Video: ಎಲ್ಲಕ್ಕೂ ಬೆಸ್ಟ್ ವೀಡಿಯೋ, ಒಂದು ಕಾಲಿಲ್ಲದ ಮಗುವಿಗೆ ಕೃತ್ರಿಮ ಕಾಲನ್ನು ನೀಡಿದಾಗ ಮಗು ಪಟ್ಟ ಸಂತಸ ನೋಡಿ!!

ಜೀವನದಲ್ಲಿ ಬೇಡಿದ್ದು ಎಲ್ಲವೂ ಸಿಗಬೇಕಾದರೆ ಹಿಂದಿನ ಕಾಲದಲ್ಲಿ ಪುಣ್ಯ ಮಾಡಿರಬೇಕು ಎಂದು ದೊಡ್ಡವರು ಹೇಳುತ್ತಾರೆ. ಅದು ನಿಜಾನೆ ಈ ಸಂಸಾರ ಎಂಬ ಸಾಗರದಲ್ಲಿ ಎಷ್ಟೋ ಸಲ ಮುಳುಗಿ ಮತ್ತೆ ಮೇಲೆಳಬೇಕಾಗುವದು. ಮನುಷ್ಯ ಹುಟ್ಟುತ್ತಲೇ ಯಾವುದು ತನ್ನ ಜೊತೆಗೆ ತಗೆದುಕೊಂಡು ಬರುವದಿಲ್ಲ ಸಾಯುವಾಗ ಯಾವುದೇ ವಸ್ತು ತಗೆದುಕೊಂಡು ಹೋಗುವದಿಲ್ಲ. ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಇರುವಷ್ಟು ದಿನ ಸಂತಸದಿಂದ ಇದ್ದು ನಮ್ಮ ಜೊತೆಗಿರುವವರನ್ನು ಸಹ ಸಂತಸದಿಂದಿಡುವದೇ ಜೀವನದ ಸಾರ್ಥಕತೆ ಇದೆ.

ಹುಟ್ಟುತ್ತ ಎಲ್ಲ ಮಕ್ಕಳೂ ಉತ್ತಮವಾದ ಆರೋಗ್ಯ, ಸದೃಷ್ಠವಾದ ಶರೀರ ಹೊತ್ತು ಬರುವದಿಲ್ಲ. ಕೆಲವೊಂದು ಮಕ್ಕಳು ಹುಟ್ಟುತ್ತಲೇ ಒಂದಲ್ಲ ಒಂದು ಕೊರತೆಯನ್ನಿಟ್ಟುಕೊಂಡು ಹುಟ್ಟುತ್ತವೆ. ಆದರೆ ಅವುಗಳ ನ್ಯೂನತೆಗಳನ್ನು ದೂರ ಹೋಗಿಸುವ ಸಲುವಾಗಿ ಆ ಮಗುವಿನ ತಂದೆ ತಾಯಿಗಳು ಜೇವನದುದ್ದಕ್ಕೂ ಶ್ರಮಿಸುತ್ತಾರೆ. ಆದರೆ ಅದರ ಪ್ರತಿಫಲ ಕೆಲವು ಮಕ್ಕಳಿಗೆ ಲಭಿಸಿದೆ ಇನ್ನೂ ಕೆಲ ಮಕ್ಕಳಿಗೆ ಲಭಿಸುವದೇ ಇಲ್ಲ.

ಸದ್ಯಕ್ಕೆ ಅಂತಹದೇ ಒಂದು ಅಂಗವಿಕಲ ಮಗುವಿನ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ವೀಡಿಯೋದಲ್ಲಿ, ಒಂದು ಕಾಲಿಲ್ಲದ ಮಗುವಿದ್ದು ಅದು ತನ್ನಷ್ಟಕ್ಕೆ ತಾನು ಸೋಫಾ ಮೇಲೆ ಕುಳಿತುಕೊಂಡು ಆಟವಾಡುತ್ತಿರುತ್ತದೆ. ಆಗ ಡಾಕ್ಟರ್ ಒಳಗಡೆ ಬಂದು ಕೆಲವು ಬಲೂನ್ ಹಾಗೂ ಒಂದು ಕೃತ್ರಿಮ ಕಾಲನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಬರುತ್ತಾನೆ. ಮಗು ಕೃತ್ರಿಮ ಕಾಲಿನ ಕಡೆಗೆ ಲಕ್ಷ್ಯ ವಹಿಸಿದೆ ಡಾಕ್ಟರ್ ಕೈಯಲ್ಲಿದ್ದ ಬಲೂನ್ ಕಡೆಗೆ ಲಕ್ಷ್ಯ ವಹಿಸುತ್ತದೆ. ಆಗ ಡಾಕ್ಟರ್ ಮಗುವಿಗೆ ಬಲೂನ್ ನೀಡುತ್ತಾರೆ. ಆಗ ಮಗು ತುಂಬಾನೇ ಖುಷಿ ಪಡುತ್ತದೆ. ಕೆಲವು ಸಮಯದ ನಂತರ ಡಾಕ್ಟರ್ ಆ ಮಗುವಿಗೆ ಕೃತ್ರಿಮ ಕಾಲನ್ನು ಕೂಡಿಸುತ್ತಾರೆ. ಆಗ ಮಗುವಿಗೆ ಯಾವುದೇ ಪ್ರಕಾರದ ಫೀಲಿಂಗ್ ಬರಲಿಲ್ಲ. ಯಾವ ಸಮಯದಲ್ಲಿ ಡಾಕ್ಟರ್ ಆ ಮಗುವನ್ನು ನೆಲದ ಮೇಲೆ ನಿಲ್ಲಿಸುತ್ತಾರೆಯೋ ಆಗ ಮಾತ್ರ ಮಗುವಿಗೆ ಒಳಗಿನಿಂದ ಏನೋ ಒಂದು ಪ್ರಕಾರದ ಫೀಲಿಂಗ್ ಬರುತ್ತದೆ ಇದುವರೆಗೆ ಎಂದಿಗೂ ಎರಡು ಕಾಲಲ್ಲಿ ನಿಂತಿಲ್ಲ ಆದರೆ ಇಂದು ಮಾತ್ರ ನಾನು ಎರಡು ಕಾಲಲ್ಲಿ ನಿಂತಿದ್ದೇನೆ ಎಂದು ಸಂತಸಪಟ್ಟು ಕೈಯಲ್ಲಿ ಬಲೂನ್ ಹಿಡಿದು ಜಿಗಿಯಲು ಶುರು ಮಾಡುತ್ತಾಳೆ. ಆ ಮಗುವಿಗೆ ಆದ ಸಂತಸವನ್ನು ನೀವು ವೀಡಿಯೋ ನೋಡಿದ ಮೇಲೆ ನಿಮಗೆ ಅರ್ಥವಾಗುವದು.

ವೀಡಿಯೋ ನೋಡಿ.

ಈ ಅದ್ಭುತವಾದ ವೀಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ವನ್ನು ಇನ್ಸ್ಟಾಗ್ರಾಮ್ ನಲ್ಲಿ rizwan_malik_002 ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಎರಡು ಮಿಲಿಯನ್ ನಷ್ಟು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.