VIDEO; ಹಾವಾಡಿಗನ ಪುಂಗಿಯ ನಾದಕ್ಕೆ ಶಾಪ್ ನಿಂದ ಹೊರಬಂದ ಈ ವಿಚಿತ್ರ ಹಾವನ್ನಾದರೂ ಒಮ್ಮೆ ನೋಡಿ! 🤣🤣
ಸೋಶಿಯಲ್ ಮೀಡಿಯಾದಲ್ಲಿ ಹರಿದು ಬರುವ ಒಂದಕ್ಕಿಂತ ಒಂದು ಸುಂದರ ವಿಡಿಯೋಗಳು ನೆಟ್ಟಿಗನಿಗೆ ತುಂಬಾ ಮನರಂಜನೆಯನ್ನು ನೀಡುತ್ತವೆ. ಅದರಲ್ಲೂ ಕೆಲವೊಂದು ವಿಡಿಯೋಗಳಲ್ಲಿಯ ಹಾಸ್ಯದ ವಿಶೇಷ ಪ್ರಸಂಗಗಳು ಕುಂತರೂ ನಿಂತರೂ ನೆನಪಿಗೆ ಬರುತ್ತವೆ ಹಾಗೂ ನಗೆಗಡಲಲ್ಲಿ ತೇಲಿಸುತ್ತವೆ.
ಪ್ರಸ್ತುತ ವಿಡಿಯೋದಲ್ಲಿಯ ದೃಶ್ಯವೂ ಸಹ ತುಂಬಾ ತಮಾಷೆಯಿಂದ ಕೂಡಿದೆ. ಈ ವಿಡಿಯೋದಲ್ಲಿ ಹಾವಾಡಿಗನೊಬ್ಬ ತನ್ನ ಹೊಟ್ಟೆಯ ಪಾಡಿಗಾಗಿ ಅಂಗಡಿಯೊಂದರ ಮುಂದೆ ನಿಂತು ಪುಂಗಿಯನ್ನು ಬಾರಿಸುತ್ತಿದ್ದಾನೆ. ಆಗ ಕೆಲವೇ ಕ್ಷಣಗಳಲ್ಲಿ ಅಂಗಡಿಯ ಬಾಗಿಲಿನಿಂದ ಯುವಕನೊಬ್ಬ ಹಾವು ದೇಹದಲ್ಲಿ ಸೇರಿಕೊಂಡಂತೆ ನಟನೆ ಮಾಡುತ್ತಾ ತುಂಬಾ ಸೀರಿಯಸ್ ಆಗಿ ಹಾವಾಡಿಗನ ಮುಂದೆ ಬರುತ್ತಾನೆ. ಯಾವುದರ ಯೋಚನೆಯೇ ಇಲ್ಲದೇ ಮೊದಮೊದಲು ಹಾವಾಡಿಗ ನಿರ್ಭಯದಿಂದ ಸಾಮಾನ್ಯವಾಗಿ ಪುಂಗಿಯನ್ನು ಊದುತ್ತಾ ಹಾಗೆ ನಿಲ್ಲುತ್ತಾನೆ. ಆದರೆ ಯುವಕ ಮಾತ್ರ ತುಂಬಾ ಗಾಂಭೀರ್ಯದಿಂದ ಮೈಯಲ್ಲಿ ನಾಗದೇವತೆಯೇ ಸೇರಿಕೊಂಡಿದ್ದಾಳೆ ಎಂಬಂತೆ ನಟಿಸುತ್ತಾ ಹಾವಾಡಿಗನ ಮುಂದೆ ಯಾವಾಗ ಕಚ್ಚಲು ಬರುತ್ತಾನೆ, ಆಗ ಮಾತ್ರ ಹಾವಾಡಿಗ ಅಲ್ಲಿಂದ ಓಡುವುದೊಂದೇ ಬಾಕಿ ಎಂದು ತಿಳಿದು ತನ್ನ ಕಾಲುಗಳಿಗೆ ಬುದ್ಧಿ ಹೇಳುತ್ತಾನೆ.
ನೋಡಿ ಈ ತಮಾಶೆಯ ವಿಡಿಯೋ…
View this post on Instagram
ಈ ವಿಶೇಷವಾದ ಕ್ರಿಯೇಟಿವ್ ವಿಡಿಯೋ instagram ನಲ್ಲಿ abhi _yadav739890 ಹೆಸರಿನ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿ ಆನಂದಿಸಿದ್ದಲ್ಲದೆ ಸುಮಾರು 60 ಸಾವಿರ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.