ಭಾರತದ ಕುಬೇರನೆಂದೇ ಪ್ರಸಿದ್ಧಿ ಪಡೆದ ಮುಕೇಶ್ ಅಂಬಾನಿಯ ಚಿಕ್ಕಂದಿನ ಕ್ಯೂಟ್ ಫೋಟೋ ಆಗುತ್ತಿದೆ ವೈರಲ್! ನೋಡಿ ಇಲ್ಲಿ…
ಭಾರತದ ಅತ್ಯಂತ ಶ್ರೀಮಂತ ಕುಟುಂಬ ರಿಲಯನ್ಸ್ ಮಾಲೀಕರಾದ ಮುಕೇಶ್ ಅಂಬಾನಿ ಬರೀ ಭಾರತದಷ್ಟೇ ಅಲ್ಲ ಇಡೀ ಏಷಿಯಾದಲ್ಲಿಯೇ ದೊಡ್ಡ ಶ್ರೀಮಂತ ಬಿಜಿನೆಸ್ ಮನ್ ಆಗಿದ್ದಾರೆ. ಹೀಗಾಗಿ ಮುಕೇಶ್ ಅಂಬಾನಿಯವರು ಯಾವತ್ತೂ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ಈಗ ಬೇರೆ ಕಾರಣಕ್ಕಾಗಿ ಮುಕೇಶ್ ಅಂಬಾನಿ ಸುದ್ದಿಯಲ್ಲಿದ್ದಾರೆ.

ಈಗ ಅವರು ಸುದ್ದಿಯಲ್ಲಿರುವದಕ್ಕೆ ಮುಖ್ಯ ಕಾರಣ ಅವರ ಚಿಕ್ಕಂದಿನ ಫೋಟೋ. ಅವರ ಬಗ್ಗೆ ಮುಖ್ಯವಾಗಿ ತಿಳಿಯಬೇಕಾದ ವಿಷಯವೇನೆಂದರೆ, ಮುಕೇಶ್ ಅವರು ಮೊದಲ ಬಾರಿಗೆ ತಮ್ಮ ಪೋಷಕರ ಜೊತೆಗೆ ಮುಂಬಯಿಗೆ ಬಂದಾಗ ಅವರ ಕುಟುಂಬ ಮುಂಬಯಿಯ ಭೂಲೇಶ್ವರ್ ನಲ್ಲಿ ಎರಡು ಬೆಡ್ ರೂಮ್ ಗಳ ಒಂದು ಚಿಕ್ಕ ಅಪಾರ್ಟ್ಮೆಂಟ್ ನಲ್ಲಿರುತ್ತಿದ್ದರು. ಚಿಕ್ಕಂದಿನಲ್ಲಿ ಅವರ ಆಸೆ ಸಾಕಷ್ಟು ಹಣ ಗಳಿಸಬೇಕು ಎಂಬುದಿರಲಿಲ್ಲ. ಬದಲಾಗಿ ಅವರಿಗೆ ಕಠಿಣ ಸವಾಲುಗಳನ್ನು ಎದುರಿಸುವ ಹವ್ಯಾಸವಿತ್ತು. ಇವರಿಗೆ ಓದುವುದೆಂದರೆ ತುಂಬಾ ಇಷ್ಟವಾಗುತ್ತಿತ್ತು. ಇವರು ರಾತ್ರಿಯ 2 ಗಂಟೆಯವರೆಗೂ ಓದುತ್ತಾ ಕುಳಿತಿರುತ್ತಿದ್ದರು. ಆದರೆ ಈಗ ಮಾತ್ರ ಅವರ ಚಿಕ್ಕಂದಿನ ತುಂಬಾ ಸುಂದರವಾದ ಅಷ್ಟೇ ಕ್ಯೂಟ್ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಮುಕೇಶ್ ತಮ್ಮ ತಂದೆಯವರಾದ ಧೀರೂಭಾಯಿ ಅಂಬಾನಿಯವರ ಜೊತೆಗೆ ನಿಂತಿರುವುದು ಕಂಡು ಬರುತ್ತಿದೆ.

ಇವರು ಸದ್ಯಕ್ಕೆ ಜಗತ್ತಿನ ಅಗ್ರಗಣ್ಯ ಸಿರಿವಂತರ ಪಟ್ಟಿಯಲ್ಲಿ ಹೆಸರು ಪಡೆದಿದ್ದರೂ ಮೊದಲಿನ ಜೀವನ ಮಾತ್ರ ತುಂಬಾ ಬಡತನದಿಂದಲೇ ಕೂಡಿತ್ತು.