ತನ್ನ ಅಜ್ಜಿಯನ್ನು ಸ್ಕೂಟರ್ ಮೇಲೆ ಕೂಡಿಸಿಕೊಂಡು ತುಂಬಾ ಸ್ಪೀಡ್ ಆಗಿ ಹೊರಟಿದ್ದ ಮೊಮ್ಮಗ ಮುಂದೇನಾಯ್ತು ವಿಡಿಯೋ ನೋಡಿ!!!
ಅಜ್ಜಿ ಅಥವಾ ಅಜ್ಜ ಮೊಮ್ಮಗನ ನಡುವಿನ ಬಂಧದ ಕುರಿತು ವಿವರಿಸಳು ಸಾಲದು. ತಂದೆ ತಾಯಿಗಳ ನಂತರ ಮಕ್ಕಳನ್ನು ಹೇಚ್ಚಾಗಿ ಪ್ರೀತಿಸುವ ಜೀವಿಗಳೆಂದರೇ ಅವರೇ ಅಜ್ಜ ಅಜ್ಜಿ. ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜಿ ಹೇಳಿರುವ ಕಥೆಗಳನ್ನು ನೆನಪಿಸಿ ಕೊಂಡರೆ ಎಷ್ಟೊಂದು ಸಂತೋಷ ವಾಗುತ್ತೆ ಅಂದಿನ ಕಾಲದಲ್ಲಿ ರಾತ್ರಿ ಯಾದರೆ ಸಾಕು ಎಲ್ಲರೂ ಜೊತೆಗೂಡಿ ಅಜ್ಜಿಯ ಅಥವಾ ಅಜ್ಜನ ಹತ್ತಿರ ಹೋಗಿ ಕಥೆಗಳನ್ನು ಮತ್ತು ಒಗಟುಗಳು ಕೇಳುತ್ತಿದ್ದೆವು. ಅಂದಿನ ಅದೆಷ್ಟೋ ಕಥೆ ಹಾಗೂ ಒಗಟುಗಳು ಕೆಲವೊಬ್ಬರಿಗೆ ಇನ್ನೂ ನೆನಪಿನಲ್ಲಿರುತ್ತವೆ. ಸಾಮಾನ್ಯವಾಗಿ ಅಜ್ಜಿ ಮೊಮ್ಮಕ್ಕಳ ನಡುವಿನ ಪ್ರೀತಿ ಹೇಳತೀರದು. ಅಜ್ಜಿ ತೋರುವ ಪ್ರೀತಿ, ಅವಳು ಕೊಡುವ ದುಡ್ಡು, ಕೊಡುವ ತಿಂಡಿ ಇವುಗಳ ಅನುಭವ ಇಂದಿನ ಪೀಳಿಗೆ ಅನುಭವಿಸಲು ಸಾಧ್ಯವಿಲ್ಲ ಏಕೆಂದರೆ ಇಂದು ಬರೀ ಮೊಬೈಲ್ ಇದ್ದರೆ ಸಾಕು ಯಾವ ತಂದೆತಾಯಿಯರ ಅಥವಾ ಅಜ್ಜಿ ಅಜ್ಜರು ಬೇಕಾಗಿಲ್ಲ.
ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಅಜ್ಜಿ ಮೊಮ್ಮಗನ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ಅಜ್ಜಿ ಮೊಮ್ಮಗನ ಮೇಲಿಟ್ಟಿರುವ ವಿಶ್ವಾಸ ,ನಂಬಿಕೆ, ಪ್ರೀತಿ ಯಾವ ಪರಿಗೆ ಇದ್ದಿರಬಹುದು ಎಂದು ತಿಳಿದು ಬರುತ್ತದೆ. ಅಲ್ಲದೆ ಮೊಮ್ಮಗನನ್ನು ಅಜ್ಜಿ ಯಾವ ರೀತಿ ಪ್ರೋತ್ಸಾಹ ನೀಡುತ್ತಾಳೆ ಎಂಬುದು ಸಹ ಈ ವಿಡಿಯೋದಲ್ಲಿ ನೀವು ನೋಡಬಹುದು.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಜ್ಜಿ ಮೊಮ್ಮಗ ಇಬ್ಬರು ಜೊತೆಗೂಡಿ ಒಂದು ಲುನಾ(ಸ್ಕೂಟಿ)ದ ಮೇಲೆ ಹೊರಟಿರುತ್ತಾರೆ. ಆದರೆ ವಿಶೇಷ ವೇನೆಂದರೆ ಆ ಬೈಕು ನಡೆಸುವ ಮೊಮ್ಮಗನಿಗೆ ಕಾಲು ಸಹ ನೆಲಕ್ಕೆ ತಾಗುವದಿಲ್ಲ ಅಷ್ಟೊಂದು ಸಣ್ಣ ಹುದುಗನಿದ್ದಾನೆ. ಆತನು ಬೈಕ್ ನಡೆಸುವ ಬಗೆ ನೋಡಿದರೆ ಧೂಮ್ ಸಿನಿಮಾದಲ್ಲಿ ಯಾವ ರೀತಿ ಹೀರೋ ಬೈಕು ನಡೆಸುತ್ತಾನೆ ಆ ರೇಂಜ್ ನಲ್ಲಿ ಈತನು ಸಹ ಬೈಕ್ ಓಡಿಸುತ್ತೀರುತ್ತಾನೆ ಆ ಬೈಕ್ ಹಿಂದುಗಡೆ ಕುಳಿತ ಅಜ್ಜಿ ಸಹ ಸ್ವಲ್ಪವೂ ಹೆದರದೆ ಮೊಮ್ಮಗನನ್ನು ಬೈಕ್ ಇನ್ನಷ್ಟು ಜೋರಾಗಿ ಓಡಿಸಲು ಪ್ರೋತ್ಸಾಹ ನೀಡುತ್ತಾಳೆ. ಆತನ ಬದಿಯಿಂದ ಹೋಗುತ್ತಿರುವ ವ್ಯಕ್ತಿ ಈ ಎಲ್ಲ ಘಟನೆಯ ವಿಡಿಯೋ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಾನೆ. ಅಲ್ಲದೆ ಹುಡುಗನನ್ನು ಸಾವಕಾಶವಾಗಿ ನಡೆಸಲು ಹೇಳುತ್ತಾನೆ ಆದರೂ ಸಹ ಆತ ಜೋರಾಗಿ ಓಡಿಸುತ್ತ ಇವರನ್ನು ಹಿಂದಕ್ಕೆ ಬಿಟ್ಟು ಮುಂದೆ ಹೋಗುತ್ತಾನೆ. ಈ ವಿಡಿಯೋ ನೋಡಿದರೆ ಅಬ್ಬಾ ಎಂಥ ಧೈರ್ಯ ವೆಂದು ನೀವೇ ಹೇಳುವಿರಿ.
ವೀಡಿಯೋ ನೋಡಿ .
View this post on Instagram
ಪ್ರಸ್ತುತ ವೈರಲ್ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ aj____boy___aj ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದ್ದು. ಇದುವರೆಗೆ ಇದನ್ನು ಸುಮಾರು ಎರಡು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಸುಮಾರು ಆರೂವರೆ ಲಕ್ಷಕ್ಕಿಂತ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.