Video; ಇನ್ನು ಏನೇನ್ ನೋಡ್ಬೇಕು? ವರನ ಮುಂದೆಯೇ ಪ್ರಿಯಕರನ ಕೊರಳಿಗೆ ಬಿದ್ದಳು ವಧು! ಇಬ್ಬರನ್ನು ಬಿಡಿಸಲು ಮುಂದಾದರೂ ಮನೆಯವರು…

ಮದುವೆಯು ವರ ಮತ್ತು ವಧುವಿನ ಜೀವನದಲ್ಲಿ ಎಲ್ಲಕ್ಕೂ ಮಹತ್ವದ ಕ್ಷಣವಾಗಿರುತ್ತದೆ. ಇತ್ತೀಚೆಗಂತೂ ಮದುವೆಗಳು ತುಂಬಾ ವಿಜ್ರಂಬಣೆಯಿಂದ ನಡೆಯುತ್ತಿವೆ. ಮದುವೆಯ ಪ್ರತಿಯೊಂದು ಸೀನ್ಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತಿವೆ. ಮದುವೆಯಲ್ಲಿ ನಡೆದ ಅನೇಕ ವಿಶೇಷ ದೃಶ್ಯಗಳು ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುವುದುಂಟು. ಈಗ ಇಲ್ಲಿ ನೋಡಲಿರುವ ಮದುವೆಯ ದೃಶ್ಯದಲ್ಲಿ ವಧು ಸಕ್ಕತ್ತಾಗಿ ಡ್ಯಾನ್ಸ್ ಮಾಡುತ್ತಿದ್ದಾಳೆ. ಈ ಡಾನ್ಸ್ ಆಕೆ ತನ್ನ ಭಾವಿಪತಿಯ ಜೊತೆಗೆ ಅಲ್ಲ ತನ್ನ ಪ್ರಿಯಕರನ ಜೊತೆಗೆ ಮಾಡುತ್ತಿದ್ದಾಳೆ.

ಮದುವೆಯಲ್ಲಿ ಘಟಿಸುವ ಅನೇಕ ದೃಶ್ಯಗಳು ಕೆಲವೊಮ್ಮೆ ನೋಡುವವರಿಗೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಒಂದು ದೃಶ್ಯ ಮದುವೆಗೆ ಉಪಸ್ಥಿತರಿದ್ದವರು ಮತ್ತು ಸೋಶಿಯಲ್ ಮೀಡಿಯಾದ ನೆಟ್ಟಗರಿಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಪ್ರಸ್ತುತ ದೃಶ್ಯದಲ್ಲಿ ವಧು ತನ್ನ ಪ್ರಿಯಕರ ಜೊತೆಗೆ ಡಾನ್ಸ್ ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ವರ ಹೆಚ್ಚು ಮೋರೆ ಹಾಕಿಕೊಂಡು ಹಾಕಿಕೊಂಡು ಇವರಿಬ್ಬರ ಕುಣಿತವನ್ನು ನೋಡುತ್ತಾನೆ ಮತ್ತು ಅಲ್ಲಿಂದ ಹೊರಟು ಹೋಗುತ್ತಾನೆ. ಈ ಸಂದರ್ಭದಲ್ಲಿ ಇಬ್ಬರ ಸುತ್ತಮುತ್ತಲು ಮದುವೆಗೆ ಬಂದ ಸಂಬಂಧಿಗಳ ಗದ್ದಲ ಇರುವುದು ಕಂಡು ಬರುತ್ತದೆ. ಪ್ರಿಯಕರ ಮತ್ತು ವಧು ಇಬ್ಬರು ಕೂಡಿ ಡಾನ್ಸ್ ಮಾಡುತ್ತಾ ಮಾಡುತ್ತಾ ಕೊನೆಗೆ ಆಲಿಂಗನ ಮಾಡುತ್ತಾರೆ. ಆಗ ಸಂಬಂಧಿಕರು ಆಕ್ಟಿವ್ ಆಗಿ ಇವರಿಬ್ಬರನ್ನು ಈ ಸ್ಥಿತಿಯಿಂದ ದೂರ ಮಾಡಲು ಪ್ರಯತ್ನಿಸುತ್ತಾರೆ. ಪ್ರಸ್ತುತ ಈ ಎಲ್ಲ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.

ವೀಡಿಯೋ ನೋಡಿ

https://twitter.com/JaikyYadav16/status/1603381345975119872?ref_src=twsrc%5Etfw%7Ctwcamp%5Etweetembed%7Ctwterm%5E1603381345975119872%7Ctwgr%5E460ba4a7ac4d7e760aecc9bd828afdbeed0eed30%7Ctwcon%5Es1_c10&ref_url=https%3A%2F%2Fndtv.in%2Fbollywood%2Fbride-dance-with-her-lover-on-govinda-song-tujhko-hi-dulhan-banaunga-groom-kept-watching-watch-viral-video-3612299

ಸಕತ್ತಾಗಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಜಾಕಿ ಯಾದವ್ ಹೆಸರಿನ ಐಡಿಯಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕ್ಯಾಪ್ಷನ್ ನಲ್ಲಿ “ಅಣ್ಣ ಆ ವರನಿಗೆ ಸ್ವಲ್ಪ ಚೆಕ್ ಮಾಡಿ ಆತ ಜೀವಂತವಾಗಿದ್ದಾನೋ ಅಥವಾ….” ಎಂದು ಬರೆದಿದ್ದಾರೆ. ಈ ಕಂಟೆಂಟ್ ಮೇಲೆ ನೆಟ್ಟಿಗರು ಅನೇಕ ರೀತಿಯ ತಮಾಷೆಯ ಕಾಮೆಂಟ್ಗಳನ್ನು ಮಾಡಿದ್ದಾರೆ.