Video; ಅರ್ಜೆಂಟಿನ ಫುಟ್ಬಾಲ್ ವರ್ಲ್ಡ್ ಕಪ್ ಗೆದ್ದ ಖುಷಿಯಲ್ಲಿ ಫ್ಯಾನ್ ಆದನು ಔಟ್ ಆಫ್ ಕಂಟ್ರೋಲ್; ಆತನ ಅವಾಂತರ ಆಯಿತು ಆತನಿಗೆ ತಿರುಗುಬಾಣ.
ಭಾರತದಲ್ಲಿ ಕ್ರಿಕೆಟ್ ಹುಚ್ಚು ಇರುವ ತರ ವಿದೇಶಗಳಲ್ಲಿ ಫುಟ್ಬಾಲ್ ಹುಚ್ಚು ತುಂಬಾ ಹೆಚ್ಚಿದೆ. ಜಗತ್ತಿನಲ್ಲಿ ಎಲ್ಲಕ್ಕೂ ಹೆಚ್ಚು ಇಷ್ಟಪಡುವ ಆಟವೆಂದರೆ ಫುಟ್ಬಾಲ್ ಮಾತ್ರ. ಕೆಲವೇ ದಿನಗಳ ಹಿಂದೆ ಫುಟ್ಬಾಲ್ ಮಹಾಮೇಳ ಕತಾತರ್ನಲ್ಲಿ ಸಂಪನ್ನವಾಯಿತು. ಇಲ್ಲಿ ಅನೇಕ ರೋಚಕ ಫಲಿತಾಂಶಗಳು ಹೊರ ಬಿದ್ದವು. ಮೊದಲ ಹಂತದ ಪಂದ್ಯದಲ್ಲಿ ಅರ್ಜೆಂಟಿನ ತಂಡ ಸೌದಿ ಅರೇಬಿಯಾದಿಂದ ಸೋತು ಮುಖಭಂಗ ಅನುಭವಿಸಿದಾಗ ಅರ್ಜೆಂಟಿನಾ ತಂಡ ವರ್ಲ್ಡ್ ಕಪ್ ಮುಕುಟ ತನ್ನ ಮಡಿಗೇರಿಸಿಕೊಳ್ಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.
ಸದ್ಯ ಅರ್ಜೆಂಟಿನ ತಂಡದ ಫ್ಯಾನ್ ಒಬ್ಬ ಅರ್ಜೆಂಟೀನಾ ತಂಡವು ವರ್ಲ್ಡ್ ಕಪ್ ಗೆದ್ದ ನಂತರ ಖುಷಿಯಲ್ಲಿ ಫುಲ್ ಔಟ್ ಆಫ್ ಕಂಟ್ರೋಲ್ ಆಗ್ಬಿಟ್ಟಿದ್ದಾನೆ. ಆತನ ಸಂತೋಷಕ್ಕೆ ಎಲ್ಲೆಯೇ ಇಲ್ಲದಂತಾಗಿರುವ ಹಾಗೆ ಕಂಡುಬರುತ್ತದೆ. ಇದೇ ಸಂತೋಷದ ಭರದಲ್ಲಿ ಆತ ಒಂದು ಅ#ನಾಹುತವನ್ನು ಮಾಡಿಕೊಂಡಿದ್ದಾನೆ. ಈ ಕ್ರಿಕೆಟ್ ಫ್ಯಾನ್ ನನ್ನ ಫೇವರೆಟ್ ತಂಡ ಅರ್ಜೆಂಟೀನಾ ವರ್ಲ್ಡ್ ಕಪ್ ಗೆದ್ದ ನಂತರ ಸಂತೋಷದ ಭರದಲ್ಲಿ ಮೈ ಮೇಲಿನ ಟೀ ಶರ್ಟ್ ತೆಗೆದು ನಾಗಾಲೋಟದಲ್ಲಿ ಸ್ವಿಮಿಂಗ್ ಪೂಲ್ ಕಡೆಗೆ ಓಡಿದ್ದಾನೆ. ದೊಡ್ಡದಾದ ಹಾಲ್ ಗೆ ಅಳವಡಿಸಿದ ಗೇಟು ಸಂಪೂರ್ಣವಾಗಿ ಪಾರದರ್ಶಕ ಗಾಜಿನದ್ದಾಗಿರುವ ಕಾರಣ ಆತನಿಗೆ ಆನಂದದ ಭರದಲ್ಲಿ ಅದು ಕಾಣಿಸಲೇ ಇಲ್ಲ, ಅಥವಾ ಅದು ಆತನ ದೃಷ್ಟಿಗೆ ಬಿದ್ದಿಲ್ಲ. ಸಹಜವಾಗಿ ತೆರೆದ ಬಾಗಿಲೇ ಇರಬೇಕೆಂದು ನಾಗಾನೋಟದಲ್ಲಿ ಓಡಲು ಹೋಗಿ ಗಾಜಿಗೆ ಜೋರಾಗಿ ಡಿಕ್ಕಿ ಹೊಡೆದು ಅಲ್ಲಿಯೇ ಬಹುಶಃ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ಫುಟ್ಬಾಲ್ ಹವ್ಯಾಸಿ ಫ್ಯಾನ್ ನ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ instagram ನಲ್ಲಿ zanelamemes ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 3.2 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.