Video; PAK vs NZ: ಡರಿಲ್ ಮಿಚೆಲ್ ಸ್ಲಿಪ್ ನಲ್ಲಿ ಆಕಳಿಸುತ್ತ ನಿಂತಾಗಲೇ ಬಂತು ಪಾಕ್ ನಾಯಕ ಬಾಬರ್ ಆಜಮ್ ಕ್ಯಾಚ್..!🥱🥱
ಕ್ರಿಕೆಟ್ ನಲ್ಲಿ “ಕ್ಯಾಚೆಸ್ ವಿನ್ ಮ್ಯಾಚೆಸ್” ಎಂದು ಹೇಳಲಾಗುತ್ತದೆ. ಒಂದೇ ಒಂದು ಕ್ಯಾಚ್ ಕೈಚೆಲ್ಲಿದರೆ ಮುಗಿಯಿತು ಪಂದ್ಯದ ನಿರ್ಣಯವೇ ಸಂಪೂರ್ಣ ಬದಲಾಗಿ ಬಿಡುತ್ತದೆ. ಅದರಲ್ಲೂ ಟೆಸ್ಟ್ ಪಂದ್ಯಗಳಲ್ಲಿ ಈ ಕ್ಯಾಚ್ ಗಳು ತುಂಬಾ ಮಹತ್ವದ ಘಟಕಗಳಾಗಿ ಪರಿಣಮಿಸುತ್ತವೆ. ಇನ್ನು ಸ್ಲಿಪ್ ನಲ್ಲಿ ನಿಲ್ಲುವ ಆಟಗಾರರಂತೂ ಎಷ್ಟು ಆಕ್ಟಿವ್ ಇದ್ದರೂ ಕಡಿಮೆಯೇ. ಕಾರಣ ಇಲ್ಲಿ ಯಾವಾಗ ಹೇಗೆ ಕ್ಯಾಚ್ ಗಳು ಬರುತ್ತವೆ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ತುಂಬಾ ಅಲರ್ಟ್ ಆಗಿರಬೇಕು.
ಸದ್ಯ ಇಲ್ಲಿಯ ವಿಡಿಯೋದಲ್ಲಿ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ವಿಶೇಷ ದೃಶ್ಯವೊಂದು ನೋಡಲು ಸಿಗುತ್ತಿದೆ. ಇಲ್ಲಿ ಸ್ಲಿಪ್ ನಲ್ಲಿ ನಿಂತ ನ್ಯೂಜಿಲ್ಯಾಂಡ್ ತಂಡದ ಆಟಗಾರ ಡೆರಿಲ್ ಮಿಚೆಲ್ ಮೈದಾನದಲ್ಲಿಯೇ ಆಕಳಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ತದನಂತರ ತಕ್ಷಣವೇ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ರ ಕ್ಯಾಚ್ ಮಿಚೆಲ್ ಕಡೆಗೆ ಬರಬೇಕೆ? ಮತ್ತೇನು ನಿದ್ರೆಯಲ್ಲಿದ್ದ ಮಿಚೆಲ್ ಎರಡು ಬಾರಿ ಬಾಲ್ ಕೈಯಲ್ಲಿ ಬಂದರೂ ಕ್ಯಾಚ್ ಹಿಡಿಯುವ ಪ್ರಯತ್ನ ಮಾತ್ರ ಯಶಸ್ಸು ಆಗಲಿಲ್ಲ.
ನೋಡಿ ಈ ವಿಡಿಯೋ…
Daryl Mitchell yawning in the first slip
before dropping a sitter on next ball😅#PAKvNZ pic.twitter.com/xyDv1E8siu— Sʜᴀʀɪϙ (@ShariqHussain_) December 26, 2022
ಪ್ರಸ್ತುತ ಈ ವಿಡಿಯೋ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋದ ಮೊದಲ ಹಂತದಲ್ಲಿಯೇ ಮಿಚೆಲ್ ಆಕಳಿಕೆ ನೀಡುತ್ತಿರುವ ದೃಶ್ಯ ಸ್ಪಷ್ಟವಾಗಿ ಕಂಡು ಬರುತ್ತಿದೆ. ಅದರ ನಂತರದ ಬಾಲ್ ಕ್ಯಾಚ್ ಆಗಿ ಅವರ ಕಡೆ ಬರುವಷ್ಟರಲ್ಲಿ ಮಿಚೆಲ್ ಮಾತ್ರ ಸಂಪೂರ್ಣವಾಗಿ ತಯಾರಿರಲಿಲ್ಲ ಎಂಬುದು ಇಲ್ಲಿ ತಿಳಿದು ಬರುತ್ತದೆ.