ಸುಶಾಂತ್ ಅಷ್ಟೇ ಅಲ್ಲ , ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಗೂ ಬಂದಿದೆ ಈ ತರದ ಅನುಭವ! ಸ್ವತಃ ಅಕ್ಷಯ್ ಸ್ಪಷ್ಟನೆ!

ಬಾಲಿವುಡ್ ಸುಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್ ಅವರ ವಿಷಾದ ಅಂತ್ಯದ ನಂತರ ಬಾಲಿವುಡ್ ನಲ್ಲಿ ಇದರ ಕಾರಣ ಏನಿರಬಹುದು? ಅಷ್ಟಕ್ಕೂ ಅವರು ಇಂತಹ ನಿರ್ಣಯ ತಗೆದುಕೊಂಡಿದ್ದೇಕೆ? ಹೀಗೆ ಹಲವಾರು ಪ್ರಶ್ನೆಗಳು ಉದ್ಭವಗೊಂಡಿವೆ. ಸುಶಾಂತ್ ಅವರು ತುಂಬಾ ದಿನಗಳ ವರೆಗೆ ಡಿಪ್ರೆಶನ್ ನಲ್ಲಿದ್ದರು, ಅಲ್ಲದೆ ಈ ಸಂಗತಿಯನ್ನು ಕೆಲವು ಬಾಲಿವುಡ್ ಸ್ಟಾರ್ಸ್ ಸಹ ಒಪ್ಪಿಕೊಂಡಿದ್ದಾರೆ ಆದರೆ ಇದುವರೆಗೂ ಯಾವುದೇ ಕಾರಣ ಸ್ಪಷ್ಟವಾಗಿ ತಿಳಿದಿಲ್ಲ.

ಸುಶಾಂತ್ ಅವರಿಗೆ ಕೆಲವು ಸಲ ಫಿಲ್ಮ್ ಇಂಡಸ್ಟ್ರಿ ಹೋರಗಿನವರಂತೆ ಕಂಡಿದ್ದಾರೆಂದು ತಮ್ಮೊಳಗೆ ತಾವೇ ನೊಂದುಕೊಳ್ಳುತ್ತಿದ್ದರು. ಈ ತರಹ ಅನುಭವಿಸಿದ ನಟರಲ್ಲಿ ಸುಶಾಂತ್ ಅವರಷ್ಟೇ ಅಲ್ಲ ಇವರಿಗಿಂತ ಮೊದಲು ಅಕ್ಷಯ್ ಕುಮಾರ್ ಅವರು ಸಹ ಇಂತಹ ಪರಸ್ಥಿತಿಗಳನ್ನು ಅನುಭವಿಸಿದ್ದಾರೆ. ಆದರೆ ಅವರು ಯಾವುದೇ ಕಠಿಣ ಪರಸ್ಥಿತಿಗಳಿಗೆ ಹೆದರದೆ ಅವುಗಳನ್ನು ಅಂಜದೆ ಎದುರಿಸುತ್ತ ಇಂದು ತಮ್ಮ ಎತ್ತರದ ಸ್ಥಾನವನ್ನು ತಲುಪಿದ್ದಾರೆ ಎಂದು ಸ್ವತಃ ಅಕ್ಷಯ ಕುಮಾರ ಅವರು ತಿಳಿಸಿದ್ದಾರೆ. ಅವರು ತಮ್ಮ ಚಲನಚಿತ್ರಗಳಿಗೆ ತಾವೇ ನಿರ್ದೇಶನ ಮಾಡಿ ಅಭಿನಯಿಸಿ ಚಲನಚಿತ್ರಗಳು ನಿರ್ಮಾಣ ಮಾಡಿದರು ಆದರೆ ಅದನ್ನು ರಿಲೀಸ್ ಮಾಡುವ ಸಲುವಾಗಿ ಬಾಲಿವುಡ್ ನಲ್ಲಿ ಸ್ಲಾಟ್ ಮಾತ್ರ ಸಿಗುತ್ತಿರಲಿಲ್ಲ.

ಹೋಳಿ, ದೀಪಾವಳಿ , ಈದ್ ಸಮಯದಲ್ಲಿ ತಮ್ಮ ಫಿಲ್ಮ್ ಬಿಡುಗಡೆ ಮಾಡಲು ಬಯಸುತ್ತಿದ್ದರು ಏಕೆಂದರೆ ಈ ರಜಾದಿನಗಳಲ್ಲಿ ಜನರು ತಮ್ಮ ಚಿತ್ರಗಳನ್ನು ನೋಡಿ ಆನಂದಿಸಬೇಕು ಅಂತ. ಕೆಲವು ದೊಡ್ಡ ಪ್ರೊಡಕ್ಷನ್ ಹಾವುಸ್ ಗಳು ತಮ್ಮ ಫಿಲ್ಮ್ ಇರದಿದ್ದರೂ ಸಹ ತಮಗಾಗಿ ಸ್ಕ್ರೀನಿಂಗ್ ಬುಕ್ ಮಾಡಿಕೊಂಡು ಇಡುತ್ತಿದ್ದರು ಆದುದರಿಂದ ಅಕ್ಷಯ ಕುಮಾರ ಅವರಿಗೆ ತಮ್ಮ ಚಿತ್ರಗಳ ಬಿಡುಗಡೆಯ ದಿನಾಂಕ ಮುಂದೂಡಬೇಕಾಗುತ್ತಿತ್ತು.

ಅಕ್ಷಯ ಅವರ ಚಿತ್ರಗಳು ತುಂಬಾ ಕಷ್ಟದಿಂದ ಬಿಡುಗಡೆ ಯಾಗುತ್ತಿದ್ದವು. ಆದರೆ ಇಂತಹ ಸಮಯದಲ್ಲಿ ಅವರು ಸೋಲನ್ನು ಒಪ್ಪಿಕೊಳ್ಳದೆ ತಮ್ಮ ಚಿತ್ರಗಳಲ್ಲಿ ನಟನೆ ಮಾಡುತ್ತ ಇಂದು ಬಾಲಿವುಡ್ ನ ಎಲ್ಲಕ್ಕಿಂತ ದೊಡ್ಡ ಸ್ಟಾರ್ ಗಳಲ್ಲಿ ಒಬ್ಬರು ಆಗಿದ್ದಾರೆ. ಅಷ್ಟೇ ಅಲ್ಲ ಇಂದು ಅವರ ಪ್ರತಿಯೊಂದು ಚಿತ್ರ ಸುಮಾರು 100 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸುತ್ತಿವೆ. ತಮ್ಮ ಕಷ್ಟದ ದಿನಗಳನ್ನು ಯಶಸ್ಸಿನ ದಿನಗಳಲ್ಲಿ ಪರಿವರ್ತನೆ ಮಾಡಿದ್ದಾರೆ. ಇಂದಿಗೂ ಕೂಡಾ ತಮ್ಮ ಸ್ವಂತದ ಸಾಮರ್ಥ್ಯವನ್ನೇ ನಂಬಿ ಮುನ್ನಡೆಯುತ್ತಿದ್ದಾರೆ.