ರಸ್ತೆ ಬದಿ ನಿಂತು ಸುಂದರ ದನಿಯಲ್ಲಿ ಮಹಿಳೆ ಹಾಡಿದಳು ಖ್ಯಾತ ಗಾಯಕಿಯ ಹಾಡು; 6 ಲಕ್ಷ ಜನರ ವೀಕ್ಷಣೆ ಪಡೆದ ವಿಡಿಯೋ…
ಸ್ಟೇಷನ್ ನಲ್ಲಿ ನಿಂತು ಹಾಡಿ ಸೋಷಿಯಲ್ ಮೀಡಿಯಾದಿಂದ ಪ್ರಸಿದ್ಧಿಯನ್ನು ಪಡೆದ ರಾನು ಮಂಡಲ್ ಅವರನ್ನು ಮರೆಯಲು ಸಾಧ್ಯವೇ? ಸದ್ಯ ಇದೇ ರೀತಿ ಬೇರೆ ಮಹಿಳೆಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ತನ್ನ ಗಾಯನದಿಂದ ಪ್ರಭಾವ ಬೀರಿದ್ದಾಳೆ. ಗಾನ ಕೋಗಿಲೆ ಲತಾ ಮಂಗೇಷ್ಕರ್ ಅವರ ಹಾಡನ್ನು ತುಂಬಾ ಇಂಪಾಗಿ ಹಾಡಿದ ಈ ಮಹಿಳೆಯ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ನೆಟ್ಟಿಗರಿಗೆ ಸಖತ್ ಇಷ್ಟವಾದ ಕಂಟೆಂಟ್ ಆಗಿದೆ.
ಮಹಿಳೆ ಮಹಾರಾಷ್ಟ್ರದ ಮಹಾಬಲೇಶ್ವರನಲ್ಲಿ ಲತಾ ದೀದಿಯ ಸೂಪರ್ ಸಾಂಗ್ ಹಾಡಿ ರಸಿಕರಿಗೆ ಮಂತ್ರ ಮುಗ್ಧ ಮಾಡಿದ್ದಾಳೆ. ಮಹಿಳೆಯ ಈ ಇಂಪಾದ ದನಿ ಲಕ್ಷಾವಧಿ ಜನರಿಗೆ ಸಂಮ್ಮೋಹನಗೊಳಿಸಿದೆ. ವಿಡಿಯೋದ ಕ್ಯಾಪ್ಶನ್ ನಲ್ಲಿ “ನಮಗೆ ಹೊಸ ಸಿಂಗರ್ ದೊರಕಿದಳು” ಎಂದು ಬರೆಯಲಾಗಿದೆ. ದಯವಿಟ್ಟು ಈಕೆಗೆ ಸಪೋರ್ಟ್ ಮಾಡಿ ಎಂದು ಬೇರೆ ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ಮಹಿಳೆ 1966 ರಲ್ಲಿ ತೆರೆ ಕಂಡ ಆಯೇ ದಿನ್ ಬಹಾರ ಕೆ ಚಿತ್ರದ ಸುನೋ ಸಜನಾ… ಎಂಬ ಹಾಡನ್ನು ಹಾಡಿದ್ದಾಳೆ.
ನೋಡಿ ಈ ವಿಡಿಯೋ…
View this post on Instagram
ವಿಡಿಯೋ ನೋಡಿದ ನಂತರ ನೆಟ್ಟಿಗರು ಸಖತ್ ಒಳ್ಳೆಯ ರಿಯಾಕ್ಷನ್ ನೀಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ನಂತರ ಇಲ್ಲಿಯವೆರೆಗೆ 6.5 ಲಕ್ಷಕ್ಕೂ ಮೇಲ್ಪಟ್ಟು ವೀಕ್ಷಣೆಯನ್ನು ಪಡೆದಿದೆ. ಮತ್ತು 90 ಸಾವಿರಕ್ಕೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ವ್ಯಕ್ತಿಯೊಬ್ಬ ಈ ಟ್ಯಾಲೆಂಟ್ ರಾನು ಮಂಡಲ್ ಗಿಂತಲೂ 10 ಪಟ್ಟು ಸೊಗಸಾಗಿದೆ ಎನ್ನಾಗಿದ್ದಾರೆ. ಇನ್ನೊಬ್ಬ ‘ಓ ದೇವರೇ ಈ ಮಹಿಳೆಯಲ್ಲಿ ನಿಜಕ್ಕೂ ಟ್ಯಾಲೆಂಟ್ ಇದೆ’ ಎಂದಿದ್ದಾನೆ.