ಸ್ಪೇಷಲ್ Video; ಅಕ್ಕ ಹೇಳಿದ ಪಾಠ ಚಾಚೂತಪ್ಪದೆ ಕ್ಷಣದಲ್ಲಿ ಕ್ಯಾಚ್ ಮಾಡಿದ ಹಸುಗೂಸು..!
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳು ವಿಡಿಯೋಗಳು ನೇಟಿಜನ್ಸ್ ಗಳಿಗೆ ಮನರಂಜನೆಯನ್ನು ನೀಡುತ್ತಲೇ ಇರುತ್ತವೆ. ಈ ಪ್ರತಿಯೊಂದು ವಿಡಿಯೋ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾರಣ ಪ್ರತಿಯೊಬ್ಬರ ಇಷ್ಟ ಬೇರೆ ಬೇರೆಯಾಗಿರುತ್ತದೆ. ಆದರೆ ಮಕ್ಕಳ ವಿಡಿಯೋಗಳ ವಿಷಯಕ್ಕೆ ಬಂದಾಗ ಹೆಚ್ಚು ಕಡಿಮೆ ಎಲ್ಲರೂ ಈ ವಿಡಿಯೋಗಳನ್ನು ಇಷ್ಟಪಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದ ಪುಟಾಣಿಗಳ ಸುಂದರವಾದ ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನಿಜವಾಗಿಯೂ ನಿಮ್ಮ ಹೃದಯ ಗೆಲ್ಲಬಹುದೆಂದು ನಮ್ಮ ಅನಿಸಿಕೆ.
ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯ ನೋಡುವನಿಗೆ ನಿಜಕ್ಕೂ ಮೋಹಕವೆನಿಸುತ್ತದೆ. ಇಲ್ಲಿ ಪುಟ್ಟ ಅಕ್ಕ ತನ್ನ ಪುಟಾಣಿ ತಮ್ಮನಿಗೆ ಒಂದು ಕಾಲುಗಳನ್ನು ಮೇಲಕ್ಕೆ ಎತ್ತುವ ಪಾಠ ಹೇಳಿಕೊಡುತ್ತಿದ್ದಾಳೆ. ವಿಶೇಷವೆಂದರೆ ಈ ಪುಟಾಣಿ ಹಸಿಗೂಸು ತನ್ನ ಅಕ್ಕ ಹೇಳಿದ ಪಾಠವನ್ನು ಆಲಿಸಿ, ಮತ್ತೆ ಅಕ್ಕಳ ಕಡೆಗೆ ಚೆನ್ನಾಗಿ ನೋಡಿ ಚಾಚು ತಪ್ಪದೆ ಹಾಗೆಯೇ ಮಾಡಿ ತೋರಿಸುತ್ತದೆ. ಕ್ಯಾಮೆರಾ ಮಾತ್ರ ತುಂಬಾ ನೈಜವಾಗಿ ಈ ದೃಶ್ಯವನ್ನು ಸೆರೆ ಹಿಡಿದಿದೆ. ಇಬ್ಬರು ಪುಟಾಣಿಗಳ ಸುಂದರವಾದ ಈ ಪಾಠದ ಜೊತೆಗಿನ ಆಟ ನಿಜಕ್ಕೂ ನೋಡುಗನಿಗೆ ವಿಶೇಷವೆನಿಸುತ್ತದೆ.
ವೀಡಿಯೋ ನೋಡಿ
View this post on Instagram
ಪ್ರಸ್ತುತ ಈ ಸುಂದರವಾದ ಮಕ್ಕಳ ವಿಡಿಯೋವನ್ನು instagram ನಲ್ಲಿ ಡ್ಯಾಡಿಸ್ ಗರ್ಲ್ ಅಭಿಜ್ಞಾ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಎಲ್ಲರಿಗೂ ಸಾಕಷ್ಟು ಇಷ್ಟವಾದ ಕಾರಣ 5.4 ಮಿಲಿಯನ್ ಗಳವರೆಗೆ ವೀಕ್ಷಣೆಯನ್ನು ಪಡೆದಿದ್ದು ನಾಲ್ಕುವರೆ ಲಕ್ಷ ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.