Video; ಹುಷಾರು..! ತಾಯಿಯ ಜೊತೆ ಪುಟ್ಟ ಕಂದಮ್ಮ ಮುದ್ದು ಮುದ್ದಾಗಿ ಹೆಜ್ಜೆ ಹಾಕುತ್ತಿರುವಾಗಲೇ ಎಂಥ ಆಪತ್ತಿನಲ್ಲಿ ಬಿತ್ತು ನೋಡಿ…

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ಒಮ್ಮೊಮ್ಮೆ ನೋಡುಗನಿಗೆ ಹೌಹಾರಿಸುತ್ತವೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ನಿಮ್ಮ ಮುಂದೆ ತಂದಿದ್ದೇವೆ.

ಪ್ರಸ್ತುತ ವಿಡಿಯೋದಲ್ಲಿ ಪುಟ್ಟ ಕಂದ ತನ್ನ ತಾಯಿಯ ಜೊತೆಗೆ ರಸ್ತೆಯಿಂದ ಮುದ್ದು ಮುದ್ದಾಗಿ ತನ್ನದೇ ಮೋಜಿನಲ್ಲಿ ನಡೆಯುತ್ತಾ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಸಾಗುತ್ತಿದೆ. ಮಗುವಿನ ಈ ತುಂಟನಡಿಗೆಯನ್ನು ತಾಯಿಯು ಸಂತೋಷದಿಂದ ಆಸ್ವಾದಿಸುತ್ತಿದ್ದಾಳೆ. ಈ ಮಧ್ಯೆ ಮಗು ರಸ್ತೆಯ ಬದಿಯಲ್ಲಿರುವ ಮ್ಯಾನ್ ಹೋಲ್ ಒಂದರ ಮೇಲೆ ನಿಂತುಬಿಡುತ್ತದೆ. ಮಗು ಮ್ಯಾನ್ ಹೋಲ್ ಮೇಲೆ ನಿಲ್ಲುವದಷ್ಟೇ ತಡ ಅದರ ಮೇಲಿನ ಮುಚ್ಚಿದ ಆ ಮುಚ್ಚಳ (ಕವರ್) ಒಮ್ಮೆಲೆ ತಿರುಗಿ ಬಿಡುತ್ತದೆ. ಹೀಗಾಗಿ ಅದರ ಮೇಲೆ ನಿಂತ ಮಗು ಕ್ಷಣದಲ್ಲಿ ಒಳಗೆ ಬಿದ್ದು ಬಿಡುತ್ತದೆ. ಬೆಚ್ಚಿಬಿದ್ದ ತಾಯಿ ಬಗಲಿಗೆ ಹಾಕಿದ ಪರ್ಸ್ ದೂರ ಎಸೆದು ಕೈ ಮ್ಯಾನ್ ಹೋಲ್ ನಲ್ಲಿ ಒಳಗೆ ತೂರಿಸಿ ಮಗುವನ್ನು ಹೊರ ತೆಗೆಯಲು ಯತ್ನಿಸುತ್ತಾಳೆ. ಅಷ್ಟರಲ್ಲೇ ಬೇರೊಬ್ಬ ಮಹಿಳೆ ಬಂದು ಆಕೆಗೆ ಸಹಾಯ ಮಾಡುತ್ತಾಳೆ. ಇಬ್ಬರೂ ಕೂಡಿ ಹಾಗೋ ಹಿಗೋ ಮಗುವನ್ನು ಮ್ಯಾನ್ ಹೋಲ್ ನಿಂದ ಹೊರಗೆ ತೆಗೆದು ಸುಖರೂಪವಾಗಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಸ್ತುತ ಈ ಭಯಾನಕವಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಕ್ಕಳನ್ನು ರಸ್ತೆಯಲ್ಲಿ ನಡೆಸಿಕೊಂಡು ಹೋಗುವಾಗ ಯಾವ ರೀತಿ ಕಾಳಜಿ ತೆಗೆದುಕೊಳ್ಳಬೇಕು ಎಂಬ ಪಾಠವನ್ನು ಈ CCTV ದೃಶ್ಯ ಹೇಳುತ್ತದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು INSTAGRAM ನಲ್ಲಿ ರಣಥಂಬೋರ್_ಟೂರ್ಸ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ರಸ್ತೆಯ ಮೇಲೆ ನಡೆಯುವಾಗ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಲು ಹೇಳುವ ಈ ಒಳ್ಳೆಯ ವಿಡಿಯೋವನ್ನು ಇಲ್ಲಿಯವರೆಗೆ 39 ಮಿಲಿಯನ್ ಜನರು ನೋಡಿದ್ದಲ್ಲದೆ ಒಂದು ಮಿಲಿಯನ್ ಕಿಂತಲೂ ಹೆಚ್ಚಿನ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.