ಸಮಯ ಬಂದಾಗ ದೇವರು ಒಂದು ಕಣ್ಣು ಇಟ್ಟೇ ಇಟ್ಟಿರುತ್ತಾನೆ. ನೋಡಿ ಈ VIDEO ಅಂದಾಗ ಗೊತ್ತಾಗುತ್ತೆ…
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳು ನಮ್ಮ ಕಣ್ಣುಗಳ ಮುಂದೆ ಹಾದು ಹೋಗುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ನಮಗೆ ಆಶ್ಚರ್ಯದ ಶಾಕ್ ನೀಡಿ ಹೋಗುತ್ತವೆ. ಇಂತಹ ವಿಶೇಷ ವಿಡಿಯೋ ಒಂದನ್ನು ನಿಮಗಾಗಿ ಇಲ್ಲಿ ತಂದಿದ್ದೇವೆ.
ಈ ವಿಡಿಯೋದಲ್ಲಿ ಶಾಲೆಯ ಯುನಿಫಾರ್ಮ್ ನಲ್ಲಿ ಹುಡುಗನೊಬ್ಬ ರಸ್ತೆಯ ಬದಿಯ ಫುಟ್ಪಾತ್ ಮೇಲೆ ತುಂಬಾ ಬೇಸರದಲ್ಲಿ ಕಂಡು ಬರುತ್ತಿದ್ದಾನೆ. ಇಲ್ಲಿ ಹುಡುಗ ವೈಟ್ ಶರ್ಟ್ ಮತ್ತು ಬ್ಲಾಕ್ ಪ್ಯಾಂಟ್ ಜೊತೆಗೆ ಹೆಗಲಿಗೆ ಬ್ಯಾಗ್ ಒಂದನ್ನು ಏರಿಸಿಕೊಂಡು ನಿಂತಿರುವುದು ಕಂಡುಬರುತ್ತದೆ. ಹುಡುಗ ಫುಟ್ಪಾತ್ ಮೇಲಿರುವ ಗ್ರಿಲ್ ಹಿಡಿದುಕೊಂಡು ಅತಿತ್ತ ನೋಡಿ ಮತ್ತೆ ತನ್ನಷ್ಟಕ್ಕೆ ತಾನು ಮುಂದೆ ಹೋಗಲು ಶುರು ಮಾಡುತ್ತಾನೆ. ಹುಡುಗ ಮೊದಲು ನಿಂತ ಸ್ಥಳದಿಂದ ಕದಲುವುದೇ ತಡ ಕ್ಷಣಾರ್ಧದಲ್ಲಿ ಒಂದು ಕಾರು ಶರವೇಗದಿಂದ ಬಂದು ಗ್ರಿಲ್ಲಿಗೆ ಜೋರಾಗಿ ಡಿಕ್ಕಿ ಹೊಡೆಯುತ್ತದೆ. ಇದ್ಯಾವುದನ್ನು ಗಮನಿಸಿದ ಹುಡುಗ ಹಿಂದೆ ಹೊರಳಿ ನೋಡಿದಾಗ ಬೆಚ್ಚಿ ಬೀಳುತ್ತಾನೆ. ಮತ್ತು ತಾನೇನು ಮಾಡಬೇಕೆಂದು ತಿಳಿಯದೆ ಅಲ್ಲಿಂದ ತಕ್ಷಣ ಓಡಿ ಹೋಗಲು ಯತ್ನಿಸಿದ್ದಾನೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ವಿಶೇಷವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ರಜಪೂತ್ ಅಂಡ್ ರಾಜಪೂತ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 3.1 ಮಿಲಿಯನ್ ವೀಕ್ಷಣೆ ಮತ್ತು ಎರಡು ಲಕ್ಷ ಲೈಕ್ಸ್ ಗಳನ್ನು ಪಡೆದಿದೆ.