ಜೋರಾದ ಸಪ್ಪಳದೊಂದಿಗೆ ಆಕಾಶದಿಂದ ಬಿದ್ದ ಹೊಳೆಯುತ್ತಿರುವ ರಹಸ್ಯಮಯ ಧಾತು! ಆತಂಕದಲ್ಲಿ ಜನರು!
ರಾಜಸ್ಥಾನ:- ರಾಜಸ್ಥಾನದಿಂದ ಒಂದು ಆಘಾತಕಾರಿ ಸುದ್ದಿ ಬಂದಿದೆ. ಇಲ್ಲಿಯ ಸಾಂಚೋರ ಪಟ್ಟಣದಲ್ಲಿ ಮೊದಲು ಒಂದು ದೊಡ್ಡ ಸ್ಫೋಟವಾಗಿ ತದನಂತರ ಬಾಂಬ್ ಆಕಾರದ ಒಂದು ವಸ್ತು ಆಕಾಶದಿಂದ ಬಂದು ಕೆಳಗಡೆ ಬಿದ್ದಿತು. ಅಲ್ಲದೆ ಒಂದು ಫೀಟ್ ನಷ್ಟು ಭೂಮಿಯ ಒಳಗಡೆ ಹೋಯಿತು. ಈ ಸ್ಫೋಟದ ಧ್ವನಿ ಎಷ್ಟೊಂದು ಜೋರಾಗಿ ಇತ್ತೆಂದರೆ ಸುತ್ತಮುತ್ತಲಿನ ಸುಮಾರು 2 ಕಿ ಮಿ ಗಳಷ್ಟು ದೂರದವರೆಗೆ ಧ್ವನಿ ಕೇಳಿಸಿದೆ. ಈ ಸಂದರ್ಭದಲ್ಲಿ ಕೆಲವು ಜನರು ಇದಕ್ಕೆ ಉಲ್ಕಾಪಾತ ಎಂದು ಹೇಳುತ್ತಿದ್ದಾರೆ, ಕೆಲವೊಬ್ಬರು ಗಾರೆ, ಕೆಲವೊಬ್ಬರು ಬಾಂಬ್ , ಕೆಲವೊಬ್ಬರು ಹಡಗಿನ ತುಂಡಾದ ಭಾಗ ಎಂದು ಹೇಳುತ್ತಿದ್ದಾರೆ. ಸದ್ಯಕ್ಕೆ ಈ ವಸ್ತು ಪೊಲೀಸರ ವಶದಲ್ಲಿದೆ.
ಸ್ಥಳೀಯ ಭಾಗದಲ್ಲಿ ಭೀತಿ ಉಂಟಾಗಿದೆ.

ರಾಜಸ್ಥಾನದ ಜಾಲೋರ್ ಜೆಲ್ಲೆಯ ಸಾಂಚೋರ ಪಟ್ಟಣದಲ್ಲಿ ನ್ಯೂ ಗಾಯತ್ರಿ ಕಾಲೇಜ್ ದ ಸಮೀಪದಲ್ಲಿರುವ ಕ್ಷೇತ್ರದಲ್ಲಿ ಶುಕ್ರವಾರ ಮುಂಜಾನೆ ಸುಮಾರು 6 ಗಂಟೆಗೆ ಆಕಾಶದಿಂದ ವೇಗವಾದ ಸ್ಪೋಟದೊಂದಿಗೆ ಬಾಂಬ್ ಆಕಾರದ ಒಂದು ಧಾತುವಿನ (ತುಂಡು ) ಭಾಗ ಭೂಮಿಯ ಮೇಲೆ ಬಿದ್ದಿದ್ದರಿಂದ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ವಸ್ತು ಆಕಾಶದಿಂದ ನೆಲಕ್ಕೆ ಬೀಳುವಾಗ ಅದರ ಧ್ವನಿ ಸುಮಾರು 2 ಕಿಮೀ ಅಂತರದ ವರೆಗೂ ಕೇಳಿಬಂದಿದೆಯಂತೆ. ಆದುದರಿಂದಲೇ ಅಲ್ಲಿಯ ಸ್ಥಾನಿಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಗೊಂಡಿದೆ.
ಈ ಘಟನೆ ನೋಡಿದ ಜನರ ಹೇಳಿಕೆಯ ಪ್ರಕಾರ, ಯಾವ ವೇಗದಿಂದ ಈ ವಸ್ತು ಭೂಮಿಗೆ ಬಂದು ಅಪ್ಪಳಿಸಿತೆಂದರೆ ಅದರ ಧ್ವನಿ ಹೆಲಿಕಾಪ್ಟರ್ ಹಾಗೆ ಇತ್ತು, ಅಲ್ಲದೆ ಅದರ ಮುಂದುಗಡೆ ಕೆಲವು ಫ್ಯಾನ್ ತರಹದ ಉಪಕರಣಗಳು ಇದ್ದವು. ಆದುದರಿಂದ ಇದಕ್ಕೆ ಕೆಲವರು ಗಾರೆ ಎಂದು ಕರೆಯುತ್ತಿದ್ದರೆ ಇನ್ನೂ ಕೆಲವರು ಉಲ್ಕಾಪಾತ ಎಂದು ಕರೆದರೆ, ಇನ್ನೂ ಕೆಲವರು ಹಡುಗಿನ ಮುರಿದ ತುಂಡು ಎಂದು ಕೂಡಾ ಎನ್ನುತ್ತಿದ್ದಾರೆ.

ಮೂರು ಗಂಟೆಗಳ ನಂತರವೂ ವಸ್ತು ಇನ್ನು ಬಿಸಿಯಾಗಿತ್ತು.
ಆಕಾಶದಿಂದ ಭೂಮಿಗೆ ಬಂದು ಬಿದ್ದ ಈ ವಸ್ತು ಸುಮಾರು 3 ಗಂಟೆಗಳ ನಂತರವೂ ಇನ್ನು ತುಂಬಾ ಬಿಸಿಯಾಗಿತ್ತು. ಇದನ್ನು ನೋಡಿದ ಕೂಡಲೇ ಇದಕ್ಕೆ ವಿಸ್ಫೋಟಕ ವಸ್ತು ಎಂದರೂ ತಪ್ಪೇನಿಲ್ಲ. ಈ ಸಂದರ್ಭದಲ್ಲಿ ಪ್ರಶಾಸನವೂ ಜನರಿಗೆ ಈ ವಸ್ತುವಿನಿಂದ ದೂರ ವಿರಲು ಸಲಹೆ ನೀಡಿದ್ದಾರೆ.
“ಮುಂಜಾನೆ ಸಮಯದಲ್ಲಿ ಸುಮಾರು 6 ಗಂಟೆಗೆ ಆಕಾಶದಿಂದ ಏನು ಬಿದ್ದಿತು. ಅದರ ಧ್ವನಿ ತುಂಬಾ ಜೋರಾಗಿತ್ತು ಯಾವುದೋ ವಿಮಾನ ಬಂದು ಬಿದ್ದ ಹಾಗೆ ಅದರ ಸಪ್ಪಳ ಬಂದಿದೆ. ಅದ್ಭುತವಾದ ಸ್ಪೋಟವಾಯಿತು. ಆದರೆ ಯಾರಿಗೂ ಅದೇನು ಬಿದ್ದಿದೆ ಎಂಬುದು ತಿಳಿದೇ ಇಲ್ಲ”. ಎಂದು ಅದೇ ಸ್ಥಳದಲ್ಲಿ ಉಪಸ್ಥಿತರಿದ್ದ ಅಜಮಲ್ ದೇವಾಸಿ ಯವರು ಹೇಳಿದ್ದಾರೆ.
ಮನೆಯಿಂದ ಸುಮಾರು 100 ಮೀಟರ್ ಅಂತರದ ಮೇಲೆ ಬಿದ್ದಿದೆ.

ಸುತ್ತಮುತ್ತ ಜನರು ಬಂದು ನೋಡಿದಾಗ ಭೂಮಿಯೊಳಗೆ ಒಂದು ದೊಡ್ಡದಾದ ತಗ್ಗು ನಿರ್ಮಾಣವಾಗಿತ್ತು. ” ನಾವು ನೋಡಿಲ್ಲ ಆದರೆ ಅದರ ಧ್ವನಿ ಮಾತ್ರ ಕೇಳಿದ್ದೇವೆ. ನಮ್ಮ ಮನೆಯಿಂದ ಸುಮಾರು 100 ಮೀಟರ್ ಅಂತರದಲ್ಲಿಯೇ ಬಂದು ಈ ವಸ್ತು ಬಿದ್ದಿದೆ. ಬಿದ್ದಕೂಡಲೇ ಅದನ್ನು ನೋಡಿ ಅದರ ಬಗ್ಗೆ ಪ್ರಶಾಸನಕ್ಕೆ ತಿಳಿಸಿದೆವು. ತದನಂತರ ಸರಕಾರಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಂದು ಈ ಘಟನೆಯ ಕುರಿತು ತನಿಖೆ ನಡೆಸಿದರು” ಎಂದು ಅಲ್ಲಿಯ ಸ್ಥಾನಿಕರು ಹೇಳುತ್ತಿದ್ದಾರೆ.

ಈ ಘಟನೆಯ ಕುರಿತು ಐಬಿ ಯ ಇನ್ಸ್ಪೆಕ್ಟರ್ ಮಂಗಲ ಸಿಂಗ್ ಅವರು ಹೇಳಿದ್ದೇನೆಂದರೆ, ” ಆಕಾಶದಿಂದ ವೇಗವಾದ ಧ್ವನಿಯೊಂದಿಗೆ ಲೋಹದ ತುಂಡು ಬೀಳುವ ಸೂಚನೆ ಸಿಕ್ಕಿತ್ತು, ಅದನ್ನು ನೋಡಿದ ಕೂಡಲೇ ಅಲ್ಲಿಯ ಸ್ಥಾನಿಕ ಪೊಲೀಸ ಪ್ರಶಾಸನ ಹಾಗೂ ಉಪಖಂಡ ಅಧಿಕಾರಿ ಘಟನಾ ಸ್ಥಳಕ್ಕೆ ಹೋದರು”.

ಮುಂದೆ ಅವರು ಹೇಳಿದ್ದೇನೆಂದರೆ, ” ಆಕಾಶದಿಂದ ಬಂದ ಲೋಹದ ತುಂಡು ಸುಮಾರು ಒಂದು ಫೀಟ್ ನಷ್ಟು ಭೂಮಿಯೊಳಗಡೆ ನುಗ್ಗಿತ್ತು. ಇದರ ತೂಕ ಸುಮಾರು 3 ಕಿಲೋದಷ್ಟು ಇತ್ತು ಆಲ್ಲದೆ ತುಂಬಾ ಬಿಸಿ ಕೂಡಾ ಆಗಿತ್ತು. ಪೊಲೀಸರು ಇದನ್ನು ತಮ್ಮ ವಶಕ್ಕೆ ತಗೆದುಕೊಂಡು ಅದರ ಸೂಚನೆ ಜಿಲ್ಲಾಧಿಕಾರಿ ಹಾಗೂ ಪೊಲೀಸ ಅಧೀಕ್ಷಕರಿಗೆ ನೀಡಿದರು. ಸದ್ಯಕ್ಕೆ ಈ ವಿಷಯದ ಕುರಿತು ತಪಾಸಣೆ ನಡೆಸಲಾಗುತ್ತಿದೆ”.