FIFA World Cup final: ಫ್ರಾನ್ಸ್ ಮತ್ತು ಅರ್ಜೆಂಟೀನಾ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ತಲಾ 3-3 ಗೋಲ್ ಮಾಡಿದವು, ಆದರೆ ಮ್ಯಾಚ್ ಗೆದ್ದದ್ದು ಯಾರಂತ ನೋಡಿ!!!
ಕಳೆದ ಕೆಲವು ದಿವಸಗಳಿಂದ ಎಲ್ಲರ ಗಮನ ಫಿಫಾ ಫುಟ್ಬಾಲ್ ವಿಶ್ವಕಪ್ ನತ್ತ ಇತ್ತು. ಅದು ಯಾರು ಗೆಲ್ಲುವರು ಎಂಬುದು ತಿಳಿದುಕೊಳ್ಳಲು ಎಲ್ಲರೂ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಆದರೆ ನಿನ್ನೆ ಅದರ ಉತ್ತರ ಸಿಕ್ಕಿಯೇ ಬಿಟ್ಟಿದೆ ಇಂಥ ಅದ್ಭುತವಾದ ಮ್ಯಾಚ್ ನೋಡಲು ಮತ್ತೊಮ್ಮೆ ದೊರೆಯದೆ ಇರಬಹುದು. 2022 ರ ವಿಶ್ವಕಪ್ ಕತಾರ್ ದಲ್ಲಿ ನಡೆಯಿತು. ಎಲ್ಲ ದೇಶಗಳಲ್ಲಿ ಬಲಾಢ್ಯ ದೇಶ ಹಾಗೂ ಕಳೆದ ವಿಶ್ವಕಪ್ ನ ಚಾಂಪಿಯನ್ ಆದ ಫ್ರಾನ್ಸ್ ಹಾಗೂ ಅರ್ಜೆಂಟೀನಾ ದೇಶದ ನಡುವೆ ಫೈನಲ್ ಪಂದ್ಯ ಜರುಗಿತು. ಇದನ್ನು ನೋಡಲು ಜಗತ್ತಿನಾದ್ಯಂತ ಫ್ಯಾನ್ಸ್ ಸ್ಟೇಡಿಯಂನಲ್ಲಿ ತುಂಬಿದ್ದರು. ಆದರೆ ನಿನ್ನೆ ನಡೆದ ಅದ್ಭುತವಾದ ಪಂದ್ಯದಲ್ಲಿ ಕೆಲವರಿಗೆ ದುಃಖದ ಕಣ್ಣೀರು ತರಿಸಿದರೆ ಇನ್ನೂ ಕೆಲವರಿಗೆ ಸಂತಸದ ಕಣ್ಣೀರು ತರಿಸಿದೆ.
ಈ ಪಂದ್ಯದಲ್ಲಿ ರೋಮಾಂಚನವಾದ ವಾತಾವರಣ ನಿರ್ಮಾಣವಾಗಿತ್ತು. ಫ್ರಾನ್ಸ್ ಆಟಗಾರರು ಸಹ ತಮ್ಮ ಸಂಪ್ರದಾಯ ಮುಂದೋಡಿಸುವ ಸಲುವಾಗಿ ಈ ಬಾರಿಯೂ ಗೆಲ್ಲಬೇಕು ಅನ್ನೋ ಹಠ ಅವರದಾಗಿದ್ದರೆ, ಸುಮಾರು 38 ವರ್ಷಗಳ ನಂತರ ಈ ಬಾರಿಯಾದರೂ ವಿಶ್ವಕಪ್ ತಮ್ಮ ಮುಡಿಗೇರಿಸಿಕೊಳ್ಳಬೇಕು ಅನ್ನೋ ಉದ್ದೇಶದಿಂದ ಅರ್ಜೆಂಟೀನಾ ತಂಡ ಮೈದಾನಕ್ಕೆ ಇಳಿದಿದ್ದವು, ಫೈನಲ್ ಪಂದ್ಯದಲ್ಲ ಎರಡು ತಂಡಗಳು ಉತ್ತಮವಾದ ಪ್ರದರ್ಶನ ನೀಡಿದವು.
ಜಗತ್ತಿನ ಸುಪ್ರಸಿದ್ಧ ಆಟಗಾರ ಮೆಸ್ಸಿ ತಮ್ಮ ದೇಶಕ್ಕೆ ಹೇಗಾದರೂ ಮಾಡಿ ಈ ಬಾರಿಯಾದರೂ ವಿಶ್ವಕಪ್ ತಗೆದುಕೊಂಡು ಹೋಗಬೇಕು ಎಂಬುದು ಅವರ ಕನಸ್ಸಾಗಿತ್ತು. ಆ ಕನಸ್ಸನ್ನು ನನಸು ಮಾಡಲು ಅವರ ನೀಡಿರುವ ಪ್ರದರ್ಶನ ವರ್ಣನೆಗೆ ಸಾಲದು. ನೀವು ನೋಡಿರಬಹುದು ಅರ್ಜೆಂಟೀನಾ ದೇಶ ಫೈನಲ್ ಗೆ ಹೋಗಿದೆ ಅನ್ನೋ ಸುದ್ದಿ ಬರುತ್ತಿದ್ದ ಹಾಗೆ ಅರ್ಜೆಂಟೀನಾ ದೇಶದ ಜನರು ಖುಷಿ ಪಟ್ಟ ಪರಿ ನೋಡಿದರೆ ಅಬ್ಬಾ ಅನಿಸುತ್ತೆ. ಈ ದೇಶದ ಜನರು ನಿನ್ನೆ ತಮ್ಮ ಎಲ್ಲ ಕಾರ್ಯಕ್ರಮಗಳು ರದ್ದುಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿ ನಿನ್ನೆ ಬರೀ ಫುಟ್ಬಾಲ್ ಮ್ಯಾಚ್ ನೋಡಲು ಅನುಕೂಲ ಮಾಡಿ ಕೊಡಬೇಕು ಎಂದು ವಿನಂತಿಸಿದರು.
ಈ ರೋಮಾಂಚನಕಾರಿಯಾದ ಪಂದ್ಯದಲ್ಲಿ ಒಂದು ಬದಿಗೆ ಕಳೆದ ಚಾಂಪಿಯನ್ ತಂಡ ವಿದ್ದರೆ ಮತ್ತೊಂದೆಡೆ ಜಗತ್ತಿನ ಸುಪ್ರಸಿದ್ಧ ಆಟಗಾರ ಮೆಸ್ಸಿ ಇದ್ದರು. ಉಭಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಂಪೂರ್ಣ ಸಮಯದಲ್ಲಿ 3-3 ಗೋಲಗಳು ಮಾಡಿದವು. ಇಂತಹ ಹೈ ವೋಲ್ಟೇಜ್ ಮ್ಯಾಚ್ ನಲ್ಲಿ ಪಂದ್ಯ ಟೈ ಆದರೆ ಅಲ್ಲಿದ್ದ ಸ್ಪರ್ಧಿಗಳು ಮತ್ತು ಫ್ಯಾನ್ಸ್ ಗಳಲ್ಲಿ ಎಂತಹ ವಾತಾವರಣ ನಿರ್ಮಾಣವಾಗಿರಬಹುದು.
ಕೊನೆಗೆ ಈ ಪಂದ್ಯದಲ್ಲಿ ಅರ್ಜೆಂಟೀನಾ ದೇಶವನ್ನು ಚಾಂಪಿಯನ್ ನನ್ನಾಗಿ ಘೋಷಣೆ ಮಾಡಲಾಯಿತು. ಅದು ಹೇಗೆಂದರೆ ಪೆನಾಲ್ಟಿಯ್ ವಿಚಾರ ಮಾಡಲಾಗಿ ಉಭಯದೇಶಗಳು 4-2 ಈ ರೀತಿಯಲ್ಲಿದ್ದವು ಹೀಗಾಗಿ ಈ ಪಂದ್ಯವನ್ನು ಅರ್ಜೆಂಟೀನಾ ದೇಶಕ್ಕೆ ಗೆಲುವು ಸಿಕ್ಕಿತು. ಮೆಸ್ಸಿ ಈ ಬಾರಿ ಕಪ್ ತನ್ನ ದೇಶಕ್ಕೆ ಉಡುಗೊರೆಯಾಗಿ ನೀಡಿದರು. ಸುಮಾರು 38 ವರ್ಷಗಳ ನಂತರ ಮತ್ತೊಮ್ಮೆ ತಮ್ಮ ದೇಶ ವಿಶ್ವಕಪ್ ತನ್ನ ಮುಡಿಗೇರಿಸಿಕೊಂಡದ್ದಕ್ಕಾಗಿ ಅಲ್ಲಿಯ ಜನರು ಪಟ್ಟ ಸಂತಸದ ಪ್ರಸಂಗ ಹೇಳತೀರದು.
ವಿಡಿಯೋ ನೋಡಿ..
View this post on Instagram