Video; ವಿರಾಟ್ ಕೊಹ್ಲಿ ಕೈಚೆಲ್ಲಿದ ಕ್ಯಾಚ್ ಹಠಾತ್ ರಿಷಭ್ ಪಂತ್ ಹಿಡಿದು ಮೂಡಿಸಿದರು ಅಚ್ಚರಿ…

ಸದ್ಯ ಬಾಂಗ್ಲಾದೇಶದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ 2 ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆದಿದೆ. ಪ್ರಸ್ತುತ ಪಂದ್ಯದಲ್ಲಿ ಭಾರತ ಗೆಲುವಿನ ಸಮೀಪ ಬರುತ್ತಿದೆ. ಈ ಪಂದ್ಯದಲ್ಲಿ ನಾಲ್ಕನೆಯ ದಿನ ಮಾತ್ರ ಒಂದು ವಿಶೇಷತೆ ಘಟಿಸಿತು.

ಭಾರತೀಯ ತಂಡಕ್ಕೆ ವಿಕೆಟ್ ನ ತೀವ್ರ ಅವಶ್ಯಕತೆ ಇದ್ದಾಗಲೇ ವಿರಾಟ್ ಅವರು ನಜಮಲ್ ಹಾಸನ್ ಶಂಟೋ ಅವರ ಕ್ಯಾಚ್ ಒಂದನ್ನು ಕೈಚೆಲ್ಲಿದರು. ಇಲ್ಲಿ ವಿರಾಟ್ ಮೊದಲ ಸ್ಲಿಪ್ ನೆಡೆಗೆ ಜಿಗಿದು ಹಿಡಿಯುವ ಕ್ಯಾಚ್ ಯಶಸ್ವಿಯಾಗಲಿಲ್ಲ. ಆದರೆ ಅಲ್ಲಿಯೇ ಕವರ್ ಮಾಡುತ್ತಿದ್ದ ರಿಷಭ್ ಪಂತ್ ಸೂಪರ್ ಕ್ಯಾಚ್ ಹಿಡಿದು ಅಚ್ಚರಿ ಮೂಡಿಸಿದರು. ಇಲ್ಲಿ ರಿಷಭ್ ಅವರಿಂದಲೂ ಕ್ಯಾಚ್ ಮಿಸ್ ಆಗುವದರಲ್ಲಿತ್ತು. ಆದರೆ ರಿಷಭ್ ಮಾತ್ರ ಕ್ಯಾಚ್ ಹಿಡಿಯುವತನಕ ಬಾಲ್ ಮೇಲಿನ ದೃಷ್ಟಿಯನ್ನು ತೆಗೆದೇ ಇಲ್ಲ. ಕೊನೆಗೆ ಮಿಸ್ ಆದ ಕ್ಯಾಚ್ ಸೇಫ್ ಮಾಡುವದರಲ್ಲಿ ರಿಷಭ್ ಸಕ್ಸಸ್ ಆದರು.

ನೋಡಿ ಈ ವಿಡಿಯೋ…