FIFA ವರ್ಲ್ಡ್ ಕಪ್ ನೋಡಲು ಕತಾರಕ್ಕೆ ಹೋದ ನೋರಾ ಫತೆಹಿ ಜೊತೆಗೆ ನಡೆದದ್ದು ನೋಡಿ; ಸ್ವತಃ ತಾವೇ ಶೇರ್ ಮಾಡಿದರು ವಿಡಿಯೋ…

ಫಿಫಾ ವರ್ಲ್ಡ್ ಕಪ್ ಸದ್ಯ ಕತಾರ್ ನಲ್ಲಿ ನಡೆದಿದೆ. ಪಂದ್ಯಗಳು ಈಗ ಕೊನೆ ಹಂತಕ್ಕೆ ಬಂದು ತಲುಪಿವೆ. ಜಗತ್ತಿನ ಫುಟ್ಬಾಲ್ ಆಡುವ ಶಕ್ತಿಶಾಲಿ ತಂಡಗಳು ತಮ್ಮ ಸಾಮರ್ಥ್ಯವನ್ನು ತೋರಿಸಲು ಇಲ್ಲಿ ಒಂದುಗೂಡಿವೆ. 2022 ರ ವರ್ಲ್ಡ್ ಕಪ್ ಪುಟ್ಬಾಲ್ ಪಂದ್ಯಗಳನ್ನು ವೀಕ್ಷಿಸಲು ಬಾಲಿವುಡ್ ಬೆಡಗಿ ನೋರಾ ಫತೇಹಿ ಸಹ ಹೋಗಿದ್ದರು. ಈ ಸಂದರ್ಭದಲ್ಲಿ ಅವರ ಜೊತೆಗೆ ನಡೆದ ಒಂದು ದೃಶ್ಯವನ್ನು ಸ್ವತಃ ತಮ್ಮ instagram ಅಕೌಂಟ್ ನಿಂದ ಫ್ಯಾನ್ಗಳ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ.

ಇಲ್ಲಿ ನೋರಾ ತಮ್ಮ ಫೇವರೆಟ್ ತಂಡಕ್ಕಾಗಿ ಕುಣಿಯದೆ ಬೇರೆಯೇ ಒಂದು ಕಾರಣಕ್ಕಾಗಿ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಸಿದ್ದಾರೆ. ಪ್ರಸ್ತುತ ವಿಡಿಯೋ ಶೇರ್ ಮಾಡುತ್ತಾ ನೋರಾ ವಿಶೇಷವಾದ ಕ್ಯಾಪ್ಷನ್ ಒಂದನ್ನು ನೀಡಿದ್ದಾರೆ. ತಾವು ನೀಡಿದ ಕ್ಯಾಪ್ಷನಲ್ಲಿ ನೋರಾ “ಫಿಫಾ ವರ್ಲ್ಡ್ ಕಪ್ ನಲ್ಲಿ ನಿಮ್ಮ ಧ್ವನಿಯನ್ನು ಮರಳಿ ನೀವೇ ಕೇಳುತ್ತಿರುವಾಗಿನ ಸುಂದರ ಕ್ಷಣಗಳು, ನನ್ನ ಪ್ರವಾಸವು ತುಂಬಾ ಸಾರ್ಥಕವಾಗಿದೆ. ನನ್ನ ಜೀವನದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು, ನಾನು ಯಾವಾಗಲೂ ಇಂಥ ಕನಸುಗಳನ್ನು ಕಂಡಿದ್ದೇನೆ. ಹುಡುಗರೇ ನಿಮ್ಮನ್ನು ನೀವು ನಂಬಿ. ಯಾವುದು ನಿಮಗೆ ಸಾಧ್ಯವಿಲ್ಲವೆಂದು ನೀವು ಯಾರಿಗೂ ಹೇಳಬೇಡಿ. ಅನೇಕರು ನನ್ನನ್ನು ಮೊದಲು ನೋಡಿ ನಕ್ಕರು. ಆಗ ಅದನ್ನೆಲ್ಲ ನಾನು ಯೋಚಿಸಲಿಲ್ಲ. ಇದು ಕೇವಲ ಆರಂಭ”. ಎನ್ನುವ ನೋರಾ ಫತೇಹಿ ಅವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಜೋರಾಗಿ ವೈರಲ್ ಆಗುತ್ತಿವೆ. ಅಭಿಮಾನಿಗಳು ನೋರಾ ಅವರ ಈ ವೀಡಿಯೋವನ್ನು ತುಂಬಾ ಇಷ್ಟ ಪಡುತ್ತಿದ್ದಾರೆ.

ವಿಡಿಯೋ ನೋಡಿ.

 

View this post on Instagram

 

A post shared by Nora Fatehi (@norafatehi)