ಸುಮ್ಮನೆ ಊಟ ಮಾಡುತ್ತಿದ್ದ ಹುಡುಗನಿಗೆ ಟಕಲ್ಯಾ ಟಕಲ್ಯಾ ಎಂದು ರೇಗಿಸಿದ ವ್ಯಕ್ತಿ, ಸಿಟ್ಟಿಗೆದ್ದ ಹುಡುಗ ವ್ಯಕ್ತಿಯನ್ನು ಮಾಡಿದ್ದೇನು ನೋಡಿ ವೀಡಿಯೋ!!!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ.

ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಒಬ್ಬ ಹುಡುಗ ತನ್ನಷ್ಟಕ್ಕೆ ತಾನು ಊಟ ಮಾಡುತ್ತ ಕುಳಿತಿರುತ್ತಾನೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು ಈತನು ಊಟ ಮಾಡುತ್ತಿರುವ ಸ್ಟೈಲ್ ನ್ನು ವಿಡಿಯೋ ಮಾಡಲು ಶುರು ಮಾಡುತ್ತಾನೆ. ಇದನ್ನು ಗಮನಿಸಿದ ಹುಡುಗ ಏನು ಅನ್ನದೆ ಸುಮ್ಮನೆ ಕುಳಿತುಕೊಂಡು ಹಾಗೆಯೇ ಊಟ ಮಾಡುತ್ತಾನೆ ಇನ್ನೇನು ರೊಟ್ಟಿಯನ್ನು ಮುರಿದುಕೊಂಡು ತುತ್ತು ತಿನ್ನಬೇಕು ಅನ್ನೋವಷ್ಟರಲ್ಲಿ ಈತ ‘ಏ ಟಕಲ್ಯಾ ಟಕಲ್ಯಾ ‘ ಅಂತ ಆತನಿಗೆ ರೇಗಿಸುತ್ತಾನೆ. ಪಾಪ ಟಕಲ್ಯಾ ಅಂದು ನಮ್ಮನ್ನು ಯಾರಾದರೂ ಕರೆದರೆ ನಮಗೆ ಎಷ್ಟು ಸಿಟ್ಟು ಬರುತ್ತದೆ ಗೊತ್ತೇ ಇದೆ, ಅದೇ ರೀತಿಯಾಗಿ ಈ ಹುಡುಗ ಸಹ ತುಂಬಾ ಸಿಟ್ಟಿಗೆದ್ದ ಆತನು ವೀಡಿಯೋ ಮಾಡುವದನ್ನು ಕಂಡು ‘ ಏ ಆಯಿ **ಮಗ ನನ್ನ ವೀಡಿಯೋ ಮಾಡುತ್ತಾನ ನೋಡು ಆಯಿ’ ಅಂತ ಅಲ್ಲಿದ್ದ ತನ್ನ ಅಜ್ಜಿಗೆ ಹೇಳುತ್ತಾನೆ. ಈ ವಿಡಿಯೋ ನೋಡಿ ಆತನ ಭಾಷೆ, ಉಪಯೋಸಿದ ಶಬ್ದ ಹೇಗಿತ್ತು ಎಂಬುದು ನಿಮಗೆ ಗೊತ್ತಾಗುತ್ತೆ.

ವೀಡಿಯೋ ನೋಡಿ…

 

View this post on Instagram

 

A post shared by Saidu Saidu (@u_k_compions_13)

ಪ್ರಸ್ತುತ ವಿಡಿಯೋ ಸೋಶಿಯಲ್ ಮಿಡಿಯಾದ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ u_k_champion_13 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ ಕ್ಕಿಂತ ಹೆಚ್ಚು ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಅಲ್ಲದೆ ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.