ಸುಮ್ಮನೆ ನಿಂತ ಯುವತಿ ಅದೇನಾಯ್ತು ಗೊತ್ತಿಲ್ಲ? ಹಠಾತ್ ಶುರು ಮಾಡಿದಳು ಡಾನ್ಸ್! ಅದು ಸ್ವಲ್ಪ ಬಿಂದಾಸ್ ಆಗಿಯೇ…

ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸಗಳ ವಿಡಿಯೋ ಕಂಡರೆ ಸಾಕು ಸಕ್ಕತ್ತಾಗಿ ವೈರಲ್ ಆಗುತ್ತವೆ. ಅದರಲ್ಲೂ ಮಕ್ಕಳು, ಯುವತಿಯರು ಮಾಡಿದ ಡಾನ್ಸ್ ಇದ್ದರೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸಗಳ ಸುರಿಮಳೆಯೇ ಬೀಳುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಯುವತಿಯೊಬ್ಬಳು ಒಮ್ಮಿಂದೊಮ್ಮೆಲೆ ಡಾನ್ಸ್ ಮಾಡಲು ಶುರು ಮಾಡಿದ್ದಾಳೆ. ಎಲ್ಲರೂ ನಿಂತಿರುವಾಗಲೇ ಯುವತಿಯ ಮೈಯಲ್ಲಿ ಅದ್ಯಾವ ಶಕ್ತಿ ಸಂಚಾರವಾಗಿ ಬಿಡುತ್ತದೆ ಗೊತ್ತಿಲ್ಲ. ಆಕೆ ಒಮ್ಮಿಂದೊಮ್ಮೆಲೆ ಪಂಜಾಬಿ ಫೇಮಸ್ ಡಾನ್ಸ್ ಪ್ರಕಾರಾದ ಭಾಂಗ್ರಾ ಸ್ಟೈಲ್ ನಲ್ಲಿ ಕುಣಿಯಲು ಶುರು ಮಾಡುತ್ತಾಳೆ. ಈ ಸಂದರ್ಭದಲ್ಲಿ ಆಕೆ ತೊಟ್ಟ ಗುಲಾಬಿ ಬಣ್ಣದ ಡ್ರೆಸ್ ತುಂಬಾನೇ ಎದ್ದು ಬೀಳುತ್ತಿದೆ. ಯುವತಿಯ ಈ ಡ್ಯಾನ್ಸ್ ನೋಡಿ ಅಲ್ಲಿ ನೆರೆದವರು “ವಾವ್ ಕ್ಯಾ ಬಾತ್ ಹೈ, ಕ್ಯಾ ಬಾತ್ ಹೈ” ಎಂದು ಒಂದೇ ಸವನೆ ಶ್ಲಾಘಿಸುತ್ತಿದ್ದಾರೆ. ಭಾಂಗ್ರಾ ಈ ಡಾನ್ಸ್ ನ್ನು ಮುಖ್ಯವಾಗಿ ಪಂಜಾಬಿ ರೈತರು ಕೊಯ್ಲು ಅಥವಾ ರಾಶಿಯ ಸಮಯದಲ್ಲಿ ಮಾಡುತ್ತಾರೆ. ರೈತರು ತಮ್ಮ ಕೃಷಿ ಕೆಲಸಗಳನ್ನು ಮಾಡುವಾಗ ಈ ಕುಣಿತವನ್ನು ಮುಖ್ಯವಾಗಿ ಪ್ರದರ್ಶಿಸುತ್ತಾರೆ. ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೇನೆಂದರೆ, ಯುವತಿಯು ಎಂತಹ ಸಖತ್ ಎನರ್ಜಿಯಿಂದ ನೃತ್ಯವನ್ನು ಸಾದರಪಡಿಸಿದ್ದಾಳೆ ನೋಡಿ.

ನೋಡಿ ಈ ವಿಡಿಯೋ…

 

View this post on Instagram

 

A post shared by Bhangra Tadka® (@bhangratadka)

ಮಾಡರ್ನ್ ಯುವತಿಯಾಗಿದ್ದರೂ ಹಾಗೂ ತುಂಬಾ ಇಷ್ಟ ಪಡುವ ವಿಷಯವೇನೆಂದರೆ ಯುವತಿ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಎಷ್ಟೊಂದು ಗರ್ವ, ಅಭಿಮಾನದಿಂದ ಮೆರೆಸುತ್ತಿದ್ದಾಳೆ ನೋಡಿ. ಪ್ರಸ್ತುತ ಮಹಿಳೆಯ ಈ ನೃತ್ಯ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಹೀಗಾಗಿ ಈ ವಿಡಿಯೋ ಇಲ್ಲಿಯವರೆಗೆ 2.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 1 ಲಕ್ಷ 56 ಸಾವಿರ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.