ಎಮ್ಮೆಗೆ ಹೆದರಿ ಕಾಡಿನ ರಾಜ ಏರಿದನು ಸಣಕಲು ಮರ; ಪಕ್ಕಾ ಫಜೀತಿಗೆ ಒಳಗಾದ ಸಿಂಹ! ಬಚಾವಾದ ಬಗೆ ನೋಡಿ…
ಕಾಡಿನ ಜೀವನ ತುಂಬಾ ವಿಚಿತ್ರವಾಗಿದೆ. ಇಲ್ಲಿ ಕೆಲವೊಮ್ಮೆ ಶಕ್ತಿಊಟ ಜೀವಗಳು ಸಹ ಮಣ್ಣುಮುಕ್ಕುವುದು ಸಹಜ. ಪ್ರಸ್ತುತ ವಿಡಿಯೋದಲ್ಲಿ ಕಾಡಿನ ರಾಜನೇ ಪೇಚಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಹೇಗೆ ನೋಡಿ.
ಕಾಡಿನಲ್ಲಿ ಹೆಜ್ಜೆ ಹೆಜ್ಜೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿ ಬರಿ ಸಾಧು ಪ್ರಾಣಿಗಳಿಗೆ ಅಷ್ಟೇ ಗಂಡಾಂತರ ಎಂದು ತಿಳಿಯಬೇಡಿ. ಬೇಟೆಯಲ್ಲಿ ಕಿಂಗ್ ಆದ ಕಾಡಿನ ರಾಜನಿಗೂ ಒಮ್ಮೊಮ್ಮೆ ಇಲ್ಲಿ ಕಷ್ಟ ತಪ್ಪಿದ್ದಲ್ಲ. ಈ ವಿಡಿಯೋದಲ್ಲಿ ಎಮ್ಮೆಗಳಿಗೆ ಹೆದರಿ ಮರದ ಮೇಲೆ ನಿಂತ ಕಾಡಿನ ರಾಜನ ಅವಸ್ಥೆಯನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಕಾಡಿನಲ್ಲಿ ಬಲಶಾಲಿ ಪ್ರಾಣಿ ಎಂದು ಸಿಂಹವನ್ನು ತಿಳಿಯಲಾಗುತ್ತದೆ. ಆದರೆ ಸಿಂಹವೇ ಇಲ್ಲಿ ತೀರ ಅಸಹಾಯಕ ಅವಸ್ಥೆಯಲ್ಲಿ ಕಂಡುಬರುತ್ತಿದೆ. ಕೆಳಗೆ ನಿಂತ ಎಮ್ಮೆಗಳ ಗುಂಪನ್ನು ನೋಡಿ ಸಿಂಹವು ಮರದ ಮೇಲೆ ನಿಂತ ಅವಸ್ಥೆಯನ್ನು ನೋಡಿದರೆ ಅದು ತುಂಬಾ ಹೆದರಿದಂತೆ ಕಂಡು ಬರುತ್ತಿದೆ. ಇತ್ತ ಅದಕ್ಕೆ ಹಿಂದೆ ಸರಿಯಲು ಬರದೇ, ಹೆದರಿ ಕೆಳಗೆ ಇಳಿಯಲು ಸಾಧ್ಯವಾಗದೆ ಮಧ್ಯದಲ್ಲಿಯೇ ನಿಂತು ಪರಿತಪಿಸುತ್ತಿದೆ. ಸ್ವಲ್ಪ ಸಮಯದ ನಂತರ ಎಮ್ಮೆಗಳು ಶಾಂತವಾಗಿ ಬದಿಗೆ ಸರಿದ ಮೇಲೆ ಸಿಂಹವು ತಕ್ಷಣ ಮರದಿಂದ ಇಳಿದು ಬದುಕಿದೆಯಾ ಬಡ ಜೀವವೇ ಎನ್ನುತ್ತಾ ಅಲ್ಲಿಂದ ಪಲಾಯನ ಮಾಡಿದೆ. ಪಲಾಯನ ಮಾಡುವಾಗ ಮತ್ತೆ ಎಮ್ಮೆಯ ಮೇಲೆ ದರ್ಪ ತೋರಿಸಿದೆ. ಅದೇ ಕ್ಷಣ ಎಮ್ಮೆಯೊಂದು ತೀವ್ರವಾಗಿ ದಾಳಿ ಮಾಡಲು ಬರುತ್ತಲೇ ಸಿಂಹ ಮಾತ್ರ ಇವುಗಳ ಜೊತೆ ಶತ್ರುತ್ವ ಬೇಡವೇ ಬೇಡ ಎಂದು ಅಲ್ಲಿಂದ ಓಡಿಹೋಗಿದೆ.
ನೋಡಿ ಈ ವಿಡಿಯೋ…
ಪ್ರಸ್ತುತ ಈ ವಿಶೇಷವಾದ ವಿಡಿಯೋವನ್ನು ಕೀನ್ಯಾದ ಮಸಾಯಿ ಮಾರಾ ಅರಣ್ಯದಿಂದ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಎರಡೇ ಎರಡು ದಿನಗಳಲ್ಲಿ ಒಂದು ಮಿಲಿಯನ್ ಗಳವರೆಗೆ ವೀಕ್ಷಣೆಯನ್ನು ಪಡೆದಿದೆ.