ಕೌಂಟರ್ ಮೇಲಿನ ಹಣವನ್ನು ಹಠಾತ್ ಹಕ್ಕಿಯೊಂದು ಎತ್ತಿಕೊಂಡು ಹೋದದ್ದೆಲ್ಲಿ? ನೋಡಿ ಈ ವಿಡಿಯೋ…
ಪಕ್ಷಿಗಳೆಂದರೆ ಪ್ರತಿಯೊಬ್ಬರಿಗೂ ಇಷ್ಟವಾದ ಜೀವ. ಕೆಲವೊಬ್ಬರು ಪಕ್ಷಿಗಳ ಕುರಿತು ತುಂಬಾನೇ ಅಭ್ಯಾಸ ಮಾಡಿ ಅವುಗಳನ್ನು ತಮ್ಮ ಕುಟುಂಬದ ಒಬ್ಬ ಸದಸ್ಯನ ಹಾಗೆ ಪಾಲನೆ ಮಾಡುವರು. ಪಕ್ಷಿಗಳು ನಿಸರ್ಗದ ಅದ್ಭುತವಾದ ಕೊಡುಗೆ ಯಾಗಿವೆ. ಹೀಗಾಗಿ ಪಕ್ಷಿಗಳ ಸಂರಕ್ಷಣೆ ಮಾಡುವದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಪಕ್ಷಿಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪ್ರಜಾತಿಗಳನ್ನು ಕಾಣಬಹುದು ಆದರೆ ದುಃಖದ ವಿಷಯ ಏನೆಂದರೆ ಇವಗಳಲ್ಲಿಯ ಕೆಲವು ಪ್ರಜಾತಿಗಳು ನಾಶ ವಾಗುತ್ತಿವೆ. ಇದಕ್ಕೆ ಕಾರಣ ಮಾನವ. ಮನುಷ್ಯ ತನ್ನ ಮೂಲಭೂತ ಸೌಕರ್ಯಗಳ ಸಲುವಾಗಿ ಇಂದು ಅರಣ್ಯ ನಾಶ ಮಾಡುತ್ತಿದ್ದಾನೆ. ಅರಣ್ಯದ ಮರಗಳಲ್ಲಿ ವಾಸಿಸುವ ಪಕ್ಷಿಗಳು ತಮ್ಮ ಮನೆಯನ್ನು ಕಳೆದುಕೊಂಡು ದೂರ ದೂರ ಹೋಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.
ಪಕ್ಷಿ ಹಿಂದಿನ ಕಾಲದಲ್ಲಿ ಒಂದು ಸಂಪರ್ಕದ ಸಾಧನವನ್ನಾಗಿ ಉಪಯೋಗ ಮಾಡಲಾಗುತ್ತಿತ್ತು. ಅಂದರೆ ಈಗಿನ ಹಾಗೆ ಹಿಂದಿನ ಕಾಲದಲ್ಲಿ ಮೊಬೈಲ್ , ಟಿ ವಿ ಇರಲಿಲ್ಲ. ಆ ಸಮಯದಲ್ಲಿ ಒಂದು ಸುದ್ಧಿ ಬೇರೆ ತಲುಪಿಸಬೇಕಾದರೆ ಒಬ್ಬ ಮನುಷ್ಯನನ್ನು ರಾಯಭಾರಿಯಾಗಿ ಕಳುಹಿಸಬೇಕಾಗುತ್ತಿತ್ತು. ತದನಂತರ ಮನುಷ್ಯ ನಡೆದುಕೊಂಡು ಹೋಗುವದು ತುಂಬಾನೇ ಕಷ್ಟಕರ ಕೆಲಸ ವಾಗುತ್ತಿತ್ತು. ಆಗ ಕೆಲವರು ಪಕ್ಷಿಗಳನ್ನು ಪಾಲನೆ ಶುರು ಮಾಡಿದರು. ತದನಂತರ ಅವುಗಳಿಗೆ ಉತ್ತಮವಾದ ತರಬೇತಿ ಸಹ ನೀಡಿದರು. ಆಗಿನ ಕಾಲದಲ್ಲಿ ಪಾರಿವಾಳ ಈ ಪಕ್ಷಿ ಬಹಳಷ್ಟು ಪ್ರೀಯವಾಗಿತ್ತು. ಈ ಪಕ್ಷಿ ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ತಲುಪಿಸುವ ಕಾರ್ಯ ಮಾಡುತ್ತಿತ್ತು. ಅಂದರೆ ಒಂದು ಸಂದೇಶವನ್ನು ಬರೆದು ಆ ಪತ್ರವನ್ನು ಪಾರಿವಾಳದ ಕೊರಳಿಗೆ ತಾಗಿಸಿದರೆ ಸಾಕು ಪಾರಿವಾಳ ಯಾವ ವ್ಯಕ್ತಿಗೆ ಕೊಡಬೇಕು ಎಂಬುದು ತಿಳಿದುಕೊಂಡು ಅದೇ ವ್ಯಕ್ತಿಗೆ ನೇರವಾಗಿ ಪತ್ರ ತಲುಪಿಸುತ್ತಿತ್ತು.
ಪಕ್ಷಿಗಳಿಗೆ ತರಬೇತಿ ನೀಡಿದರೆ ಏನಾದರೂ ಕಾರ್ಯ ಮಾಡಬಹುದು ಎಂಬುದು ನಮಗೆ ಮೊದಲೇ ಗೊತ್ತೇ ಇದೆ. ಆದರೆ ಒಬ್ಬ ವ್ಯಕ್ತಿ ತಾನು ಸಾಕಿದ ಪಕ್ಷಿಯನ್ನು ಒಂದು ಅದ್ಭುತವಾದ ಕಾರ್ಯ ಮಾಡಲು ಉಅಪಯೋಗಿಸಿದ್ದಾನೆ. ಮೊದಲು ಈ ಪಕ್ಷಿಗೆ ಮಾಡುವ ಕಾರ್ಯದ ಕುರಿತು ಉತ್ತಮವಾಗಿ ತರಬೇತಿ ನೀಡಿದ್ದಾನೆ. ಅಷ್ಟಕ್ಕೂ ಅಂತಹ ಕಾರ್ಯ ಏನು ಅಂತ ನೀವು ಯೋಚನೆ ಮಾಡುತ್ತೀರಿದ್ದೀರಾ? ಹಾಗಾದರೆ ನ್
ಬನ್ನಿ ತಿಳಿದುಕೊಳ್ಳೋಣ.
ಈ ವ್ಯಕ್ತಿ ತನ್ನ ಪಕ್ಷಿಗೆ ನೋಟುಗಳನ್ನು ಕದ್ದು ತರುವ ಅಂದರೆ ಯಾವುದೇ ಸ್ಥಳದಲ್ಲಿ ನೋಟಿಗಳು ಕಾಣಿಸಿದರೆ ಸಾಕು ಅವುಗಳನ್ನು ತನ್ನ ಚೂಚಿನಲ್ಲಿ ಹಿಡಿದುಕೊಂಡು ನೇರವಾಗಿ ಮನೆಗೆ ತರುವ ಕಾರ್ಯದ ತರಬೇತಿ ನೀಡಿದ್ದನು. ಹೀಗಾಗಿ ಈ ಪಕ್ಷಿ ಎಲ್ಲೇ ನೋಟು ನೋಡಿದರೆ ಸಾಕು ಸಾವಕಾಶವಾಗಿ ಅಲ್ಲಿ ಕುಳಿತುಕೊಂಡು ಸಮಯದ ಸದುಪಯೋಗ ಪಡೆದುಕೊಂಡು ಅಲ್ಲಿದ್ದ ನೋಟನ್ನು ಎತ್ತಿಕೊಂಡು ಬರುತ್ತದೆ. ಪ್ರಸ್ತುತ ವೀಡಿಯೋದಲ್ಲಿ ನೀವು ನೋಡಬಹುದು, ಈ ಪಕ್ಷಿ ಒಂದು ಅಂಗಡಿಯ ಎದುರಿಗೆ ಒಬ್ಬ ಮಹಿಳೆ ಕೆಲವು ವಸ್ತುಗಳನ್ನು ಪಡೆಯಲು ಚಿಲ್ಲರೆ ಮತ್ತು ನೋಟನ್ನು ಅಲ್ಲಿದ್ದ ಟೇಬಲ್ ಮೇಲೆ ಇಟ್ಟಿದ್ದಳು. ಇದನ್ನು ಕಂಡ ಈ ಪಕ್ಷಿ ನೇರವಾಗಿ ಟೇಬಲ್ ಮೇಲೆ ಹಾರಿ ಕೂಡುತ್ತದೆ. ಆಗ ಮಹಿಳೆ ಈ ಪಕ್ಷಿ ತುಂಬಾ ಮುದ್ದಾಗಿದೆ ಅಂತ ಅದರ ಬೆನ್ನು ಮೇಲೆ ಕೈ ಸವರುತ್ತಾಳೆ ಆದರೂ ಸಹ ಪಕ್ಷಿ ಸ್ವಲ್ಪವೂ ಕದಲದೇ ಅಲ್ಲಿಯೇ ಕುಳಿತುಕೊಳ್ಳುತ್ತದೆ. ತದನಂತರ ಅಲ್ಲಿದ್ದ ನೋಟನ್ನು ತನ್ನ ಬಾಯಲ್ಲಿ ಹಿಡಿದುಕೊಂಡು ಹಾರಿ ಹೋಗುತ್ತದೆ ಆಗ ಮಹಿಳೆ ಗೋಳಾಡುತ್ತಾಳೆ ಆದರೆ ಪಕ್ಷಿ ನೇರವಾಗಿ ತನ್ನ ಮನೆಯಲ್ಲಿ ಬಂದು ಮಾಲೀಕನ ಕೈಗೆ ಈ ಹಣವನ್ನು ಕೊಡುತ್ತದೆ. .
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವಿಡಿಯೋ ನೋಡಿದ ನೆಟ್ಟಿಗರು ‘ನನಗೂ ಸಹ ಇಂಥ ಪಕ್ಷಿ ಸಾಕುವದಿದೆ’ ಚಾಲಾಕಿ ಚೋರ’ ಹೀಗೆ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ.