ಈ ಒಂದು ಕಾರಣದಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಇವರನ್ನು ಎಲಿಮಿನೇಟ್ ಮಾಡಬಹುದು!!
ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿ ಇನ್ನೇನು 12 ವಾರ ಮುಗಿಯುವ ಸಮಯ ಬಂದಿದೆ. ನಮಗೆಲ್ಲ ಗೊತ್ತಿದ್ದ ಹಾಗೆ ಶನಿವಾರ ಬಂದರೆ ಸಾಕು ನಾವೆಲ್ಲ ಕುತೂಹಲದಿಂದ ಬಿಗ್ ಬಾಸ್ ನೋಡುತ್ತೇವೆ ಏಕೆ ಗೊತ್ತಾ? ಎಲ್ಲಕ್ಕಿಂತ ಮುಖ್ಯವಾಗಿ ಕಿಚ್ಚ ಸುದೀಪ ಅವರ ಹೊಸ ಹೊಸ ಉಡುಪುಗಳನ್ನು ನೋಡಲು ಸಿಗಬಹುದು ಅಷ್ಟೇ ಅಲ್ಲ ಅವರ ಹೊಸ ಹೊಸ ಸ್ಟೈಲ್ ಕೂಡಾ ನೋಡಲು ಸಿಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸಂಪೂರ್ಣ ವಾರದಲ್ಲಿ ನಡೆದ ಘಟನೆಗಳ ಕುರಿತು ಚರ್ಚಿಸುವ ಸಮಯ. ವಾರದ ಕಥೆ ನಿಮ್ಮ ಕಿಚ್ಚನ ಜೊತೆ ಅನ್ನೋ ಹಾಗೆ ಸುದೀಪ್ ಅವರು ಪ್ರತಿಯೊಬ್ಬ ಸ್ಪರ್ಧಿ ಮಾಡಿರುವ ಒಳ್ಳೆಯ ಹಾಗೂ ಕೆಟ್ಟ ವರ್ತನೆಗಳನ್ನು ಆ ಸ್ಪರ್ಧಿಗಳ ಗಮನಕ್ಕೆ ತಂದುಕೊಟ್ಟು ಅವರಿಗೆ ಸಲಹೆ ಸಹ ನೀಡುತ್ತಾರೆ.
ಮನೆಯಲ್ಲಿ ಈಗಾಗಲೇ ಕೇವಲ 9 ಸ್ಪರ್ಧಿಗಳಿದ್ದು ಅದ್ರಲ್ಲಿ ಈ ವಾರ ಒಬ್ಬ ಸದಸ್ಯ ಮನೆಯಿಂದ ಹೊರ ಹೋಗುವ ಸಂಭವ ವಿದೆ. ಏಕೆಂದರೆ ಬಿಗ್ ಬಾಸ್ ಆಟದ ನಿಯಮವೇ ಹಾಗೆ ಪ್ರತಿ ವಾರ ಒಬ್ಬ ಸದಸ್ಯ ಮನೆಯಿಂದ ಹೊರಹೋಗಬೇಕಾಗುತ್ತದೆ ಆದ್ರೆ ಕೆಲವೊಮ್ಮೆ ಡಬಲ್ ಎಲಿಮಿನೇಶನ್ ಕೂಡಾ ಆಗಬಹುದು.
ಈ ಬಿಗ್ ಬಾಸ್ ಮನೆ ಒಂಥರ ಲಾಟರಿ ಇದ್ದ ಹಾಗೆ ಮನೆಯಲ್ಲಿ ಒಳ್ಳೆಯ ನಡತೆ, ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ, ಇತರ ಸ್ಪರ್ಧಿಗಳೊಂದಿಗೆ ಉತ್ತಮ ಸಂಭಾಷಣೆ ಇವೆಲ್ಲ ಪ್ಲಸ್ ಆದ್ರೆ ಸಾಕು ಆ ವ್ಯಕ್ತಿ ಬಿಗ್ ಬಾಸ್ ಗೆದ್ದೇ ಗೆಲ್ಲುತ್ತಾನೆ. ಅದರ ತದ್ವಿರುದ್ಧವಾಗಿ ಯಾವ ಸ್ಪರ್ಧಿ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ಅಂದರೆ ಕಳಪೆ ಪ್ರದರ್ಶನ ಮತ್ತು ಇನ್ನಿತರರೊಂದಿಗೆ ಕೆಟ್ಟದಾಗಿ ವರ್ತಿಸಿದರೆ ಆ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ನೇರವಾಗಿ ತಮ್ಮ ಮನೆಗೆ ಹೋಗಬೇಕಾಗುತ್ತದೆ ಅಂದರೆ ಆ ವಾರ ಎಲಿಮಿನೇಟ್ ಆಗಬೇಕಾಗುತ್ತದೆ.

ಈ ಸಲದ ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಗಳನ್ನಾಗಿ ಹೆಚ್ಚಾಗಿ ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಲಾಗಿದೆ ಸಾಮಾನ್ಯ ಜನರಿಗೆ ಈ ಬಾರಿ ಅವಕಾಶ ನೀಡಲಿಲ್ಲ. ಈ ಸ್ಪರ್ಧಿಗಳಲ್ಲಿ ಹೆಚ್ಚಾಗಿ ನಟ ನಟಿಯರು ಹಾಗೂ ಉದ್ಯಮಿ, ಸಂಗೀತಗಾರರು ಒಳಗೊಂಡಿದ್ದು ಕೆಲ ಹಿರಿಯ ನಟರು ಕೂಡಾ ಈ ಸ್ಪರ್ಧೆಯಲ್ಲಿ ಸಹಭಾಗ ತಗೆದುಕೊಂಡಿದ್ದಾರೆ.
ಅಂದ ಹಾಗೆ ಈ ವಾರ ಅಂದರೆ 12 ನೇ ವಾರದ ಎಲಿಮಿನೇಟ್ ಸಲುವಾಗಿ ನಾಮಿನೇಟ್ ಆಗಿರುವ ಸ್ಪರ್ಧಿಗಳು ಯಾರೆಂದರೆ ರೂಪೇಶ್ ಆರ್ ,ದಿವ್ಯಾ, ದೀಪಿಕಾ , ಅನುಪಮ, ಅರುಣ್ ಹಾಗೂ ಆರ್ಯವರ್ಧನ್ ಇವರ ಸಮಾವೇಶವಿದೆ. ಆದರೆ ನಮಗೆಲ್ಲ ಕುತೂಹಲದ ವಿಷಯ ವೇನೆಂದರೆ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗಬಹುದು ಅಂತ ಹೌದಲ್ವಾ ಫ್ರೆಂಡ್ಸ್ ಸೋ ಹಾಗಿದ್ದರೆ ನಮ್ಮ ಊಹಾಪೋಹಗಳ ಪ್ರಕಾರ ನಿಮಗಿಲ್ಲ ಸ್ವಲ್ಪ ವಿಶ್ಲೇಷಣೆ ಮಾಡಿ ತಿಳಿಸಿ ಹೇಳುತ್ತೇವೆ ಬನ್ನಿ.

ಈ ವಾರದ ವೋಟ್ ಗಳ ಕುರಿತು ಪರಿಶೀಲನೆ ಮಾಡಿದಾಗ ನಿಮಗೆ ಗೊತ್ತಾಗುತ್ತೆ ಈ ವಾರ ಮನೆಯಿಂದ ಯಾರು ಹೊರಗೆ ಹೋಗುವರು ಅಂತ. ಈ ವಾರದ ನಾಮಿನೇಟ್ ಆಗಿರುವ ಆರು ಸ್ಪರ್ಧಿಗಳಲ್ಲಿ ಹೆಚ್ಚಾಗಿ ಮನರಂಜನೆ ನೀಡಿರುವ ಸ್ಪರ್ಧಿಗಳೆಂದರೆ ರೂಪೇಶ್ ಹಾಗೂ ದೀಪಿಕಾ ಇವರು ಈ ವಾರ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಈ ವಾರದ ಎಲ್ಲ ಎಪಿಸೋಡ್ ಗಳು ನೋಡಿದ ಮೇಲೆ ಅವುಗಳಲ್ಲಿ ಉತ್ತಮವಾಗಿ ಆಟ ಆಡಿದ ವ್ಯಕ್ತಿಗಳ ಲಿಸ್ಟ್ ನಲ್ಲಿ ರೂಪೇಶ್ ಆರ್, ದಿವ್ಯಾ, ದೀಪಿಕಾ, ಅನುಪಮಾ, ಅರುಣ ಹಾಗೂ ಕೊನೆಯಲ್ಲಿ ಆರ್ಯವರ್ಧನ್ ಗುರೂಜಿ ಬರುವರು. ಇದು ನಮ್ಮ ಊಹಾಪೋಹ ಅಷ್ಟೇ ಇದರ ಮೇಲಿಂದ ಈ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೋಗುವ ವ್ಯಕ್ತಿ ನಮ್ಮ ಗೆಸ್ ಪ್ರಕಾರ ಆರ್ಯವರ್ಧನ್ ಸರ್ ಇರಬಹುದು. ಆದರೆ ಓದುಗರೇ ಇದು ಕೇವಲ ಊಹೆ ಅಷ್ಟೇ ಎಲಿಮಿನೇಟ್ ಆಗಿ ಹೋಗುವ ಸ್ಪರ್ಧಿ ಯಾರೆಂಬುದು ನಿಜವಾಗಿ ತಿಳಿದುಕೊಳ್ಳಬೇಕಾದರೆ ಇಂದಿನ ಬಿಗ್ ಬಾಸ್ ತಪ್ಪದೆ ನೋಡಿ.