Articles

ತಾಯಿ-ಮಗ ಕೂಡಿರುತ್ತಿದ್ದ ತಗಡಿನ ಶೆಡ್ ನಲ್ಲಿ ಸಿಕ್ಕವು, ಕೋಟಿ ಕೋಟಿ ರೂಪಾಯಿ! ಇಬ್ಬರ ಪರಾಕ್ರಮ ಕೇಳಿ ಬೆಚ್ಚಿ ಬಿದ್ದ ಪೊಲೀಸರು..

ಮನಿಗಾಂವ್ : ಸದ್ಯ ಮಧ್ಯಪ್ರದೇಶದ ಕೋರ್ಟ್ ನಲ್ಲಿ ಶಿಕ್ಷೆಗೆ ಗುರಿಯಾದ ತಾಯಿ ಮತ್ತು ಮಗ ಇಬ್ಬರ ಕೇಸೊಂದು ತುಂಬಾನೇ ಸುದ್ದಿ ಮಾಡಿದೆ.

ಇಬ್ಬರೂ ಕೂಡಿ ಮನೆಯಲ್ಲಿ ಸುಮಾರು 10 ಕೋಟಿ ರೂಪಾಯಿಗಳವರೆಗೆ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿದ್ದರು. ನಂತರ ಈ ನೋಟುಗಳನ್ನು ಅಂಡರ್ವಲ್ಡ್ ಸಂಬಂಧಿತ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಕೋರ್ಟ್ ಈಗ ತಾಯಿ ಮತ್ತು ಮಗನಿಗೆ ಶಿಕ್ಷೆಯನ್ನು ನೀಡಿದೆ. ಸುದೀರ್ಘ ತನಿಖೆಯ ನಂತರ ಕೋರ್ಟ್ ಇಬ್ಬರಿಗೂ ಶಿಕ್ಷೆ ಜಾರಿಗೊಳಿಸಿದೆ.

ದಿ ಮಿರರ್ ನೀಡಿದ ವೃತ್ತದ ಪ್ರಕಾರ ತಾಯಿ ಮಂಜು ಮತ್ತು ಮಗ ಸೂರಜ್ ಇಬ್ಬರೂ ಕೂಡಿ ತಮ್ಮ ಮನೆಯಲ್ಲಿ ಸುಮಾರು 10 ಕೋಟಿ ರೂಪಾಯಿಗಳವರೆಗೆ ನಕಲಿ ನೋಟುಗಳನ್ನು ಮುದ್ರಿಸಿದ್ದರು. ಪೊಲೀಸರು ಮತ್ತು (NCCA) ನ್ಯಾಷನಲ್ ಕೌಂಟರ್ಫಿಟ್ ಕರೆನ್ಸಿ ಏಜೆನ್ಸಿ ಇಬ್ಬರೂ ಕೂಡಿ ನೋಟುಗಳು ಚಲನೆಯಲ್ಲಿ ಬಂದಾಗ ತನಿಖೆ ಮಾಡಿದಾಗ ಇದರ ಸುಳಿವು ಹತ್ತಿದೆ.

ನಕಲಿ ನೋಟುಗಳನ್ನು ಉಪಯೋಗಿಸಲು ನ್ಯಾಷನಲ್ ಕ್ರಾಯಿಮ್ ಏಜೆನ್ಸಿ ಸೂಚನೆ ನೀಡಿತ್ತು. ಆರೋಪಿಯ ಮನೆಯಲ್ಲಿ ರೇಡ್ ಹಾಕಿದಾಗ ಅಧಿಕಾರಿಗಳಿಗೆ 2 ಕೋಟಿ ರೂಪಾಯಿಗಳು ದೊರಕಿದವು. ಇದರ ಹೊರತಾಗಿ ಬೇರೆ ಸ್ಥಳದಲ್ಲಿ ಅಧಿಕಾರಿಗಳಿಗೆ ಡಾಯ್ ಪ್ರಿಂಟರ್ ಸಿಕ್ಕಿತು. ಇದರ ಉಪಯೋಗ ನಕಲಿ ನೋಟುಗಳನ್ನು ಮುದ್ರಿಸಲು ಆಗುತ್ತದೆ.

ತನಿಖೆಯಲ್ಲಿ ತಾಯಿ ಮಗ ಇಬ್ಬರೂ ಕೂಡಿ ಒಟ್ಟು ಸುಮಾರು 10 ಕೋಟಿ ರೂಪಾಯಿಗಳಷ್ಟು ನಕಲಿ ನೋಟುಗಳನ್ನು ಮುದ್ರಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಈ ನೋಟುಗಳನ್ನು ತಪ್ಪು ಮಾರ್ಗಕ್ಕಾಗಿ ಉಪಯೋಗಿಸಲಾಗಿದೆ ತಿಳಿದು ಬಂದಿದೆ. ಈ ಎಲ್ಲ ಕಾರಣಕ್ಕಾಗಿ ತಾಯಿ ಮಂಜು ಇವಳಿಗೆ 6 ವರೆ ವರ್ಷ ಮತ್ತು ಮಗ ಸೂರಜ್ ಗೆ 2 ವರ್ಷ ಬಾಲ ಕಾರಾಗೃಹದಲ್ಲಿ ಇಡಲಾಗಿದೆ.