ಮೂರು ಘೇಂಡಾ (rhinoceros) ಗಳ ವಿರುದ್ಧ ಏಕಕಾಲಕ್ಕೆ ಹೋರಾಡಿ, ಅವುಗಳನ್ನು ಓಡಿಸಿದ ಡೇರಿಂಗ್ ಜಿಂಕೆ..!!! ನೋಡಿ ಈ VIDEO.
ಸೋಶಿಯಲ್ ಮಿಡಿಯಾದ ಜಗತ್ತಿನಲ್ಲಿ ಪ್ರಾಣಿಗಳ ಒಂದಕ್ಕಿಂತ ಒಂದು ಅದ್ಭುತವಾದ ವೀಡಿಯೋಗಳು ನೋಡಲು ಸಿಗುತ್ತವೆ. ಈ ವಿಡಿಯೋಗಳ ಮೂಲಕ ನಮಗೆ ಅದ್ಭುತವಾದ ಮನರಂಜನೆ ಸಿಗುವದರ ಜೊತೆಗೆ ಪ್ರಾಣಿಗಳ ಕುರಿತು ಅನೇಕ ಹೊಸ ಹೊಸ ಮಾಹಿತಿ ಹಾಗೂ ಪಾಠಗಳು ಕಲಿಯಲು ಸಿಗುತ್ತವೆ.
ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿಯ ಅನೇಕ ಯೂಸರ್ಸ್ ಗಳು ಪ್ರಾಣಿಗಳ ಕುರಿತು ತುಂಬಾ ಪ್ರೀತಿ, ಸಂವೇದನೆಯನ್ನು ಹೊಂದಿದ್ದಾರೆ. ಪ್ರಾಣಿಗಳನ್ನು ಪಾಲನೆ ಪೋಷಣೆಯ ಜೊತೆಗೆ ಅವುಗಳನ್ನು ಪ್ರೀತಿಸುವುದು ಮತ್ತು ಅವುಗಳ ಕುರಿತು ಹೆಚ್ಚಾಗಿ ಮಾಹಿತಿ ಪಡೆದುಕೊಳ್ಳಲು ತುಂಬಾ ಜನರು ಆಸಕ್ತಿಯನ್ನು ತೋರುತ್ತಾರೆ. ಪ್ರಾಣಿಗಳನ್ನು ಕಂಡರೆ ಸಾಕು ಕೆಲವೇ ಸಮಯದಲ್ಲಿ ಅವಗಳೊಂದಿಗೆ ಸ್ನೇಹ ಬೆಳೆಸುವ ಸಾಮರ್ಥ್ಯ ಸಹ ಕೆಲವರಲ್ಲಿ ಇರುತ್ತದೆ. ಹೀಗಾಗಿ ಅವರನ್ನು ಪ್ರಾಣಿಪ್ರೀಯರೆಂದೇ ಗುರುತಿಸುತ್ತಾರೆ.
ಪ್ರಸ್ತುತ ಪ್ರಾಣಿಗಳ ವೀಡಿಯೋ ಒಂದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಈಗ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಒಂದು ಬಹದ್ದೂರ್ ಜಿಂಕೆ ತನ್ನ ವಾಸಸ್ಥಾನದಲ್ಲಿ ಆಕಸ್ಮಿಕವಾಗಿ ಎಂಟ್ರಿ ಮಾಡಿದ ಮೂರು ಬೃಹದಾಕಾರದ ಘೇಂಡಾಮೃಗಗಳ ವಿರುದ್ಧ ಧೈರ್ಯದಿಂದ ಹೋರಾಟ ಮಾಡಿ ಅಲ್ಲಿಂದ ಓಡಿಸಿ ಹಾಕುತ್ತಿರುವದನ್ನು ನೀವು ನೋಡಬಹುದು. ಈ ವಿಡಿಯೋ ನೋಡಿದ ಕೂಡಲೇ ನಿಮಗೆ ಗೊತ್ತಾಗುತ್ತೆ ಇಷ್ಟೊಂದು ಬೃಹದಾಕಾರದ ಮೂರು ಪ್ರಾಣಿಗಳನ್ನು ಕೇವಲ ಒಂದು ಜಿಂಕೆ ಅದ್ಹೇಗೆ ಅಟ್ಟಿಸಿ ಓಡಿಸಿದೆ ಎಂದು ಆಶ್ಚರ್ಯವಾಗುತ್ತೆ. ಅದಕ್ಕೆ ಅನ್ನೋದು ‘ಶಕ್ತಿಗಿಂತಲೂ ಯುಕ್ತಿ ಮೇಲು’ ಅಂತ . ಅಷ್ಟೊಂದು ಶಕ್ತಿ ಹೊಂದಿರುವ ಘೇಂಡಾಮೃಗಗಳು ಕೇವಲ ಒಂದು ಜಿಂಕೆಗೆ ಇಷ್ಟೊಂದು ಹೆದರಿ ಓಡುತ್ತವೆ ಅಂದರೆ ಆ ಜಿಂಕೆಯ ಧೈರ್ಯಕ್ಕೆ ಮೆಚ್ಚಲೇ ಬೇಕು.
ವೀಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ gang_of_billa ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.