ನಿನ್ನೆ ಬಿಗ್ಬಾಸ್ ಮನೆಯಿಂದ ಹೊರಗೆ ಬಂದವರು ಯಾರಂತ ಗೊತ್ತೇ, ತಿಳಿದುಕೊಳ್ಳಿ!!

ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿ ಇನ್ನೇನು 12 ವಾರ ಮುಗಿಯುವ ಸಮಯ ಬಂದಿದೆ. ನಮಗೆಲ್ಲ ಗೊತ್ತಿದ್ದ ಹಾಗೆ ಶನಿವಾರ ಬಂದರೆ ಸಾಕು ನಾವೆಲ್ಲ ಕುತೂಹಲದಿಂದ ಬಿಗ್ ಬಾಸ್ ನೋಡುತ್ತೇವೆ ಏಕೆ ಗೊತ್ತಾ? ಎಲ್ಲಕ್ಕಿಂತ ಮುಖ್ಯವಾಗಿ ಕಿಚ್ಚ ಸುದೀಪ ಅವರ ಹೊಸ ಹೊಸ ಉಡುಪುಗಳನ್ನು ನೋಡಲು ಸಿಗಬಹುದು ಅಷ್ಟೇ ಅಲ್ಲ ಅವರ ಹೊಸ ಹೊಸ ಸ್ಟೈಲ್ ಕೂಡಾ ನೋಡಲು ಸಿಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸಂಪೂರ್ಣ ವಾರದಲ್ಲಿ ನಡೆದ ಘಟನೆಗಳ ಕುರಿತು ಚರ್ಚಿಸುವ ಸಮಯ. ವಾರದ ಕಥೆ ನಿಮ್ಮ ಕಿಚ್ಚನ ಜೊತೆ ಅನ್ನೋ ಹಾಗೆ ಸುದೀಪ್ ಅವರು ಪ್ರತಿಯೊಬ್ಬ ಸ್ಪರ್ಧಿ ಮಾಡಿರುವ ಒಳ್ಳೆಯ ಹಾಗೂ ಕೆಟ್ಟ ವರ್ತನೆಗಳನ್ನು ಆ ಸ್ಪರ್ಧಿಗಳ ಗಮನಕ್ಕೆ ತಂದುಕೊಟ್ಟು ಅವರಿಗೆ ಸಲಹೆ ಸಹ ನೀಡುತ್ತಾರೆ.

ಮನೆಯಲ್ಲಿ ಈಗಾಗಲೇ ಕೇವಲ 9 ಸ್ಪರ್ಧಿಗಳಿದ್ದು ಅದ್ರಲ್ಲಿ ಈ ವಾರ ಒಬ್ಬ ಸದಸ್ಯ ಮನೆಯಿಂದ ಹೊರ ಹೋಗುವ ಸಂಭವ ವಿದೆ. ಏಕೆಂದರೆ ಬಿಗ್ ಬಾಸ್ ಆಟದ ನಿಯಮವೇ ಹಾಗೆ ಪ್ರತಿ ವಾರ ಒಬ್ಬ ಸದಸ್ಯ ಮನೆಯಿಂದ ಹೊರಹೋಗಬೇಕಾಗುತ್ತದೆ ಆದ್ರೆ ಕೆಲವೊಮ್ಮೆ ಡಬಲ್ ಎಲಿಮಿನೇಶನ್ ಕೂಡಾ ಆಗಬಹುದು.

ಈ ಬಿಗ್ ಬಾಸ್ ಮನೆ ಒಂಥರ ಲಾಟರಿ ಇದ್ದ ಹಾಗೆ ಮನೆಯಲ್ಲಿ ಒಳ್ಳೆಯ ನಡತೆ, ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ, ಇತರ ಸ್ಪರ್ಧಿಗಳೊಂದಿಗೆ ಉತ್ತಮ ಸಂಭಾಷಣೆ ಇವೆಲ್ಲ ಪ್ಲಸ್ ಆದ್ರೆ ಸಾಕು ಆ ವ್ಯಕ್ತಿ ಬಿಗ್ ಬಾಸ್ ಗೆದ್ದೇ ಗೆಲ್ಲುತ್ತಾನೆ. ಅದರ ತದ್ವಿರುದ್ಧವಾಗಿ ಯಾವ ಸ್ಪರ್ಧಿ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ಅಂದರೆ ಕಳಪೆ ಪ್ರದರ್ಶನ ಮತ್ತು ಇನ್ನಿತರರೊಂದಿಗೆ ಕೆಟ್ಟದಾಗಿ ವರ್ತಿಸಿದರೆ ಆ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ನೇರವಾಗಿ ತಮ್ಮ ಮನೆಗೆ ಹೋಗಬೇಕಾಗುತ್ತದೆ ಅಂದರೆ ಆ ವಾರ ಎಲಿಮಿನೇಟ್ ಆಗಬೇಕಾಗುತ್ತದೆ.

ಈ ಸಲದ ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಗಳನ್ನಾಗಿ ಹೆಚ್ಚಾಗಿ ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಲಾಗಿದೆ ಸಾಮಾನ್ಯ ಜನರಿಗೆ ಈ ಬಾರಿ ಅವಕಾಶ ನೀಡಲಿಲ್ಲ. ಈ ಸ್ಪರ್ಧಿಗಳಲ್ಲಿ ಹೆಚ್ಚಾಗಿ ನಟ ನಟಿಯರು ಹಾಗೂ ಉದ್ಯಮಿ, ಸಂಗೀತಗಾರರು ಒಳಗೊಂಡಿದ್ದು ಕೆಲ ಹಿರಿಯ ನಟರು ಕೂಡಾ ಈ ಸ್ಪರ್ಧೆಯಲ್ಲಿ ಸಹಭಾಗ ತಗೆದುಕೊಂಡಿದ್ದಾರೆ.

ಅಂದ ಹಾಗೆ ಈ ವಾರ ಅಂದರೆ 12 ನೇ ವಾರದ ಎಲಿಮಿನೇಟ್ ಸಲುವಾಗಿ ನಾಮಿನೇಟ್ ಆಗಿರುವ ಸ್ಪರ್ಧಿಗಳು ಯಾರೆಂದರೆ ರೂಪೇಶ್ ಆರ್ ,ದಿವ್ಯಾ, ದೀಪಿಕಾ , ಅನುಪಮ, ಅರುಣ್ ಹಾಗೂ ಆರ್ಯವರ್ಧನ್ ಇವರ ಸಮಾವೇಶವಿದೆ. ಆದರೆ ನಮಗೆಲ್ಲ ಕುತೂಹಲದ ವಿಷಯ ವೇನೆಂದರೆ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗಬಹುದು ಅಂತ ಹೌದಲ್ವಾ ಫ್ರೆಂಡ್ಸ್ ಸೋ ಹಾಗಿದ್ದರೆ ನಮ್ಮ ಊಹಾಪೋಹಗಳ ಪ್ರಕಾರ ನಿಮಗಿಲ್ಲ ಸ್ವಲ್ಪ ವಿಶ್ಲೇಷಣೆ ಮಾಡಿ ತಿಳಿಸಿ ಹೇಳುತ್ತೇವೆ ಬನ್ನಿ.

ಈ ವಾರದ ಕೊನೆಗೆ ಬಿಗ್ಬಾಸ್ ಮನೆಯಿಂದ ಹೊರಗೆ ಅಂದರೆ ಎಲಿಮಿನೇಟ್ ಆಗಿ ಹೊರಬಂದ ಸ್ಪರ್ಧಿ ಯಾರೆಂದರೆ ಅವರೇ ಅನುಪಮಾ ಗೌಡ. ಹೌದು ಈ ವಾರ ಎಲ್ಲರೂ ಅಮೂಲ್ಯ ಅಥವಾ ಆರ್ಯವರ್ಧನ್ ಹೊರಗೆ ಹೋಗಬೇಕು ಎಂದು ಡಿಸೈಡ್ ಮಾಡಿದ್ದರು. ಆದರೆ ಹೋಗಿದ್ದು ಅನುಪಮಾ. ತಮ್ಮ ಕಳೆದ ಬಿಗ್ಬಾಸ್ ಆಟದಲ್ಲಿ ನಡೆದುಕೊಂಡು ರೀತಿ ಹಾಗೂ ಈ ಬಾರಿ ನಡೆದುಕೊಂಡು ಬಂದ ರೀತಿ ತುಂಬಾನೇ ವಿಭಿನ್ನವಾಗಿತ್ತು ಹಾಗಾಗಿ ಅದನ್ನೇ ನನ್ನ ಸೋಲಿಗೆ ಕರಣವಾಯಿತು ಎನ್ನುವದು ಅನುಪಮಾ ಅವರ ವಿಚಾರವಾಗಿದೆ.

ಅನುಪಮಾ ಗೌಡ ಈ ಬಾರಿ ತುಂಬಾನೇ ಅದ್ಭುತವಾದ ರೀತಿಯಲ್ಲಿ ಪ್ರದರ್ಶನ ನೀಡಿದರು. ಆದರೆ ಮೊದಲನೆಯ ವಾರದಲ್ಲಿದ್ದ ಅನುಪಮಾ ಗೌಡರ ವ್ಯಕ್ತಿತ್ವ , ಆಟದ ಹುಮ್ಮಸ್ಸು , ನಡೆದುಕೊಳ್ಳುವ ವರ್ತನೆ ಇವೆಲ್ಲವುಗಳಲ್ಲಿ ಬರ ಬರುತ್ತಾ ಬದಲಾವಣೆ ಯಾದದ್ದು ಎಲ್ಲೋ ಒಂದು ಕಡೆ ತಮ್ಮ ತನವನ್ನೇ ಕಳೆದುಕೊಂಡು ಮುಖವಾಡ ಧರಿಸಿಕೊಂಡು ಆಟ ಆಡುತ್ತಿದ್ದರು ಅನ್ನೋದು ಮನೆಯಲ್ಲಿದ್ದ ಸ್ಪರ್ಧಿಗಳ ಹೇಳಿಕೆಯಾಗಿತ್ತು. ಈ ವಾರ ಹೊರಗೆ ಬಂದ ಅನುಪಮಾ ಅವರು ತಾವು ಮತ್ತೊಮ್ಮೆ ಈ ಬಾರಿ ಮನೆಯಲ್ಲಿ ತುಂಬಾನೇ ಕಲಿತುಕೊಂಡೇ ಅಲ್ಲದೆ ಮನೆಯಲ್ಲಿಯ ಎಲ್ಲ ಸ್ಪರ್ಧಿಗಳ ಕುರಿತು ಉತ್ತಮವಾಗಿ ಒಂದೇ ವಾಕ್ಯದಲ್ಲಿ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ವಿವರಿಸಿದರು. ಈ ಬಾರಿ ರಾಕೇಶ ಗೆಲ್ಲುತ್ತಾರೆ ಅನ್ನೋದು ಅನುಪಮಾ ಅವರ ನಂಬಿಕೆ ಯಾಗಿದೆ. ಎಷ್ಟೇ ಆಗಲಿ ಇಲ್ಲಿಯವರೆಗೆ ನಮ್ಮನ್ನು ಮನರಂಜನೆ ಮಾಡಿದ ಅನುಪಮಾ ಗೌಡ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸೋಣ.