅದರ ಲತ್ತೆಯ ಪೆಟ್ಟು ಜೋರಾಗಿ ಬುಟ್ಟಿಗೆ ಬಿದ್ದುದರಿಂದ ಆತನ ಕೈಯಲ್ಲಿದ್ದ ಆಹಾರ ಹಾರಿ ದೂರಕ್ಕೆ ಬೀಳುತ್ತವೆ. ಸರಿಯಾಗಿ ಏಟು ಬುಟ್ಟಿಗೆ ಬಿದ್ದುದ್ದರಿಂದ ಆತನಿಗೆ ಯಾವುದೇ ಪ್ರಕಾರದ ಹಾನಿಯಾಗಲಿಲ್ಲ ಒಂದು ವೇಳೆ ಆ ಒದೆ ಆತನಿಗೆ ಬಿದ್ದಿದ್ದರೆ ಆತನ ಗತಿನೇ ಬೇರೆ ಯಾಗಿರುತ್ತಿತ್ತು.
ವಿಡಿಯೋ ನೋಡಿ.
View this post on Instagram
ಈ ಹಸುವಿನ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ muraash ಎಂಬ ಯುಜರ್ಸ್ ತಮ್ಮ ಖಾತೆಯ ಮುಖಾಂತರ ಶೇರ್ ಮಾಡಿದ್ದಾರೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಹದಿಮೂರು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ.